ಶಾದಿಭಾಗ್ಯದ ಕಾಪಿ ಮಾಡಿದ ಪ್ರಧಾನಿ ಮೋದಿ ಸರಕಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೋಮವಾರ, 7 ಆಗಸ್ಟ್ 2017 (17:32 IST)

ಕೇಂದ್ರ ಸರಕಾರದ ಶಾದಿ ಶುಗುಣ್ ಯೋಜನೆ ರಾಜ್ಯದ ಶಾದಿಭಾಗ್ಯದ ಕಾಪಿಯಾಗಿದೆ ಎಂದು ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಎಲ್ಲಾ ಸಮುದಾಯಗಳ ಏಳಿಗೆಯನ್ನು ಬಯಸುತ್ತದೆ. ಆದರೆ, ವಿಪಕ್ಷಗಳು ಅನಗತ್ಯವಾಗಿ ಸರಕಾರದ ವಿರುದ್ಧ ಆರೋಪ ಮಾಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ರಾಜ್ಯ ಸರಕಾರ ಹಿಂದೆ ಯೋಜನೆ ಜಾರಿ ಮಾಡಿದಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಮತ್ತು ಸಂಸದೆ ಶೋಭಾ ಕರಂದ್ಲಾಜೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದರು. ಇದೀಗ ಏನು ಹೇಳ್ತಾರೆ ಅವರನ್ನೇ ಕೇಳಿ ಎಂದು ತಿರುಗೇಟು ನೀಡಿದ್ದಾರೆ.
 
ರಾಜ್ಯ ಸರಕಾರದ ಹಲವಾರು ಯೋಜನೆಗಳನ್ನು ಕೇಂದ್ರ ಸರಕಾರ ಕಾಪಿ ಮಾಡಿದೆ. ರಾಜ್ಯ ಸರಕಾರ ಅಲ್ಪ ಸಂಖ್ಯಾತರ ಪರವಾಗಿ ಯಾವುದೇ ಯೋಜನೆ ಜಾರಿಗೆ ತಂದರೂ ಬಿಜೆಪಿ ವಿರೋಧಿಸುತ್ತದೆ ಎಂದು ಲೇವಡಿ ಮಾಡಿದರು.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿದ್ದರಾಮಯ್ಯ ಶಾದಿ ಶಗುಣ್ ಶಾದಿಭಾಗ್ಯ ಪ್ರಧಾನಿ ಮೋದಿ ಯಡಿಯೂರಪ್ಪ Shadishagun Shadibhagya Yeddyurappa Pm Modi Cm Siddaramaiah

ಸುದ್ದಿಗಳು

news

ಕಾಂಗ್ರೆಸ್ ಮುಖಂಡ ಮದನ್ ಪಟೇಲ್‌ಗೆ ಕೊಲೆ ಬೆದರಿಕೆ

ಬೆಂಗಳೂರು: ಕಾಂಗ್ರೆಸ್ ಮುಖಂಡ ಮದನ್ ಪಟೇಲ್‌ಗೆ ಸಿ.ವಿ.ರಾಮನ್‌ ನಗರದ ಕಾಂಗ್ರೆಸ್ ಮುಖಂಡ ರಮೇಶ್ ಕೊಲೆ ...

news

ಸತತ 3 ಗಂಟೆಗಳ ಕಾಲ ನಡೆದ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ಅಂತ್ಯ

ಐಟಿ ಅಧಿಕಾರಿಗಳಿಗಳು ಸತತ ಮೂರು ಗಂಟೆಗಳ ಕಾಲ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ ...

news

ಯುವತಿಗೆ ಕಿರುಕುಳ ವಿವಾದ: ಹರಿಯಾಣಾ ಬಿಜೆಪಿ ಅಧ್ಯಕ್ಷನ ರಾಜೀನಾಮೆ

ಚಂಡೀಗಢ್: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪುತ್ರನ ಕೃತ್ಯದಿಂದಾಗಿ ತಂದೆ ಸುಭಾಷ ಬರಾಲಾ ರಾಜೀನಾಮೆ ...

news

ಮುಂಬೈನಲ್ಲಿ ದಾಳಿಗೆ ಉಗ್ರರ ಸಂಚು: ಇಬ್ಬರು ಉಗ್ರರು ಅರೆಸ್ಚ್

ಮುಂಬೈ: ದೇಶದ ವಾಣಿಜ್ಯ ನಗರಿಯಾದ ಮುಂಬೈನಲ್ಲಿ ದಾಳಿ ನಡೆಸುವ ಬಗ್ಗೆ ಉಗ್ರರು ಸಂಚು ರೂಪಿಸಿರುವುದು ...

Widgets Magazine