ಬೆಂಗಳೂರು: ಬರೋಬ್ಬರಿ 2 ವರ್ಷಗಳ ನಂತರ ಪ್ರಾಥಮಿಕ ಶಾಲೆ ಆರಂಭವಾಗ್ತಿವೆ. ಇಷ್ಟು ದಿನ ಮನೆಯಲ್ಲಿದ್ದ 6 ರಿಂದ 8 ನೇ ತರಗತಿ ಮಕ್ಕಳು ಕೊನೆಗೂ ಶಾಲೆಗೆ ಹೋಗೋ ಭಾಗ್ಯ ಒದಗಿಸಲಾಗಿದೆ. ಶಾಲೆ ಶುರು ಮಾಡಲು ನಿರ್ಧಾರ ತೆಗೆದುಕೊಂಡಿರೋ ಇಲಾಖೆ ಮಾರ್ಗಸೂಚಿ ರೆಡಿಮಾಡಿದೆ. ಇತ್ತ ಶಾಲೆಗಳು ಸಹ ರೆಡಿ ಸ್ಟಡಿ ಗೋ ಅಂತಾ ಪುನರಾರಂಭಗೊಳ್ಳಲು ಭರ್ಜರಿ ತಯಾರಿಕೆ ನಡೆಸುತ್ತಿದೆ. ಬೆಳಗೆದ್ದು, ತಯಾರಾಗಿ, ಬ್ಯಾಗ್ ಹೆಗಲಿಗೆ ಏರಿಸ್ಕೊಂಡು ಶಾಲೆ ಕಡೆ ಮುಖ ಮಾಡ್ತಿದ್ದ