ಬೆಂಗಳೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ; ಹೇಗಿದೆ ಗೊತ್ತಾ ಬಿಗಿ ಬಂದೋಬಸ್ತ್!

ಬೆಂಗಳೂರು, ಭಾನುವಾರ, 4 ಫೆಬ್ರವರಿ 2018 (07:56 IST)

ಬೆಂಗಳೂರು: ಬೆಂಗಳೂರಿನಲ್ಲಿಂದು ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ  ಸಮಾರೋಪದ ರ್ಯಾಲಿ ನಡೆಯಲಿದೆ. ಮಧ್ಯಾಹ್ನ 3.55ಕ್ಕೆ ಹೆಲಿಕಾಪ್ಟರ್ ಮೂಲಕ ಹೆಬ್ಬಾಳ ಏರ್ ಫೋರ್ಸ್ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ ಮೋದಿ. ಸಂಜೆ 4ಕ್ಕೆ ಅರಮನೆ ಮೈದಾನದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅರಮನೆ ಮೈದಾನದಲ್ಲಿ ದಕ್ಷಿಣಾಭಿಮುಖ ವೇದಿಕೆಯಲ್ಲಿ ಭಾಷಣ ಮಾಡಲಿದ್ದಾರೆ. ಸಂಜೆ 5.35ಕ್ಕೆ ಎಚ್.ಎ.ಎಲ್ ಏರ್ ಪೋರ್ಟ್ ನಿಂದ ದೆಹಲಿಗೆ ಮರಳಿ ಪ್ರಯಾಣಿಸಲಿದ್ದಾರೆ.


ಇನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.11 ಡಿಸಿಪಿ, 33 ಎಸಿಪಿ, ಮೂರು ಸಾವಿರ ಪೊಲೀಸರು, 50 ಕೆ.ಎಸ್.ಆರ್.ಪಿ, 20 ಸಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ. ಸಂಚಾರ ನಿಯಂತ್ರಣಕ್ಕೆ 2 ಡಿಸಿಪಿ, 3 ಎಸಿಸಿ, 1200 ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ಸಮಾವೇಶದತ್ತ ಸುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮಾಧ್ಯಮಕ್ಕೆ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ವಿರುದ್ದ ಹರಿಹಾಯ್ದ ಮಾಜಿ ಸಚಿವ ಹೆಚ್.ವಿಶ್ವನಾಥ್

ಮೈಸೂರು : ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರಿಗೆ ಯಾವುದೇ ಕಾನೂನು ಗೊತ್ತಿಲ್ಲದ್ದ ಕಾರಣ ...

news

ಕೊನೆಯುಸಿರು ಇರುವವರೆಗೆ ಬಿಜೆಪಿ ತೊರೆಯಲ್ಲ– ರಾಮದಾಸ

ಕೊನೆಯುಸಿರು ಇರುವವರೆಗೆ ಬಿಜೆಪಿ ತೊರೆಯುವುದಿಲ್ಲ ಎಂದು ಮಾಜಿ ಸಚಿವ ರಾಮದಾಸ ಘೋಷಿಸಿದ್ದಾರೆ.

news

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿಗೆ ಬೆಂಕಿ ಹಚ್ಚಿ ಕೊಂದ ಅಪ್ರಾಪ್ತ ಹುಡುಗ

ರಾಜಸ್ತಾನ: ಅಪ್ರಾಪ್ತ ವಯಸ್ಸಿನ ಹುಡುಗನೋರ್ವ ಪ್ರೌಢಶಾಲೆಯಲ್ಲಿ ಓದುತ್ತಿರುವ ಬಾಲಕಿಗೆ ಬೆಂಕಿ ಹಚ್ಚಿ ...

news

ಥೈಲ್ಯಾಂಡ್ ಹೆಲ್ ಹಾರರ್ ಪಾರ್ಕ್‌ ನರಕ ದರ್ಶನ....!!!

ಹಿಂದು ಪುರಾಣಗಳಲ್ಲಿ ನಾವು ಸತ್ತ ಮೇಲೆ ಏನಾಗುತ್ತೇವೆ ಎಂಬುದನ್ನು ಗರುಡ ಪುರಾಣದಲ್ಲಿ ಹಿಂದೆಯೇ ...

Widgets Magazine
Widgets Magazine