ಮಹಾದಾಯಿ ವಿವಾದಲ್ಲಿ ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ– ಶೆಟ್ಟರ್

ಹುಬ್ಬಳ್ಳಿ, ಮಂಗಳವಾರ, 16 ಜನವರಿ 2018 (19:12 IST)

ಮಹಾದಾಯಿ ನೀರಿನ ‌ವಿವಾದದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ‌ಮಾಡುವುದು‌‌ ಅಸಾಧ್ಯ ಎಂದು ವಿಧಾನಸಭೆಯ ವಿರೋಧ ‌ಪಕ್ಷದ‌ ನಾಯಕ‌ ಜಗದೀಶ‌ ಶೆಟ್ಟರ್ ಹೇಳಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಮಂತ್ರಿ ಆಗಿದ್ದಾಗ ತಮ್ಮಿಂದ ವಿವಾದ ಇತ್ಯರ್ಥ ‌ಕಷ್ಟ ಎನಿಸಿದ್ದರಿಂದಲೇ ಮಹದಾಯಿ ನ್ಯಾಯಮಂಡಳಿ‌ ರಚಿಸುವ‌ ಶಿಫಾರಸನ್ನು ಸುಪ್ರೀಂಕೋರ್ಟಿಗೆ ಮಾಡಿದ್ದರು. ಆದ್ದರಿಂದ ಈಗಿನ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿ ಮಧ್ಯಪ್ರವೇಶಿಸುವುದು ಸಾಧ್ಯವಾಗಲ್ಲ ಎಂದಿದ್ದಾರೆ.
 
ಇಂದಿರಾಗಾಂಧಿ, ವಾಜಪೇಯಿ ಅವರು ಹಲವು ‌ನದಿ‌ ವಿವಾದಗಳನ್ನು ‌ಬಗೆಹರಿಸಿದ್ದಾರೆ‌ ಆದರೆ ಇಂದಿನ ‌ಪರಿಸ್ಥಿತಿ ಬೇರೆಯೇ ಆಗಿದೆ. ರಾಜ್ಯ‌ ಕಾಂಗ್ರೆಸ್ ‌ನಾಯಕರು ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸುವತನಕ ವಿವಾದ ಇತ್ಯರ್ಥ ಆಗುವುದಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ‌ರಾಜಕಾರಣ‌‌ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜನಾರ್ಧನರೆಡ್ಡಿ ರಾಜಕೀಯಕ್ಕಿಳಿದರೆ ಹೈ.ಕ ಭಾಗದಲ್ಲಿ ಬಿಜೆಪಿಗೆ 20ಕ್ಕೂ ಅಧಿಕಸ್ಥಾನ– ಶ್ರೀರಾಮುಲು

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಸಕ್ರೀಯ ರಾಜಕಾರಣಕ್ಕೆ ಬಂದರೆ, ಹೈದರಾಬಾದ್ ಕರ್ನಾಟಕ ...

news

ಜಿ.ಪರಮೇಶ್ವರ್ ಲೋಫರ್ ಎಂದ ಬಿಜೆಪಿ ಅಕಾಂಕ್ಷಿ

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಲೋಫರ್ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ...

news

ತಾನು ಏರಿದ ವೇದಿಕೆಯನ್ನು ಗೋಮೂತ್ರ ಹಾಕಿ ಸ್ವಚ್ಛ ಮಾಡಿದ ಬಿಜೆಪಿ ಕಾರ್ಯಕರ್ತರಿಗೆ ಪ್ರಕಾಶ್ ರೈ ಟಾಂಗ್!

ಬೆಂಗಳೂರು: ಇತ್ತೀಚೆಗೆ ಬಲಪಂಥೀಯರ ವಿರುದ್ಧ ಕಿಡಿ ಕಾರುತ್ತಿರುವ ನಟ ಪ್ರಕಾಶ್ ರೈ ವಿರುದ್ಧ ಬಿಜೆಪಿ ...

news

ಸಿಎಂ ಪಾಕಿಸ್ತಾನಕ್ಕೆ ಬೆಂಬಲಿಸುತ್ತಿದ್ದಾರಾ, ಸ್ಪಷ್ಟಪಡಿಸಬೇಕು- ಸಂಸದ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಅವರ ಉಗ್ರವಾದಿ ಹೇಳಿಕೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ...

Widgets Magazine
Widgets Magazine