Widgets Magazine
Widgets Magazine

ಪ್ರಧಾನಿ ವಿರುದ್ಧ ಟ್ವೀಟ್ ಮಾಡಿದ್ದು ರಮ್ಯಾಗೇ ಮುಳುವಾಯ್ತು!

ಬೆಂಗಳೂರು, ಸೋಮವಾರ, 5 ಫೆಬ್ರವರಿ 2018 (10:27 IST)

Widgets Magazine

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ, ಮಾಜಿ ಸಂಸದೆ ರಮ್ಯಾ ಮಾಡಿದ ಟ್ವೀಟ್ ಒಂದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
 

ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಟಾಪ್ ಅಂದರೆ ಟೊಮೆಟೊ, ಆನಿಯನ್, ಪೊಟೇಟೋ ನನ್ನ ಆದ್ಯತೆ ಅಂದಿದ್ದರು. ಇದಕ್ಕೆ ನಟಿ ರಮ್ಯಾ ಟಾಪ್ ಅಲ್ಲ ಪಾಟ್ ಎಂದಿದ್ದರು. ಅಷ್ಟೇ ಅಲ್ಲದೆ, ಪಾಟ್ (ಅಮಲು ಪದಾರ್ಥ ಎಂಬರ್ಥ) ನ ಅಮಲಿನಲ್ಲಿ ಹೀಗೆ ಮಾತನಾಡಿದ್ದೀರಾ ಎಂದು ವ್ಯಂಗ್ಯವಾಡಿದ್ದರು.
 
ಈ ಟ್ವೀಟ್ ಈಗ ರಮ್ಯಾಗೆ ತಿರುಗುಬಾಣವಾಗಿದೆ. ದೇಶದ ಪ್ರಧಾನಿ ವಿರುದ್ದ ಇಷ್ಟು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಈ ಮೂಲಕ ರಮ್ಯಾ ದೇಶದ ಜತೆಗೇ ಅವಮಾನ ಮಾಡಿದ್ದಾರೆ. ರಮ್ಯಾ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಇದೇ ರೀತಿ ಅಭಿಪ್ರಾಯ ಬರುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ ವಿರುದ್ಧ ಪ್ರಕಾಶ್ ರೈ ಟೂತ್ ಪೇಸ್ಟ್ ಟಾಂಗ್

ಬೆಂಗಳೂರು: ಪರಿವರ್ತನಾ ರ್ಯಾಲಿ ಉದ್ದೇಶಿಸಿ ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಪ್ರಧಾನಿ ಮೋದಿಗೆ ಬಹುಭಾಷಾ ...

news

ಗಂಡನ ಪ್ರಾಣ ರಕ್ಷಿಸಲು ಗನ್ ಹಿಡಿದ ಈ ಮಹಿಳೆ ಮಾಡಿದ್ದೇನು ಗೊತ್ತಾ?

ಲಕ್ನೋ: ಹೆಣ್ಣು ತನ್ನ ಸಂಸಾರದ ವಿಚಾರಕ್ಕೆ ಬಂದರೆ ದುರ್ಗಾವತಾರ ತಾಳಲೂ ಹಿಂದೆ ಮುಂದೆ ನೋಡುವುದಿಲ್ಲ ...

news

ಅರಮನೆ ಮೈದಾನದಲ್ಲಿ ಕಸದ ರಾಶಿ, ಸ್ವಚ್ಛತೆ ಮರೆತ ಬಿಜೆಪಿ

ಸ್ವಚ್ಛ ಭಾರತದ ಮಾತನಾಡುವ ಬಿಜೆಪಿಯವರು ಅರಮನೆ ಮೈದನಾದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ...

news

‘ಮೋದಿ ಸರ್ಕಾರವನ್ನು ಹೊರದಬ್ಬದಿದ್ರೆ ಭಾರತಕ್ಕೆ ಅಪಾಯ ಖಂಡಿತಾ’

ನವದೆಹಲಿ: ಮೋದಿ ಸರ್ಕಾರವನ್ನು ಹೊರದಬ್ಬದಿದ್ದರೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಅಪಾಯ ಖಂಡಿತಾ ಎಂದು ಉತ್ತರ ...

Widgets Magazine Widgets Magazine Widgets Magazine