ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ್ ಜಿಗಜಿಣಗಿ

ನವದೆಹಲಿ, ಮಂಗಳವಾರ, 5 ಜುಲೈ 2016 (12:06 IST)

ಕೇಂದ್ರ ಸರ್ಕಾರ ಎರಡನೇ ಬಾರಿಗೆ ಸಚಿವ ಸಂಪುಟದ ಪುನಾರಚಿಸಿದ್ದು, ಬಿಜಾಪುರದ ಸಂಸದ ರಮೇಶ್ ಜಿಗಜಿಣಿಗಿ ಅವರಿಗೆ ಸ್ಥಾನ ದೊರೆತಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 
 
ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ  ಸಂಪುಟ ದರ್ಜೆ ಸಚಿವರಾಗಿ 19 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಭೋದಿಸಿದರು. 
 
1983ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಹಿಂದುಳಿದ ವರ್ಗದ ನಾಯಕ ಆ ಬಳಿಕ ಹಿಂತಿರುಗಿ ನೋಡಲೇ ಇಲ್ಲ. 64 ವರ್ಷದ ಅವರು ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲೇರುತ್ತ ಮುಂದೆ ಸಾಗಿದ್ದಾರೆ.
 
ಈಗಾಗಲೇ ಕರ್ನಾಟಕದ  ಡಿ.ವಿ.ಸದಾನಂದ ಗೌಡ, ಅನಂತ ಕುಮಾರ್, ಕೇಂದ್ರ ಸಚಿವರಾಗಿ ಮುಂದುವರಿಯಲಿದ್ದು, ಜಿ.ಎಂ.ಸಿದ್ಧೇಶ್ವರ್‌ರನ್ನು  ಕೇಂದ್ರ ಸಚಿವ ಸ್ಥಾನದಿಂದ ಕೈಬಿಡಲಾಗಿದೆ.
 
ರಾಷ್ಟ್ರಪತಿ ಭವನದಲ್ಲಿರುವ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಎಲ್ಲ 19 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹ್ಹಹ್ಹಹ್ಹ.. ಆಮೆ ಬಳಿ ಲಿಫ್ಟ್ ಕೇಳಿದ ಕಪ್ಪೆ...ಮುಂದೇನಾಯ್ತು?

ಕೆಲವೊಮ್ಮೆ ಪ್ರಾಣಿ ತರಹ ಆಡಬೇಡ ಎಂದು ಗದರುತ್ತೇವೆ. ಆದರೆ ನಾವು ಪ್ರಾಣಿಗಳಿಂದ ಕಲಿಯುವುದು ಬಹಳಷ್ಟಿದೆ. ...

news

ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು ನಾಪತ್ತೆ

ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳಿಬ್ಬರು ಏಕಾಏಕಿ ನಾಪತ್ತೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

news

ಬೃಹತ್ ಮರ ಕಿತ್ತು ಬೇರೆ ಕಡೆ ನೆಡುವುದನ್ನು ನೋಡಿದ್ದೀರಾ? (ವಿಡಿಯೋ)

ಮನುಷ್ಯನ ಸ್ವಾರ್ಥ ಮೀತಿ ಮೀರಿ ಹೋಗಿದೆ. ತನ್ನ ಸಣ್ಣಪುಟ್ಟ ಅವಶ್ಯಕತೆಗಾಗಿ ಆತ ಪರಿಸರವನ್ನು ವಿನಾಶದತ್ತ ...

news

ಉತ್ತರಪ್ರದೇಶದ ಸಾರಥ್ಯ ವಹಿಸಲು ಪ್ರಿಯಾಂಕಾ ರೆಡಿ?

ರಾಜ್ಯದಲ್ಲಿ ಕಳೆದುಕೊಂಡಿರುವ ಅಧಿಕಾರವನ್ನು ಮರಳಿಗಳಿಸಲು ಪ್ರಿಯಾಂಕಾ ಗಾಂಧಿ ಅವರ ಸಾರಥ್ಯ ಬೇಕು ಎಂಬ ...