ರಾಮ ಬದಲಾಗಿ ರಾವಣ ಇರಬೇಕಿತ್ತು- ಯಡಿಯೂರಪ್ಪ

ತುಮಕೂರು, ಶುಕ್ರವಾರ, 12 ಜನವರಿ 2018 (06:49 IST)

Widgets Magazine

ಬಿಜೆಪಿಯವರನ್ನು ಉಗ್ರಗಾಮಿಗಳು ಎಂದಿರುವ ಮುಖ್ಯಮಂತ್ರಿ ಮಾತೆತ್ತಿದರೆ ನನ್ನ ಹೆಸರಿನಲ್ಲಿ ರಾಮ ಇದ್ದಾನೆ ಎನ್ನುತ್ತಿದ್ದಾರೆ. ಇದು ದುರ್ದೈವದ ಸಂಗತಿ ರಾಮನ ಬದಲಾಗಿ ರಾವಣ ಇರಬೇಕಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಟೀಕಿಸಿದ್ದಾರೆ.

ಶಿರಾದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾಗಾಂಧಿವರ ಕೈಯಲ್ಲೇ ಆಗಿಲ್ಲ, ಇನ್ನು ಸಿದ್ದರಾಮಯ್ಯ ಅವರು ಯಾವ ಲೆಕ್ಕ, ಅವರೊಬ್ಬ ಬಚ್ಚಾ ಎಂದಿದ್ದಾರೆ.

ದೇಶದ 19 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಇನ್ನೂ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲೂ ಅಧಿಕಾರಕ್ಕೆ ಬರಲಿದೆ. ಇಂತಹ ಪಕ್ಷವನ್ನು ಉಗ್ರಗಾಮಿ ಎಂದಿರುವುದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಮಹಾದಾಯಿ ನೀರಿನ ವಿವಾದವನ್ನು ಬಗೆಹರಿಸಲು ಬಿಜೆಪಿ ಪ್ರಯತ್ನಿಸಿತ್ತು, ಆದರೆ, ಕಾಂಗ್ರೆಸ್ ಷಡ್ಯಂತ್ರ ಮಾಡಿ ಸಮಸ್ಯೆ ಬಗೆಹರಿಯಲು ಬಿಡಲಿಲ್ಲ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಉಗ್ರಗಾಮಿ ಯಡಿಯೂರಪ್ಪ ಸಿದ್ದರಾಮಯ್ಯ Militant Yeddyurappa Siddaramaiah

Widgets Magazine

ಸುದ್ದಿಗಳು

news

ಈಶ್ವರಪ್ಪ, ಪ್ರತಾಪಸಿಂಹಗೆ ಎಚ್ಚರಿಕೆ ನೀಡಿದ ಬಿಜೆಪಿ ವರಿಷ್ಠರು

ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಪ್ರತಾಪಸಿಂಹ ಅವರಿಗೆ ಬಿಜೆಪಿ ಹೈಕಮಾಂಡ್ ...

news

ಉಗ್ರವಾದ ಬೆಳಿಸುತ್ತಿರುವ ಕಾಂಗ್ರೆಸ್– ಶೋಭಾ ಎದಿರೇಟು

ದೇಶದಲ್ಲಿ ಉಗ್ರರನ್ನು ಬೆಳೆಸಿರುವ ರಾಷ್ಟ್ರೀಯ ಕಾಂಗ್ರೆಸ್, ಈಗ ಕರ್ನಾಟಕದಲ್ಲಿಯೂ ಅಶಾಂತಿ ವಾತಾವರಣವನ್ನು ...

news

ಅನುದಾನದ ಲೆಕ್ಕಕೇಳಿದ ಅಮಿತ್ ಶಾಗೆ ಪಿಜಿಆರ್ ಸಿಂಧ್ಯಾ ತಿರುಗೇಟು

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೂರು ಲಕ್ಷ ಕೋಟಿ ಅನುದಾನ ನೀಡಿರುವುದು ಅದು ರಾಜ್ಯಕ್ಕೆ ನೀಡಿರುವ ಪಾಲು, ...

news

ಭಯದ ವಾತಾವರಣ ಸೃಷ್ಠಿಸುವ ಬಿಜೆಪಿಯವರು ಜಿಹಾದಿಗಳು– ದಿನೇಶ್ ಗುಂಡೂರಾವ್

ಬಿಜೆಪಿ, ಭಜರಂಗದಳ, ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಯದ ವಾತಾವರಣ ...

Widgets Magazine