ಬಾಲಕಿ ಮೇಲೆ ಅತ್ಯಾಚಾರ ಯತ್ನ ಶಂಕೆ: ಥಳಿತ

ಗದಗ, ಶನಿವಾರ, 14 ಜುಲೈ 2018 (19:26 IST)


ಕುಡಿದ ಅಮಲಿನಲ್ಲಿ ನಾಲ್ಕುವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಶಂಕಿಸಿ  ಯುವಕನೋರ್ವನನ್ನ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರದ ಗಂಜಿಬಸವೇಶ್ವರ ಸರ್ಕಲ್ ಬಳಿ ರಾತ್ರಿ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ನಾಲ್ಕು ವರ್ಷದ ಬಾಲಕಿ ರಾತ್ರಿ ಮನೆ ಮುಂದೆ ಆಟವಾಡುತ್ತಿತ್ತು. ಸ್ಥಳಿಯ ಅಶೋಕ ಎಂಬ ಯುವಕ ಕುಡಿದ ಅಮಲಿನಲ್ಲಿ ಮಗುವನ್ನು ಎತ್ತಿಕೊಳ್ಳಲು ಮುಂದಾಗಿದ್ದಾನೆ.

ಬಾಲಕಿ ಅಳಲು ಪ್ರಾರಂಭಿಸಿದ್ದರಿಂದ ಕುಡಿದ ಅಮಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಶಂಕಿಸಿ ಬಾಲಕಿ ಕುಟುಂಬದವರು ಅಶೋಕ ಎಂಬ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಥಳಿತಕ್ಕೊಳಗಾದ ಯುವಕನ ತಲೆಗೆ ತೀವ್ರ ಗಾಯವಾಗಿದೆ. ಕೆಲಕಾಲ ರಕ್ತಸ್ರಾವ ದಿಂದ ನರಳಾಡಿದ್ದಾನೆ. ಕೆಲಕಾಲ ಹೈಡ್ರಾಮಾ‌ ಸೃಷ್ಟಿಯಾಗಿತ್ತು. ನಂತರ ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ನೀಡಲಾಗಿದೆ. ಗದಗ ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ. ಪೊಲೀಸರು ಎರಡು ಕುಟುಂಬದವರಿಂದ ವಿಚಾರ‌ಣೆಗೆ ಮುಂದಾಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳು, ನುಸಿ ಪತ್ತೆ

ಶಾಲೆಯ ಮಕ್ಕಳ ಬಗ್ಗೆ ಅದೇಕೆ ನಿರ್ಲಕ್ಷ್ಯವೋ ಗೊತ್ತಿಲ್ಲ. ಸರಕಾರಿ ಶಾಲೆಯ ಮಧ್ಯಾಹ್ನದ ಊಟದ ಪಾಡಂತೂ ಆ ...

news

ಕೆ.ಆರ್.ಎಸ್ ಭರ್ತಿ: ತಮಿಳುನಾಡಿಗೆ ಹರಿದ ನೀರು

ನಾಲ್ಕು ವರ್ಷಗಳ ಬರದಿಂದ ತತ್ತರಿಸಿದ್ದ ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತಸ ಮೂಡುವಂತಾಗಿದ್ದು, ನಾಲ್ಕು ...

news

ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಸ್ವಾಗತ

ತುಮಕೂರು ಜಿಲ್ಲೆ ವಿಶ್ವ ಭೂಪಟದಲ್ಲಿ ಸೇರುವ ಕಾಲ ಹತ್ತಿರವಾಗಿದೆ. 40 ವರ್ಷಗಳ ಇತಿಹಾಸ ಹೊಂದಿದ್ದ ...

news

ಆಹಾರ ಇಲಾಖೆ ಗೋದಾಮಿನಲ್ಲಿ 1,000 ಕ್ವಿಂಟಾಲ್ ಅಕ್ಕಿ ಮಾಯ?

ಅನ್ನ ಭಾಗ್ಯ ಅಕ್ಕಿಗೆ ಖನ್ನ ಹಾಕಿರುವ ಅಧಿಕಾರಿಗಳು, ನಂಜುಂಡೇಶ್ವರನ ಊರಲ್ಲೇ ಭಾರಿ ಗೋಲ್ ಮಾಲ್ ನಡೆದಿರುವ ...

Widgets Magazine