ವೈದ್ಯರ ಮೇಲೆ ಸಂಸದನ ಹಲ್ಲೆ ಕೇಸ್: ಉ.ಕ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಬಂದ್

ಬೆಂಗಳೂರು, ಶನಿವಾರ, 7 ಜನವರಿ 2017 (11:14 IST)

Widgets Magazine

ವೈದ್ಯರ ಮೇಲೆ ಅನಂತ್ ಕುಮಾರ್ ಹೆಗಡೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ಕೈಗೊಳ್ಳಲಾಗಿದೆ.
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಐಎಂಎ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳನ್ನು 2 ಗಂಟೆಗಳ ಕಾಲ ಬಂದ್ ಮಾಡಲಾಗಿದೆ. ಮುಂಜಾಗ್ರತ ಕ್ರಮವಾಗಿ, ತುರ್ತು ಚಿಕಿತ್ಸೆಗಾಗಿ ಕೆಲವು ಕ್ಲಿನಿಕ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. 
 
ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರ ತಾಯಿ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಸಂಸದರು ಅವರನ್ನು ಟಿಎಸ್‌ಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಇತರ ರೋಗಿಗಳನ್ನು ವೈದ್ಯರು ಪರಿಶೀಲಿಸುತ್ತಿದ್ದರು. ಹೀಗಾಗಿ ಸಂಸದರ ತಾಯಿಗೆ ಚಿಕಿತ್ಸೆ ನೀಡಲು ತಡವಾದ ಕಾರಣ ಸಂಸದರ ಗರಂ ಆಗಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. 
 
ವೈದ್ಯರಾದ ಮಧುಕೇಶ್ವರ್ ಹಾಗೂ ಬಾಲಚಂದ್ರ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇಬ್ಬರೂ ವೈದ್ಯರಿಗೆ ರಕ್ತ ಬರುವಂತೆ ಹಲ್ಲೆ ಮಾಡಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮುಂದಿನ 10 ವರ್ಷಗಳಲ್ಲಿ ಭಾರತ ಸೂಪರ್ ಪಾವರ್ ದೇಶವಾಗಲಿದೆ: ವಿ.ಆರ್.ದೇಶಪಾಂಡೆ

ಮುಂದಿನ 10 ವರ್ಷಗಳಲ್ಲಿ ಭಾರತ ಸೂಪರ್ ಪಾವರ್ ದೇಶವಾಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ವಿ.ಆರ್.ದೇಶಪಾಂಡೆ ...

news

ಉಪಚುನಾವಣಾ ಕಣಕ್ಕೆ ಮಪದೇವಪ್ರಸಾದ್ ಪತ್ನಿ ಗೀತಾ?

ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ಸ್ಥಾನ ತುಂಬಲು ಸಿದ್ಧ ಎಂದು ಮಪದೇವಪ್ರಸಾದ್ ಪತ್ನಿ ಗೀತಾ ಅವರು ...

news

ಯುವತಿಯ ಕೆನ್ನೆಗೆ ಚುಂಬಿಸಿ, ನಾಲಿಗೆ ಕಚ್ಚಿ ಲೈಂಗಿಕ ದೌರ್ಜನ್ಯ ಎಸಗಿದ ಕಾಮಾಂಧ!

ರಾಜಧಾನಿ ಬೆಂಗಳೂರು ರೇಪ್ ಸಿಟಿಯಾಗಿರುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಹೊಸವರ್ಷಾಚರಣೆ ಸಂಬರ್ಧದಲ್ಲಿ ...

news

ವಿರ್ದಾರ್ಥಿ ನಿಲಯಗಳ ನ್ಯೂನ್ಯತೆ ಸರಿಪಡಿಸಲು ಸೂಕ್ತ ಕ್ರಮ: ಎಚ್.ಆಂಜನೇಯ

ಸಮಾಜ ಕಲ್ಯಾಣ ಇಲಾಖೆ ಅಡಿಯ ವಿದ್ಯಾರ್ಥಿ ನಿಲಯಗಳ ನ್ಯೂನ್ಯತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ...

Widgets Magazine