ಅತ್ಯಾಚಾರ ಆರೋಪಿಗಳಿಗೆ ತಕ್ಕ ಪಾಠ ಕಲಿಸಿದ ಕೈದಿಗಳು

ಬೆಳಗಾವಿ, ಸೋಮವಾರ, 27 ಫೆಬ್ರವರಿ 2017 (08:17 IST)

ಅಪ್ರಾಪ್ತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೈಲು ಸೇರಿರುವ ನಾಲ್ವರು ಆರೋಪಿಗಳಿಗೆ ಅಲ್ಲಿನ ಕೈದಿಗಳು ಕಲಿಸಿದ ಘಟನೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದೆ.

 
ನಿಮಗೆ ಅಕ್ಕತಂಗಿಯರಿಲ್ಲವೇ? ನಿಮ್ಮದು ಮನುಷ್ಯ ಜನ್ಮವಾ ಎಂದು ಕಿರುಚಾಡಿದ ಕೈದಿಗಳು ಕೋಪದ ಭರದಲ್ಲಿ ನಾಲ್ಕೇಟು ಸಹ ಹಾಕಿದ್ದಾರೆ. ಬಳಿಕ ಈ ನಾಲ್ವರು ಆರೋಪಿಗಳಿಗೆ ಜೈಲಿನ ಶೌಚಾಲಯ ತೊಳೆಯುವ ಕೆಲಸಕ್ಕೆ ಹಚ್ಚಿದ್ದಾರೆ. 
 
ಪ್ರೇಮಿಗಳ ದಿನದ ಮರುದಿನ ಬೆಳಗಾವಿಯ ಹೊರವಲಯದ ಕಾಕತಿ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು, ಸಂಪೂರ್ಣ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಆರೋಪಿಗಳೀಗ ಜೈಲು ಪಾಲಾಗಿದ್ದಾರೆ.
 
ಕೈದಿಗಳು ಹೀನ ಕೃತ್ಯ ಎಸದವರಿಗೆ ಶಿಕ್ಷೆ ನೀಡುತ್ತಿರುವುದು ಇದೇ ಮೊದಲಲ್ಲ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿವಾಹಿತೆ ಮತ್ತು ಆಕೆಯ ಮಕ್ಕಳಿಬ್ಬರನ್ನು ಕೊಂದು ಬರ್ಬರವಾಗಿ ಕೊಂದು ಜೈಲು ಸೇರಿದ್ದ ಪ್ರವೀಣ್ ಎಂಬಾತನಿಗೂ ಸಹ ಕೈದಿಗಳು ತಕ್ಕ ಬುದ್ಧ ಕಲಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೋಣಿ ಮುಗುಚಿ 9 ಸಾವು

ಸಮುದ್ರದಲ್ಲಿ ದೋಣಿ ಮುಗುಚಿದ ಪರಿಣಾಮ 9 ಮಂದಿ ಜಲಸಮಾಧಿಯಾದ ದಾರುಣ ಘಟನೆ ತೂತುಕಡಿ ಜಿಲ್ಲೆಯ ಮನಪಡ್ ಬಳಿ ...

news

ಫೆಬ್ರವರಿ 28 ಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ

ನವದೆಹಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ ಪ್ರಮುಖ ಬ್ಯಾಂಕ್ ಗಳು ಫೆಬ್ರವರಿ 28 ರಂದು ...

news

ಉಪ ಚುನಾವಣೆ ಬಳಿಕ 2 ಸಚಿವ ಸ್ಥಾನ ಭರ್ತಿ: ಸಿಎಂ

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಖಾಲಿಯಿರುವ ಎರಡು ಸಚಿವ ಸ್ಥಾನಗಳನ್ನು ಉಪಚುನಾವಣೆಯ ನಂತರ ಭರ್ತಿ ...

news

ಬಿಜೆಪಿ ಡೈರಿ ಬಿಡುಗಡೆಗೆ ನಾನು ಸಿದ್ಧ: ಕುಮಾರಸ್ವಾಮಿ

ಕೊಡಗು: ರಾಜ್ಯದ ಬಿಜೆಪಿ ನಾಯಕರು ಬಿಜೆಪಿ ಹೈಕಮಾಂಡ್‌ಗೆ ಚೆಕ್ ಮೂಲಕ ಕಪ್ಪ ಸಲ್ಲಿಸಿರುವ ದಾಖಲೆಗಳು ನನ್ನ ...

Widgets Magazine
Widgets Magazine