ರಾಯಚೂರಿನ ಮಿರ್ಚಿ ತಿಂದ ರಾಹುಲ್ ಗಾಂಧಿ

ರಾಯಚೂರು, ಸೋಮವಾರ, 12 ಫೆಬ್ರವರಿ 2018 (13:51 IST)


ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಯಚೂರಿನಿಂದ ಜನಾಶೀರ್ವಾದ ಯಾತ್ರೆಯನ್ನು ಆರಂಭಿಸಿದ್ದು, ದೇವದುರ್ಗ ಕ್ಷೇತ್ರದ ಸಮಾವೇಶಕ್ಕೆ ತೆರಳುವ ಮಾರ್ಗದಲ್ಲಿ ಕಲ್ಮಲಾದ ಹೋಟೆಲ್‌ನಲ್ಲಿ ಮಿರ್ಚಿ ತಿಂದಿದ್ದಾರೆ.

ಹೋಟೆಲ್‌ನಲ್ಲಿ ಮಿರ್ಚಿ ತಿಂದ ರಾಹುಲ್ ಗಾಂಧಿ ಪಕ್ಷದ  ಇತರ ನಾಯಕರಿಗೂ ಮಿರ್ಚಿಯನ್ನು ಹಂಚಿಕೆ ಮಾಡಿದ್ದಾರೆ. ಈ ವೇಳೆ ಹೋಟೆಲ್‌ ಮಾಲೀಕರೊಂದಿಗೆ ಮಾತನಾಡಿ, ಹೋಟೆಲ್‌ನ ವ್ಯಾಪಾರ ಹಾಗೂ ಲಾಭದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ‌್ವರ್, ಎಸ್.ಆರ್.ಪಾಟೀಲ್, ವೀರಪ್ಪ ಮೊಯ್ಲಿ ಸೇರಿದಂತೆ ಇತರೆ ನಾಯಕರು ಮಿರ್ಚಿ ಸವಿದಿದ್ದಾರೆ.
 
ರಾಷ್ಟ್ರೀಯ ವಿಶೇಷ ಭದ್ರತೆಯಿದ್ದರೂ ಸಾಮಾನ್ಯರೊಂದಿಗೆ ಬೆರೆಯಲು ಹೋಟೆಲ್‌ನಲ್ಲಿ ಮಿರ್ಚಿತಿಂದು ಸಾರ್ವಜನಿಕರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ರಾಹುಲ್ ಗಾಂಧಿ ಭರವಸೆ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯ ಸರ್ಕಾರದಿಂದ ಶಿಫಾರಸು ಕಳುಹಿಸಲು ಮುಖ್ಯಮಂತ್ರಿ ...

news

ಬಸನಗೌಡ ಯತ್ನಾಳ್ ಬಿಜೆಪಿಗೆ ಸೇರಲು ನವದೆಹಲಿಯಲ್ಲಿ ಮಾತುಕತೆ

ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರಲು ವೇದಿಕೆ ...

news

‘ಕರ್ನಾಟಕದಲ್ಲಿಈ ಬಾರಿಯೂ ನಾವೇ ಗೆಲ್ಲೋದು’

ರಾಯಚೂರು: ರಾಯಚೂರಿನ ಗಂಜ್ ಸರ್ಕಲ್ ನಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಪ್ರಧಾನಿ ...

news

ಅತ್ಯಾಚಾರದ ಬಗ್ಗೆ ರಾಹುಲ್ ಗಾಂಧಿ ಎಡವಟ್ಟು!

ಕೊಪ್ಪಳ: ಜನಾಶೀರ್ವಾದ ಯಾತ್ರೆಯಲ್ಲಿ ವೀರಾವೇಷದ ಭಾಷಣ ಮಾಡುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ...

Widgets Magazine
Widgets Magazine