Widgets Magazine
Widgets Magazine

ಶ್ರೀನಿವಾಸ್ ಪ್ರಸಾದ್ ಸಮಯ ಸಾಧಕ ರಾಜಕಾರಣಿ: ಸಂಸದ ಧೃವನಾರಾಯಣ್

ನಂಜನಗೂಡು, ಶುಕ್ರವಾರ, 7 ಏಪ್ರಿಲ್ 2017 (14:17 IST)

Widgets Magazine

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸಮಯ ಸಾಧಕ ರಾಜಕಾರಣಿ ಎಂದು ಕಾಂಗ್ರೆಸ್ ಸಂಸದ  ಆರ್. ಧೃವನಾರಾಯಣ್ ತಿರುಗೇಟು ನೀಡಿದ್ದಾರೆ.
 
ನಿನ್ನೆ ಶ್ರೀನಿವಾಸ್ ಪ್ರಸಾದ್, ಸಂಸದ ಧೃವನಾರಾಯಣ್ ಮಹಾಭಾರತದ ಶಕುನಿಯಿದ್ದಂತೆ. ಕಾಂಗ್ರೆಸ್ ಪಕ್ಷದ ಶಕುನಿ ಎಂದು ಟೀಕಿಸಿದ್ದರು.
 
ಕಳೆದ ಬಾರಿ ನಂಜನಗೂಡಿನಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ನಾನು ಹೆಚ್ಚು ದುಡಿದಿದ್ದೆ. ಚುನಾವಣೆಯಲ್ಲಿ ತುಂಬಾ ಶ್ರಮಪಟ್ಟಿದ್ದರಿಂದ ಗೆಲುವು ಸಾಧ್ಯವಾಯಿತು. ಈ ಗೆಲುವನ್ನು ನಿಮಗೆ ಸಮರ್ಪಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದನ್ನು ಪ್ರಸಾದ್ ಮರೆಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನನ್ನನ್ನು ಗೌರವದಿಂದ ಕಾಣುತ್ತಿದ್ದರು. ಇದೀಗ ಬಿಜೆಪಿ ಪಕ್ಷಕ್ಕೆ ಬಂದೊಡನೆ ಅಸಭ್ಯ ಪದ ಬಳಕೆ ಮಾಡುತ್ತಿರುವುದು ಹಿರಿಯ ರಾಜಕಾರಣಿಗೆ ಶೋಭೆ ತರುವುದಿಲ್ಲ ಎಂದರು.
 
ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಭ್ರಷ್ಟಾಚಾರವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಜಯಭೇರಿ ಖಚಿತ ಎಂದು ಕಾಂಗ್ರೆಸ್ ಸಂಸದ ಆರ್.ಧೃವನಾರಾಯಣ್ ತಿಳಿಸಿದ್ದಾರೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಚೆನ್ನೈ: ಐಟಿ ದಾಳಿ ಬಿಜೆಪಿ-ಆರೆಸ್ಸೆಸ್ ಷಡ್ಯಂತ್ರ: ಎಐಎಡಿಎಂಕೆ

ಚೆನ್ನೈ: ನಗರದಲ್ಲಿ ಇಂದು 32 ಕಡೆ ನಡೆದ ಐಟಿ ದಾಳಿಯ ಹಿಂದೆ ಬಿಜೆಪಿ, ಆರೆಸ್ಸೆಸ್ ಕೈವಾಡವಿದೆ ಎಂದು ...

news

ಉಪಚುನಾವಣೆ ಪ್ರಚಾರ: ಜೆಡಿಎಸ್ ಬಂಡಾಯ ಶಾಸಕರಲ್ಲಿಯೇ ಭಿನ್ನಮತ

ಮೈಸೂರು: ಉಪಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುವ ಕುರಿತಂತೆ ಜೆಡಿಎಸ್ ಬಂಡಾಯ ...

news

ಗುಂಡ್ಲುಪೇಟೆ: ಸರಕಾರಿ ಅಧಿಕಾರಿ ಕಾರಿನಲ್ಲಿ ಕಂತೆ ಕಂತೆ ಹಣ ಪತ್ತೆ

ಗುಂಡ್ಲುಪೇಟೆ: ಉಪಚುನಾವಣೆ ನಡೆಯಲಿರುವ ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಮುಂದೆ ಸರಕಾರಿ ಅಧಿಕಾರಿ ಕಾರಿನಲ್ಲಿ ...

news

ಗುಂಡ್ಲುಪೇಟೆಯಲ್ಲಿ ಸರ್ಕಾರಿ ಕಾರಿನಲ್ಲಿದ್ದ 20 ಲಕ್ಷ ರೂ. ಪತ್ತೆ

ಉಪಚುನಾವಣಾ ಕಣದಲ್ಲಿ ಝಣ ಝಣ ಕಾಂಚಾಣದ ಹವಾ ಶುರುವಾಗಿದೆ. ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಬಳಿ ನಿಂತಿದ್ದ ...

Widgets Magazine Widgets Magazine Widgets Magazine