ಸತ್ತ ಮಗನ ಶವವನ್ನು ಈ ಬಡ ಅಪ್ಪ ಸಾಗಿಸಿದ ಪರಿ ಹೇಗೆ ಗೊತ್ತಾ?

Anekal, ಮಂಗಳವಾರ, 2 ಮೇ 2017 (08:10 IST)

Widgets Magazine

ಆನೇಕಲ್: ಬಡತನ ಮತ್ತು ತಿಳುವಳಿಕೆಯ ಕೊರತೆಯಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ವ್ಯಕ್ತಿಯೊಬ್ಬ ತನ್ನ ಮಗನ ಶವವನ್ನು ಸಾಗಿಸಿದ ಪರಿ ಕರುಣಾಜನಕವಾಗಿದೆ.


 
ಎಲ್ಲರೂ ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿಕೊಂಡೊಯ್ದರೆ ಈತ ದ್ವಿಚಕ್ರ ವಾಹನದಲ್ಲಿ ಸಾಗಿಸಿದ್ದಾನೆ. ಇವರ ಕರುಣಾಜನಕ ಕತೆಗೆ ಕೊನೆಗೂ ಪೊಲೀಸರ ಕಣ್ತೆರೆಸಿದೆ.
 
ಸಫಾನ್ ರಾಯ್ ಎಂಬಾತ ಮೂಲತಃ ಒಡಿಶಾ ನಿವಾಸಿ. ಕೆಲಸಕ್ಕಾಗಿ ಕರ್ನಾಟಕಕ್ಕೆ ವಲಸೆ ಬಂದಿದ್ದ. ಈತನ ಮೂರು ವರ್ಷದ ಪುತ್ರ  ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಆನೇಕಲ್ ಆಸ್ಪತ್ರೆಗೆ ದಾಖಲಾಗಿದ್ದ.
 
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಆದರೆ ಮೃತದೇಹವನ್ನು ಸಾಗಿಸಲು ಉಚಿತ ಆಂಬ್ಯುಲೆನ್ಸ್ ಸೇವೆ ಇದೆ ಎಂಬ ಮಾಹಿತಿ ಸಫಾನ್ ಗಿರಲಿಲ್ಲ. ಭಾಷೆ ಬರದ ಕಾರಣ ಆತನಿಗೆ ಸಂವಹನ ಸಮಸ್ಯೆಯಾಗಿತ್ತು.
 
ಆಸ್ಪತ್ರೆಯವರೂ ಮಾಹಿತಿ ನೀಡದೇ ಇದ್ದುದರಿಂದ ದ್ವಿಚಕ್ರ ವಾಹನದಲ್ಲೇ ಮಗನ ಶವ ಸಾಗಿಸಿದರು. ಇದನ್ನು ಕೆಲವು ಸ್ಥಳೀಯ ಚಾನೆಲ್ ಗಳು ಪ್ರಸಾರ ಮಾಡಿದ್ದವು. ಇದರಿಂದ ಪೊಲೀಸರಿಗೆ ಮಾಹಿತಿ ದೊರೆತು ಪ್ರಕರಣ ದಾಖಲಿಸಿದರಲ್ಲದೆ, ದೇಹವನ್ನು ಮರಳಿ ಆಸ್ಪತ್ರೆಗೆ ಕರೆತಂದು ಪೋಸ್ಟ್ ಮಾರ್ಟಂ ಮಾಡಿಸಿದರು. ನಂತರ ಆಂಬ್ಯುಲೆನ್ಸ್ ನಲ್ಲೇ ಸಾಗಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

200 ರೂ. ಫಿಕ್ಸ್ ಮಾಡಿ 1050 ರೂ. ಕೊಟ್ಟು ಟಿಕೆಟ್ ಖರೀದಿಸಿದ ಸಿಎಂ..?

ದುಬೈನಿಂದ ಬೆಂಗಳೂರಿಗೆ ವಾಪಸ್ಸಾದ ಸಿಎಂ ಸಿದ್ದರಾಮಯ್ಯ ಫುಲ್ ರಿಲ್ಯಾಕ್ಸ್ ಮೂಡ್`ನಲ್ಲಿದ್ದರು. ಮಗ ಮತ್ತು ...

news

ಭಾರತೀಯ ಯೋಧರ ಶಿರಚ್ಛೇದ ಪ್ರಕರಣ: ಅರುಣ್ ಜೇಟ್ಲಿ ಕೆಂಡಾಮಂಡಲ

ನವದೆಹಲಿ: ಭಾರತೀಯ ಯೋಧರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಕೆಂಡಾ ...

news

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲೆಂದೇ ಒಬ್ಬ ಸಚಿವ

ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ತಮ್ಮ ರಾಜ್ಯದ ಜನತೆಯ ಸಮಸ್ಯೆಗಳನ್ನು ಆಲಿಸಲೆಂದೇ ದಿನಕ್ಕೊಬ್ಬ ...

news

ಸೆಲ್ಫೀ ತೆಗೆಯುವ ಹುಚ್ಚಿನಲ್ಲಿ ಈ ಬಾಲಕ ಮಾಡಿದ್ದೇನು?

ಆಲಿಘಡ: ಇಂದಿನ ಯುವಜನರ ಸೆಲ್ಫೀ ಹುಚ್ಚು ಎಷ್ಟರಮಟ್ಟಿಗೆ ಇರುತ್ತದೆ ಎನ್ನುವುದನ್ನು ಹಲವು ಬಾರಿ ...

Widgets Magazine