ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮದು, ಮೋದಿಯದ್ದಲ್ಲ: ಸಿಎಂ

ಬೆಂಗಳೂರು, ಬುಧವಾರ, 19 ಜುಲೈ 2017 (20:36 IST)

ನಿಜವಾದ ಅರ್ಥದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮದು ಪ್ರಧಾನಿ ಮೋದಿಯದ್ದಲ್ಲ ಎಂದು ಹೇಳಿದ್ದಾರೆ.
 
ನಮ್ಮ ಸರಕಾರದಲ್ಲಿ ಎಲ್ಲಾ ಜಾತಿ,ಜನಾಂಗದವರಿಗೆ ಆದ್ಯತೆ ನೀಡಲಾಗಿದೆ. ಕೇವಲ ಅಹಿಂದಕ್ಕೆ ಮಾತ್ರ ಆದ್ಯತೆ ನೀಡುತ್ತಿಲ್ಲ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಪ್ರಧಾನಿ ಮೋದಿಯದ್ದು ಮತ್ತು ನಮ್ಮ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಲಿ. ಚರ್ಚೆಗೆ ನಾವು ಸಿದ್ದ ಎಂದು ಸವಾಲ್ ಹಾಕಿದರು. 
 
ನಾನು ಅಹಿಂದ ಪರವೇ, ಅಹಿಂದ ಪರವಾಗಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ಮುಜಗರವಿಲ್ಲ. ನಮ್ಮ ಸರಕಾರ ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ. ಹಸಿವು ಮುಕ್ತ ಗುಡಿಸಲು ಮಾಡುವುದೇ ಸರಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. 
 
ಮಹಾದಾಯಿ ವಿಚಾರ ಕುರಿತಂತೆ ಗೋವಾ ಜಲಸಂಪನ್ಮೂಲ ಖಾತೆ ಸಚಿವರಿಗೆ ಪತ್ರ ಬರೆಯಲಾಗಿತ್ತು. ಆದರೆ, ಗೋವಾ ಸಚಿವರು ಬರೆದ ಉತ್ತರ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿಲ್ಲ. ಮುಂದೆ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಕಾಂಗ್ರೆಸ್ ಯಡಿಯೂರಪ್ಪ Congress Yeddyurappa Cm Siddaramaiah Pm Modi

ಸುದ್ದಿಗಳು

news

ಕೆರೆ ಡಿನೋಟಿಫೈ, ಇದೊಂದು ನಾಚಿಕೆಗೇಡಿನ ಸರಕಾರ: ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಒಣಗಿದ ಕೆರೆಗಳನ್ನು ಡಿನೋಟಿಫೈ ಮಾಡುವ ಸರಕಾರದ ನಿರ್ಧಾರ ನಾಚಿಕೆಗೇಡು ಎಂದು ಮಾಜಿ ...

news

ಪರಪ್ಪನ ಅಗ್ರಹಾರ ಗೋಲ್‌ಮಾಲ್‌ನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ: ಶೆಟ್ಟರ್

ಹುಬ್ಬಳ್ಳಿ: ಪರಪ್ಪನ ಅಗ್ರಹಾರ ಗೋಲ್‌ಮಾಲ್‌ನ್ನು ಸರಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆಯ ...

news

ಬಿಎಸ್‌ವೈ ನನ್ನನ್ನು ಸಂಪರ್ಕಿಸಿಲ್ಲ: ಹೇಮಂತ್ ನಿಂಬಾಳ್ಕರ್

ಬೆಂಗಳೂರು: ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಕಿಡ್ನಾಪ್ ಕೇಸ್‌ನಲ್ಲಿ ಸಂತೋಷ್ ಪಾತ್ರವಿಲ್ಲವೆಂದು ಬಿಜೆಪಿ ...

news

ಬೆತ್ತಲಾಗಿ ಓಡಾಡುತ್ತಿದ್ದ ಮಾಡೆಲ್ ಬಂಧನ.. ಟವಲ್ ಕೊಟ್ಟ ಪೊಲೀಸಪ್ಪನಿಗೇ ಬಿತ್ತು ಗೂಸಾ

ಮಾಡೆಲ್ ಒಬ್ಬಳು ಸಂಪೂರ್ಣ ಬೆತ್ತಲಾಗಿ ಹೋಟೆಲ್`ನಲ್ಲಿ ರಂಪಾಟ ಮಾಡಿದ್ದಲ್ಲದೆ ಟವಲ್ ಕೊಡಲು ಬಂದ ಪೊಲೀಸರಿಗೇ ...

Widgets Magazine