ಪ್ರಧಾನಿ ಮೋದಿ-ಜಪಾನ್ ಪಿಎಂ ಶಿಂಜೋ ಅಬೆ ರೋಡ್ ಶೋ

ಅಹಮದಾಬಾದ್‌‌, ಬುಧವಾರ, 13 ಸೆಪ್ಟಂಬರ್ 2017 (17:05 IST)

ಭಾರತ ಪ್ರವಾಸಕ್ಕಾಗಿ ಆಗಮಿಸಿರುವ ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆಯವರನ್ನು ಪ್ರಧಾನಮಂತ್ರಿ ಖುದ್ದಾಗಿ ವಿಮಾನ ನಿಲ್ದಾಣದಲ್ಲಿ ಹಾಜರಾಗಿ ಭವ್ಯ ಸ್ವಾಗತ ಕೋರಿದ್ದಾರೆ.
ಜಪಾನ್ ಪ್ರಧಾನಿ ಶಿಂಜೋ ಮತ್ತು ಅವರ ಪತ್ನಿ ಅಕಿ ಅಬೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆವರನ್ನು ಭವ್ಯ ರೀತಿಯಲ್ಲಿ ಸ್ವಾಗತಿಸಿದ ಪ್ರಧಾನಿ ಮೋದಿ, ನಂತರ ದಂಪತಿಗಳೊಂದಿಗೆ ವಿಮಾನನಿಲ್ದಾಣದಿಂದ 8 ಕಿ.ಮೀ ದೂರದಲ್ಲಿರುವ ಸಬರಮತಿ ಆಶ್ರಮದವರೆಗೆ ರೋಡ್ ಶೋ ನಡೆಸಿದರು. 
 
ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೂ ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ದಂಪತಿಗಳ ಬೃಹತ್ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ರಸ್ತೆ ಮಾರ್ಗದಲ್ಲಿ ಶಾಲಾ ಮಕ್ಕಳು ಜಪಾನ್ ಪ್ರಧಾನಿ ದಂಪತಿಗಳಿಗೆ ಶುಭಕೋರಿದರು.
 
ಮೋದಿ ಮತ್ತು ಶಿಂಜೋ ಇಂದು ಅಹ್ಮದಾಬಾದ್‌ನಲ್ಲಿಯೇ ವಾಸ್ತವ್ಯ ಹೂಡಲಿದ್ದು ಪ್ರಧಾನಿ ಮೋದಿ ರಾತ್ರಿ ಔತಣಕೂಟ ಏರ್ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲಿಗೆ ಜಪಾನ್ ಪ್ರಧಾನಿ ಶಿಂಜೋ ಅಬೆ ಚಾಲನೆ ನೀಡಲಿದ್ದು, 2022 ರಲ್ಲಿ ಬುಲೆಟ್ ರೈಲು ಸಂಚಾರ ಸಾಕಾರಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಜಪಾನ್ ಪ್ರಧಾನಿ ರೋಡ್‌ಶೋ ಶಿಂಜೋ ಅಬೆ ಅಕಿ ಅಬೆ ಬುಲೆಟ್ ರೈಲು Pm Modi Japan Pm Road Show Shinzo Abe Aki Abe Bullet Train

ಸುದ್ದಿಗಳು

news

ಗೌರಿ ಲಂಕೇಶ್ ಮನೆ ಸಮೀಪದಲ್ಲೇ ಸಿಕ್ತು ಸಿಮ್ ಇಲ್ಲದ ಮೊಬೈಲ್…?

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆಯಲ್ಲಿ ಗೌರಿ ಲಂಕೇಶ್ ಮನೆ ಸಮೀಪದಲ್ಲಿ ...

news

ಮಹಿಳೆಯ ಮೇಲೆ 20 ಕಾಮುಕರಿಂದ ಗ್ಯಾಂಗ್‌ರೇಪ್

ರಾಂಚಿ: ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಿಳೆಯೊಬ್ಬಳ ಮೇಲೆ 20ಕ್ಕೂ ಹೆಚ್ಚು ಜನರು ಅತ್ಯಾಚಾರವೆಸಗಿದ ...

news

ಜೈಲಿನಲ್ಲೂ ಸೆಕ್ಸ್`ಗಾಗಿ ಹಪಾಹಪಿಸುತ್ತಿರುವ ರಾಮ್ ರಹೀಮ್..!

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ಒಂದೊಂದೇ ಅಕ್ರಮಗಳು ...

news

ಪ್ರಿಯಕರನಿಂದಲೇ ಹತ್ಯೆಯಾದ 17 ವರ್ಷದ ವಿದ್ಯಾರ್ಥಿನಿ

ಹೈದ್ರಾಬಾದ್: ನಗರದ ಹೊರವಲಯದಲ್ಲಿ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು ಆಕೆಯ ...

Widgets Magazine