ಕಾರಾಗೃಹದಲ್ಲಿ ಚೂಡಿದಾರ್ ಧರಿಸಿ ಓಡಾಡುತ್ತಿರುವ ಶಶಿಕಲಾ..!

ಬೆಂಗಳೂರು, ಮಂಗಳವಾರ, 18 ಜುಲೈ 2017 (19:51 IST)

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಅಣ್ಣಾಡಿಎಂಕೆ ನಾಯಕಿ ವಿ.ಕೆ. ಶಶಿಕಲಾಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಡಿಐಜಿ ರೂಪಾ ವರದಿ ನೀಡಿದ ಬೆನ್ನಲ್ಲೇ ಶಶಿಕಲಾ ಯಾವುದೇ ಅಡೆತಡೆ ಇಲ್ಲದೆ ಜೈಲಿನ ಪ್ಯಾಸೇಜ್`ನಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದೆ.


ವಿಡಿಯೋದಲ್ಲಿ ಶಶಿಕಲಾ ಚೂಡಿದಾರ್ ಧರಿಸಿ ಓಡಾಡುತ್ತಿದ್ದಾರೆ. ಅವರ ಜೊತೆಗೆ ಅತ್ತಿಗೆ ಇಳವರಸಿ ಸಹ ಇದ್ದಾರೆ. ಇಬ್ಬರೂ ಜೈಲಿನ ಸಮವಸ್ತ್ರ ಧರಿಸದೇ ಸಾಮಾನ್ಯ ಉಡುಪಿನಲ್ಲೇ ಓಡಾಡುತ್ತಿದ್ದಾರೆ. ಇದು ಜೈಲಿನ ಸಿಸಿಟಿವಿ ವಿಡಿಯೋ ಎನ್ನಲಾಗುತ್ತಿದ್ದು, ವಿಡಿಯೋ ಯಾವಾಗ ಸೆರೆಯಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಕೇಂದ್ರ ಕಾರಾಗೃಹದ ಅಕ್ರಮಗಳ ಬಗ್ಗೆ ತನಿಖೆಗೆ ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದ್ದು, ತನಿಖೆ ಬಳಿಕವೇ ಸತ್ಯ ಹೊರಬರಬೇಕಿದೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಸಾಮ್ರಾಜ್ಯ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆಣ್ಣಾಡಿಎಂಕೆ ನಾಯಕಿ ...

news

ಕರ್ನಾಟಕ ಮಳೆ ಉತ್ಪಾದಿಸುವುದಿಲ್ಲ: ತಮಿಳುನಾಡಿಗೆ ಸಚಿವರ ಟಾಂಗ್

ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೆ ಉತ್ತಮ ಮಳೆಯಾಗದಿದ್ದರಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ತುಂಬಾ ...

news

ಸುಷ್ಮಾ ಸ್ವರಾಜ್ ನೆರವಿನಿಂದ ನನ್ನ ಮಗುವಿನ ಹೃದಯ ಬಡಿಯುತ್ತಿದೆ: ಪಾಕ್ ತಂದೆಯ ಕೃತಜ್ನತೆ

ಪಾಕಿಸ್ಥಾನದ ನಾಲ್ಕು ತಿಂಗಳ ಮಗು ರೋಹಾನ್‌ ಗೆ ನೋಯ್ಡಾ ಆಸ್ಪತ್ರೆಯಲ್ಲಿ ಯಶಸ್ವೀ ಹೃದಯ ಶಸ್ತ್ರಚಿಕಿತ್ಸೆ ...

news

ಉ.ಪ್ರದೇಶ: 85ರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ದುರುಳರು

ಮುಜಾಫರ್‌ನಗರ್: 85 ವರ್ಷ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ...

Widgets Magazine