Widgets Magazine
Widgets Magazine

ಬಂಧನದ ವೇಳೆ ಪೊಲೀಸರ ಕಾಲು ಹಿಡಿದುಕೊಂಡು ಗೋಳಾಡಿದ್ದ ನಾಗ

ಬೆಂಗಳೂರು, ಭಾನುವಾರ, 14 ಮೇ 2017 (12:38 IST)

Widgets Magazine

ಅಂತೂ ಇಂತೂ ರೌಡಿ ಶೀಟರ್ ನಾಗರಾಜನನ್ನ ಪೊಲಿಸರು ಬಂಧಿಸಿದ್ದಾರೆ. ಮನೆ ಮೇಲೆ ಪೊಲೀಸರ ದಾಳಿ ಬಳಿಕ ನಾಪತ್ತೆಯಾಗಿದ್ದ ನಾಗ, ದಿನಕ್ಕೊಂದು ವಿಡಿಯೋ ರಿಲೀಸ್ ಮಾಡಿ ಪೊಲೀಸರ ಮೇಲೆ ಆರೋಪ ಮಾಡಿದ್ದ. ಇದೀಗ, ಬಂಧನದ ವೇಳೆ ಪೊಲೀಸರ ಕಾಲು ಹಿಡಿದುಕೊಂಡು ಗೋಳಾಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ತಮಿಳುನಾಡಿನ ಆರ್ಕಾಟ್ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ನಾಗ 5 ನಿಮಿಷ ಎಸಿಪಿ ರವಿಕುಮಾರ್ ಕಾಲು ಹಿಡಿದುಕೊಂಡು ಗೋಳಾಡಿದ್ದಾನೆ. ಇನ್ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಬಿಟ್ಟುಬಿಡಿ ಎಂದು ಅಲವತ್ತುಕೊಂಡಿದ್ದಾನೆ. ಹಳೇನೋಟು ರೇಡ್ ಆದ ಬಳಿಕ ಜಾಮೀನು ಸಿಗುವುದಿಲ್ಲ ಎಂದು ಅರಿತು ನಾಪತ್ತೆಯಾದೆ. ಆವೇಶದಲ್ಲಿ ಏನು ಮಾಡಬೇಕೆಂದು ತಿಳಿಯದೇ ಪೊಲೀಸರ ಮೇಲೆ ಆರೋಪ ಮಾಡಿದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಇದೇವೇಳೆ, ಪೊಲೀಸ್ ವಿಚಾರಣೆ ವೇಳೆ 2018ರ ಚುನಾವಣೆಗೆ ಸ್ಪರ್ಧಿಸಲು ಹಣ ಸುಲಿಗೆ ಮಾಡುತ್ತಿದ್ದದ್ದಾಗಿ ತಿಳಿದುಬಂದಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಇರಾದೆ ಹೊಂದಿದ್ದ ನಾಗ ಹಣ ಹೊಂದಿಸಲು ಸುಲಿಗೆಯ ಹಾದಿ ಹಿಡಿದಿದ್ದನಂತೆ. ಉದ್ಯಮಿ ಉಮೇಶ್ ಬಳಿ ಹಣ ಸುಲಿಗೆ ಮಾಡಿದ್ದಾಗಿಯೂ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ. ಹಣ ಬದಲಿಸಿಕೊಡುವುದಾಗಿ ಕರೆದು ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿಗೆ 56 ಇಂಚಿನ ಬ್ರಾ ಕಳುಹಿಸಿಕೊಟ್ಟ ಮಾಜಿ ಯೋಧನ ಪತ್ನಿ..!

ಭಾರತೀಯ ಯೋಧರ ಮೇಲೆ ಗಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನಿ ಸೇನೆಯ ದಾಳಿಯಿಂದ ರೋಸಿಹೋಗಿರುವ ಮಾಜಿ ಯೋಧನ ...

news

ಅತ್ತೆ–ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ

ಸೋದರತ್ತೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸೋದರಳಿಯ ಅಕ್ರಮ ಸಂಬಂಧ ನಿಲ್ಲಿಸಿದ್ದಕ್ಕೆ ಚಾಕುವಿನಿಂದ ಚುಚ್ಚಿ ...

news

"ಬರ" ದಲ್ಲೂ ಭಿನ್ನಮತ: ಬಿಎಸ್‌ವೈ-ಈಶ್ವರಪ್ಪ ಪ್ರತ್ಯೇಕ ರಾಜ್ಯ ಪ್ರವಾಸ

ಬೆಂಗಳೂರು: ಬಿಜೆಪಿ ಪಕ್ಷದಲ್ಲಿನ ಭಿನ್ನಮತ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದೀಗ "ಬರ" ...

news

ಜಮ್ಮು ಕಾಶ್ಮಿರದಲ್ಲಿ ಐವರು ಲಷ್ಕರ್ ಉಗ್ರರ ಅರೆಸ್ಟ್

ಜಮ್ಮು: ಜಮ್ಮು ಕಾಶ್ಮಿರದಲ್ಲಿ ಐವರು ಲಷ್ಕರ್ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿ ಅವರ ಬಳಿಯಿದ್ದ ಅಪಾರ ...

Widgets Magazine Widgets Magazine