Widgets Magazine
Widgets Magazine

ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂತೋಷ್ ಹೆಗ್ಡೆ ಅಸಮಾಧಾನ

ಮಡಿಕೇರಿ:, ಬುಧವಾರ, 17 ಮೇ 2017 (20:38 IST)

Widgets Magazine

ತನಿಖಾ ಸಂಸ್ಥೆಗಳ ಬೇಜವಾಬ್ದಾರಿ ಕಾರ್ಯನಿರ್ವಹಣೆಯಿಂದ ಆರೋಪಿಗಳಿಗೆ ಕ್ಲಿನ್ ಚಿಟ್ ದೊರೆಯುತ್ತಿದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸುಪ್ರೀಂಕೋರ್ಟ್ ಮೂರು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದರಿಂದ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ತನಿಖಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಎಸ್‌ಐಟಿ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಗುಡುಗಿದ್ದಾರೆ.
 
ಅಕ್ರಮ ಗಣಿಗಾರಿಕೆ ಕುರಿತಂತೆ 2011ರಲ್ಲೇ ಸರಕಾರಕ್ಕೆ ವರದಿ ನೀಡಿದ್ದೇನೆ. ಆದರೆ, ಸರಕಾರ ವರದಿ ಅನುಷ್ಠಾನಕ್ಕೆ ತರಲೇ ಇಲ್ಲ ಎಂದು ಕಿಡಿಕಾರಿದರು.     
 
ಬಲಿಷ್ಠರನ್ನು, ದೊಡ್ಡ ಹುದ್ದೆಯಲ್ಲಿರುವವರನ್ನು ತನಿಖಾ ಸಂಸ್ಥೆಗಳು ಮುಟ್ಟುತ್ತಲೇ ಇಲ್ಲ. ಒಂದು ವೇಳೆ, ಮುಟ್ಟಿದರೂ ಬಿ ರಿಪೋರ್ಟ್ ಹಾಕುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
 
ತನಿಖಾ ಸಂಸ್ಥೆಗಳೇ ಹಗರಣಗಳನ್ನು ಮುಚ್ಚಿಹಾಕುತ್ತಿವೆಯಾ ಎನ್ನುವ ಸಂಶಯ ಜನರನ್ನು ಕಾಡುತ್ತಿವೆ. ಗಣಿ ಧೂಳಲ್ಲಿ ಪ್ರಕರಣಗಳು ಮುಚ್ಚಿಹೋಗುತ್ತಿವೆಯಾ ಎನ್ನುವ ಅನುಮಾನ ಕೂಡಾ ಬಲಗೊಳ್ಳುತ್ತಿದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪರಿಷತ್‌ಗೆ ಸಿಎಂ ಲಿಂಗಪ್ಪ ನಾಮಕರಣಕ್ಕೆ ರಾಜ್ಯಪಾಲರ ನಕಾರ

ಬೆಂಗಳೂರು: ಪರಿಷತ್‌ಗೆ ಸಿಎಂ ಲಿಂಗಪ್ಪ ನಾಮನಿರ್ದೇಶನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ತಿರಸ್ಕರಿಸಿದ್ದಾರೆ ...

news

ನಾಯಿಗೆ ಮರಣದಂಡನೆ ವಿಧಿಸಿದ ಪಾಕಿಸ್ತಾನ

ಲಾಹೋರ್: ಒಂದು ವಿಲಕ್ಷಣ ಪ್ರಕರಣದಲ್ಲಿ, ಬಾಲಕನನ್ನು ಕಚ್ಚಿದ್ದಕ್ಕಾಗಿ ಪಾಕಿಸ್ತಾನದ ಪಂಜಾಬ್ ...

news

ವಿವಾಹ ಮಂಟಪದಲ್ಲಿ ವರನಿಗೆ ರಿವಾಲ್ವರ್‌ನಿಂದ ಬೆದರಿಸಿ ಅಪಹರಿಸಿದ ಯುವತಿ

ಕಾನ್ಪುರ್: ಕಲೆ ಜೀವನವನ್ನು ಅನುಕರಿಸುತ್ತದೆ ಎಂದು ಕೆಲವರು ಹೇಳುತ್ತಾರೆ, ಇದರಿಂದಾಗಿ ಬಾಲಿವುಡ್ ಮಸಾಲಾ ...

news

ಕುಲಭೂಷಣ್ ಜಾಧವ್ ಪ್ರಕರಣದ ಬಗ್ಗೆ ನಾಳೆ ತೀರ್ಪು

ನವದೆಹಲಿ: ಕುಲಭೂಷಣ್ ಜಾಧವ ಗಲ್ಲು ವಿಚಾರ ಕುರಿತಂತೆ ಅಂತಾರಾಷ್ಟ್ರೀಯ ಕೋರ್ಟ್ ನಾಳೆ ತೀರ್ಪು ನೀಡಲಿದೆ.

Widgets Magazine Widgets Magazine Widgets Magazine