ಮಾಲೀಕಯ್ಯ ಗುತ್ತೇದಾರ್ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕಗೆ ಅದ್ಧೂರಿ ಸನ್ಮಾನ

ಕಲಬುರಗಿ‌, ಗುರುವಾರ, 11 ಅಕ್ಟೋಬರ್ 2018 (19:35 IST)

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ‌ ಬಾರಿ ಅಫಜಲಪುರಕ್ಕೆ ಆಗಮಿಸಿರುವ ಪ್ರಿಯಾಂಕ್ ಖರ್ಗೆಗೆ ಅದ್ಧೂರಿ ದೊರಕಿದೆ. ಅಂದಹಾಗೆ ಬಿಜೆಪಿ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸ್ಪರ್ಧಿಸುತ್ತಿದ್ದ ಕ್ಷೇತ್ರ ಇದಾಗಿದೆ.

ಅಫಜಲಪುರದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ರೇಷ್ಮೆ ಪೇಟಾ ತೊಡಿಸಿ, ಬೃಹತ್ ಹಾರ ಹಾಕಿ ಸಚಿವ ಪ್ರಿಯಾಂಕ್ ಖರ್ಗೆಗೆ ಅದ್ಧೂರಿ ಸನ್ಮಾನ ಮಾಡಲಾಯಿತು.

ಅಫಜಲಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಲಬುರಗಿ ಜಿಲ್ಲೆ ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್ ಬಳಿ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಸಚಿವ ಪ್ರಿಯಾಂಕ್ ಖರ್ಗೆಗೆ ಸನ್ಮಾನ ಮಾಡಿದ ಹಲವು ಸ್ಥಳೀಯ ಮುಖಂಡರು ಜೈಕಾರ ಕೂಗಿದರು.

ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಬೆಳ್ಳಿ ಬುದ್ಧನ ಮೂರ್ತಿ, ಒಂದು ಬೆಳ್ಳಿ ಕಿರೀಟ, ನಾಲ್ಕು ಬೆಳ್ಳಿ ಖಡ್ಗಗಳ ಉಡುಗೊರೆ ನೀಡಲಾಯಿತು.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೀಪಾವಳಿಗೆ ಬಡವರ ಬಂಧು ಯೋಜನೆ ಶುರು

ರಾಜ್ಯದಲ್ಲಿರುವ ಬೀದಿ ವ್ಯಾಪಾರಿಗಳಿಗೆ 'ಬಡವರ ಬಂಧು' ಮೂಲಕ ದೀಪಾವಳಿ ವೇಳೆ ಸಹಾಯಧನ ನೀಡಲಾಗುವುದು ಎಂದು ...

news

10 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಕಳೆದ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

news

ಶ್ರೀರಾಮುಲು ಸೂಚಿಸಿದ ಅಭ್ಯರ್ಥಿ ಅಂತಿಮ ಎಂದ ಶಾಸಕ

ಉಪಚುನಾವಣೆಯಲ್ಲಿ ಶ್ರೀರಾಮುಲು ಸೂಚಿಸಿದ ಅಭ್ಯರ್ಥಿ ಅಂತಿಮಗೊಳ್ಳಲಿದ್ದಾರೆ ಎಂದು ಬಿಜೆಪಿ ಶಾಸಕ

news

ರೈತರ ಸಾಲ ಮನ್ನಾ: ಬ್ಯಾಂಕ್ ಸಿಬ್ಬಂದಿಗೆ ತರಬೇತಿ

ರೈತರ ಅಲ್ಪವಾಧಿ ಬೆಳೆ ಸಾಲ ಮನ್ನಾ ಕುರಿತಂತೆ ಫಲಾನುಭವಿಗಳ ಮಾಹಿತಿಯನ್ನು ಕಲೆಹಾಕಲು ಭೂಮಿ ಉಸ್ತುವಾರಿ ...

Widgets Magazine