Widgets Magazine
Widgets Magazine

ಸಚಿವ ಅನಂತ್ ಕುಮಾರ ಹೆಗಡೆ ಭಾವಚಿತ್ರಕ್ಕೆ ಚಪ್ಪಲಿ ಏಟು: ಕಾಂಗ್ರೆಸ್‌ನಿಂದ ಪ್ರತಿಭಟನೆ

ಮೈಸೂರು, ಶನಿವಾರ, 18 ನವೆಂಬರ್ 2017 (12:54 IST)

Widgets Magazine

ವಿರುದ್ಧ ಕೀಳು ಭಾಷೆಯಲ್ಲಿ ನಿಂದಿಸಿದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವ ಹೆಗಡೆ ವಿರುದ್ಧ ಭಾರಿ ಪ್ರತಿಭಟನೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
 
 ಸಿಎಂ ಸಿದ್ದರಾಮಯ್ಯ ವೋಟ್‌ಬ್ಯಾಂಕ್‌ಗಾಗಿ ಯಾರ ಬೂಟ್ ಬೇಕಾದ್ರೂ ನೆಕ್ತಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ನೀಡಿರುವ ಹೇಳಿಕೆಗೆ ರಾಜ್ಯದಾದ್ಯಂತ ಕಾಂಗ್ರೆಸ್ ಮುಖಂಡರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
 
ನಗರದ ರಾಮಾಸ್ವಾಮಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಚಿವ ಹೆಗಡೆ ಹೇಳಿಕೆ ಬಿಜೆಪಿ ಪಕ್ಷದ ಕೀಳು ಸಂಸ್ಕ್ರತಿ ತೋರಿಸುತ್ತದೆ.ಇಂತಹ ವ್ಯಕ್ತಿಯನ್ನು ಕೇಂದ್ರ ಸಚಿವರನ್ನಾಗಿಸಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಕಾಂಗ್ರೆಸ್ ಶಾಸಕ ಎಂ.ಕೆ. ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ. 
 
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಒಂದು ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ಸಚಿವರಾಗಿದ್ದವರು ಇಂತಹ ಕೀಳು ಭಾಷೆ ಬಳಸುವುದು ಹೇಡಿತನದ ಲಕ್ಷಣವಾಗಿದೆ ಎಂದು ಕಿಡಿಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

19 ವರ್ಷದ ಮಾಡೆಲ್‌ಳಿಂದ ಕನ್ಯತ್ವ ಹರಾಜ್: ಬಂದ ಹರಾಜು ಮೊತ್ತ ಕೇಳಿ ದಂಗಾಗುತ್ತೀರಿ

ನ್ಯೂಯಾರ್ಕ್: ಅಮೆರಿಕದ 19 ವರ್ಷ ವಯಸ್ಸಿನ ಸುಂದರ ಕನ್ಯೆಯಾದ ಮಾಡೆಲ್‌ ಗಿಸ್ಸೆಲ್ಲೆ ಕನ್ಯತ್ವವನ್ನು ...

news

ಸಿಎಂ ವಿರುದ್ಧ ಕೀಳು ಭಾಷೆ ಬಳಕೆ: ಸಚಿವ ಹೆಗಡೆ ಸಂಸ್ಕ್ರತಿ ಎಂದ ಸಚಿವ ಭೈರೇಗೌಡ

ಬೆಂಗಳೂರು: ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಹೆಗಡೆ ಕೀಳು ಭಾಷೆ ಬಳಸಿ ಸಿಎಂ ಸಿದ್ದರಾಮಯ್ಯರನ್ನು ...

news

ಸಿಎಂ ವೋಟ್‌ಬ್ಯಾಂಕ್‌ಗಾಗಿ ಯಾರ್ ಬೂಟ್ ಬೇಕಾದ್ರೂ ನೆಕ್ತಾರೆ: ಅನಂತ್ ಕುಮಾರ್ ಹೆಗಡೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವೋಟ್‌ಬ್ಯಾಂಕ್‌ಗಾಗಿ ಯಾರ ಬೂಟ್ ಬೇಕಾದ್ರೂ ನೆಕ್ತಾರೆ ಎಂದು ಕೇಂದ್ರ ಸಚಿವ ...

news

ಐಟಿ ದಾಳಿಗೆ ಶಶಿಕಲಾ ಬಣದ ಕುಮ್ಮಕ್ಕು: ಜಯಾ ಸೊಸೆ ಆರೋಪ

ಚೆನ್ನೈ: ಅಮ್ಮಾ ಜಯಲಲಿತಾ ನಿವಾಸದ ಮೇಲೆ ರಾತ್ರೋ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ...

Widgets Magazine Widgets Magazine Widgets Magazine