Widgets Magazine
Widgets Magazine

ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಮೋದಿ

ನವದೆಹಲಿ, ಸೋಮವಾರ, 18 ಸೆಪ್ಟಂಬರ್ 2017 (18:17 IST)

Widgets Magazine

ಮಿಶನ್ 150 ಕನಸು ಕಾಣುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಚೈತನ್ಯ ನೀಡಲು ಸ್ವತಃ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ. ನವೆಂಬರ್ 2ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಬೃಹತ್ ಸಮಾವೇಶದ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.


ನವೆಂಬರ್ 2ರಂದು ನರೇಂದ್ರ ಮೋದಿಯವರೇ ಬೃಹತ್ ಪರಿವರ್ತನಾ ರ್ಯಾಲಿಗೆ ಚಾಲನೆ ನೀಡಲಿದ್ದು, ರಾಜ್ಯದ ವಿವಿಧೆಡೆ 120 ರ್ಯಾಲಿಗಳನ್ನ ನಡೆಸಲು ಬಿಜೆಪಿ ಮುಂದಾಗಿದೆ ಎಂಬ ಮಾಹಿತಿ ಬಂದಿದೆ. ಈ 120 ರ್ಯಾಲಿಗಳಲ್ಲಿ 26 ರ್ಯಾಲಿಗಳಲ್ಲಿ ಸ್ವತಃ ನರೇಂದ್ರಮೋದಿ ಭಾಷಣ ಮಾಡಲಿದ್ದಾರೆ.  2018ರ ಚುನಾವಣಾ ದೃಷ್ಟಿಯಿಂದ ಈ ಬೃಹತ್ ರ್ಯಾಲಿಗಳನ್ನ ನಡೆಸಲಾಗುತ್ತಿದೆ. ಸಮಾವೇಶದಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನ ಜನರ ಮುಂದಿಡಲು ನಿರ್ಧರಿಸಲಾಗಿದೆ.

ಕರ್ನಾಟಕದಲ್ಲೂ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿದು ದಕ್ಷಿಣದಲ್ಲೂ ತಮ್ಮ ಕಮಲ ಅರಳಿಸಲು ಮುಂದಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೊಸ ತಂತ್ರ ರೂಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನ. 2 ರಂದು ಪ್ರಧಾನಿ ಮೋದಿ ರಾಜ್ಯಕ್ಕೆ : ಚುನಾವಣೆ ಪ್ರಚಾರಕ್ಕೆ ಚಾಲನೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 2 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು ಚುನಾವಣೆ ...

news

ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಮುರಿಯುವ ಸಾಧ್ಯತೆ: ಶಿವಸೇನೆ

ಮುಂಬೈ: ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರಕಾರ ರಚಿಸಿರುವ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮುರಿಯುವ ...

news

ತಮಿಳುನಾಡು ಬಿಕ್ಕಟ್ಟು: ರಾಷ್ಟ್ರಪತಿ ಭೇಟಿಯಾದ ತಮಿಳುನಾಡು ರಾಜ್ಯಪಾಲ

ನವದೆಹಲಿ: ತಮಿಳುನಾಡು ರಾಜಕೀಯ ಬಿಕ್ಕಟ್ಟು ಕುರಿತಂತೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಇಂದು ...

news

ಒಂದಿಂಚು ಜಾಗ ಕೂಡಾ ಡಿನೋಟಿಫೈ ಮಾಡಿಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು: ನಾನು ಒಂದಿಂಚು ಜಾಗ ಕೂಡಾ ಡಿನೋಟಿಫೈ ಮಾಡಿಲ್ಲ. ಆದರೆ, ಬಿಜೆಪಿ ನೂರಾರು ಎಕರೆ ಭೂಮಿ ಡಿನೋಟಿಫೈ ...

Widgets Magazine Widgets Magazine Widgets Magazine