ಕೊಲ್ಲೂರು ಮೂಕಾಂಬಿಕೆಯ ಕಾಣಿಕೆ ಹುಂಡಿಯಲ್ಲಿ ಸಿಕ್ತು ಕೋಟಿ ಹಣ!

ಮಂಗಳೂರು, ಬುಧವಾರ, 25 ಅಕ್ಟೋಬರ್ 2017 (08:54 IST)

ಮಂಗಳೂರು: ಇದೆಲ್ಲಾ ನವರಾತ್ರಿ ಇಫೆಕ್ಟ್ ಎಂದರೂ ತಪ್ಪಾಗಲಾರದು. ರಾಜ್ಯದ ಶ್ರೀಮಂತ ದೇಗುಲಗಳ ಪೈಕಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲದ ಕಾಣಿಕೆ ಹುಂಡಿಯಿಂದ ಕೋಟಿ ರೂ. ಸಂಗ್ರಹವಾಗಿ ದಾಖಲೆ ಮಾಡಿದೆ.


 
1.10 ಕೋಟಿ ರೂ. ಹೆಚ್ಚು ಕಾಣಿಕೆ ಸಂಗ್ರಹವಾಗಿದ್ದು, ಇದು ಈವರೆಗಿನ ಅತೀ ಹೆಚ್ಚು ದಾಖಲೆಯಾಗಿದೆ. ಈ ತಿಂಗಳು ನವರಾತ್ರಿ ಹಬ್ಬವಿದ್ದದ್ದರಿಂದಲೋ, ಸಾಲುಸಾಲು ರಜೆಯಿದ್ದಿದ್ದರಿಂದಲೋ ದೇವಾಲಯಕ್ಕೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.
 
ಕಳೆದ ವರ್ಷ 1.6 ಕೋಟಿ ರೂ. ಸಿಕ್ಕಿದ್ದೇ ಈವರೆಗಿನ ದಾಖಲೆಯಾಗಿತ್ತು. ಆದರೆ ಈ ತಿಂಗಳ ಕಾಣಿಕೆ ಅದನ್ನೂ ಮೀರಿಸಿದೆ. ವಿಶೇಷವೆಂದರೆ ಇದರಲ್ಲಿ 1 ಲಕ್ಷ  ರೂ. ಗಿಂತಲೂ ಅಧಿಕ ವಿದೇಶೀ ಕರೆನ್ಸಿ ಕೂಡಾ ಲಭಿಸಿದೆಯಂತೆ. ಅಷ್ಟೇ ಅಲ್ಲದೆ, 870 ಗ್ರಾಂ ಚಿನ್ನ, 3.2 ಕೆ.ಜಿ ಬೆಳ್ಳಿ ಸಾಮಾನು ಲಭಿಸಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶೀಘ್ರದಲ್ಲೇ ಲ್ಯಾಪ್ ಟಾಪ್ ಬ್ಯಾನ್!!

ನವದೆಹಲಿ: ಶೀಘ್ರದಲ್ಲೇ ಲ್ಯಾಪ್ ಟಾಪ್ ಬ್ಯಾನ್ ಆಗಲಿದೆ! ಆದರೆ ನಿಷೇಧವಾಗುತ್ತಿರುವುದು ಮನೆ ಬಳಕೆಯಿಂದಲ್ಲ. ...

news

‘ದೇವರೇ ರಾಹುಲ್ ಗಾಂಧಿಗೆ ಒಳ್ಳೆ ಬುದ್ಧಿ ಕೊಡಲಿ’

ನವದೆಹಲಿ: ಗುಜರಾತ್ ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ...

news

ಪ್ರಧಾನಿ ಮೋದಿಯ ಕನಸು ನುಚ್ಚುನೂರಾಗಿಸಿದ ಮಧ್ಯಪ್ರದೇಶ ಸಿಎಂ

ಭೋಪಾಲ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ಬಿಜೆಪಿ ಸರಕಾರವೇ ಅಧಿಕಾರದಲ್ಲಿರುವ ...

news

ಬಿಜೆಪಿ ಸಿಎಂಗೆ ಛೀಮಾರಿ ಹಾಕಿದ ಬಿಜೆಪಿ ಶಾಸಕ

ಜಯಪುರ್: ರಾಜಸ್ಥಾನದ ಬಿಜೆಪಿಯಲ್ಲಿನ ಬಿಕ್ಕಟ್ಟು ಇದೀಗ ಬಹಿರಂಗಗೊಂಡಿದೆ. ಹಿರಿಯ ಬಿಜೆಪಿ ಶಾಸಕ ಘಾನಶ್ಯಾಮ್ ...

Widgets Magazine
Widgets Magazine