ಪ್ರತ್ಯೇಕ ಧ್ವಜ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಮೊಳಗಿದ್ಯಾಕೆ?

ಹುಬ್ಬಳ್ಳಿ, ಶನಿವಾರ, 8 ಡಿಸೆಂಬರ್ 2018 (14:51 IST)

ರಾಜ್ಯ ಹಾಗೂ ಪ್ರತ್ಯೇಕ ಧ್ವಜಾರೋಹಣಕ್ಕಾಗಿ ಸಿದ್ಧತೆ ಸದ್ದಿಲ್ಲದೇ ಆರಂಭಗೊಂಡಿದೆ.

 ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಕುರಿತು ಉತ್ತರ ಕರ್ನಾಟಕ ಸಮಿತಿಯಿಂದ ಘೋಷಣೆ ಮಾಡಲಾಗಿದೆ.  ಧ್ವಜಾರೋಹಣದಲ್ಲಿ ಉತ್ತರ ಕರ್ನಾಟಕದ 13 ಜಿಲ್ಲೆಗಳ ಹೋರಾಟಗಾರರು ಭಾಗಿಯಾಗಲಿದ್ದಾರೆ.

 ಕಳೆದ ಜುಲೈ 31 ರಂದು ಸುವರ್ಣ ಸೌಧದ ಎದುರು ಪ್ರಮುಖ ಮಠಾಧೀಶರು ಧರಣಿ ಮಾಡಿದ್ದರು. ಉತ್ತರ ಕರ್ನಾಟಕಕ್ಕೆ ತೋರುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ರಾಜ್ಯ ಸರ್ಕಾರ ರಚನೆಯಾಗಿ ಐದಾರು ತಿಂಗಳಾದರೂ ಉತ್ತರ ಕರ್ನಾಟಕ ಅಭಿವೃದ್ಧಿ ಹಿನ್ನೆಡೆ ಕಂಡಿದೆ ಎಂದು ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಹಾಗೂ ಧ್ವಜಾರೋಹಣ ನಡೆಸಲಾಗುತ್ತಿದೆ. ಇದಕ್ಕೆ 30 ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಳ್ಳಿ ರಥದ ಮೆರವಣಿಗೆಯಲ್ಲಿ ಕನ್ನಡ ಸಾಹಿತಿಯ ಮೆರವಣಿಗೆ..!

ಅಲ್ಲಿ ಎಲ್ಲೆಲ್ಲೂ ಕನ್ನಡದ ಬಾವುಟಗಳು ಹಾರಾಡುತ್ತಿದ್ದವು… ಕನ್ನಡ ಕಸ್ತೂರಿಯ ಕಂಪು ಎಲ್ಲೆಡೆ ಮನೆಮಾಡಿತ್ತು… ...

news

ಅಂಬಿ ಹುಟ್ಟೂರಿಗೆ ಭೇಟಿಗೆ ಮುನ್ನ ಮನೆ ದೇವರ ದರ್ಶನ ಪಡೆದ ಸುಮಲತಾ

ದಿವಂಗತ ಅಂಬರೀಶ್ ಹುಟ್ಟೂರಿಗೆ ಭೇಟಿಗೆ ಮುನ್ನ ಮನೆ ದೇವರ ದರ್ಶನವನ್ನು ಸುಮಲತಾ ಪಡೆದುಕೊಂಡರು.

news

ಡಿಸ್ನಿಲ್ಯಾಂಡ್ ನಿರ್ಮಾಣ ಸ್ಥಳ ಪರಿಶೀಲಿಸಿದ ಸಚಿವರು, ಸ್ಥಳೀಯ ಶಾಸಕ ಗೈರಾಗಿದ್ದೇಕೆ?

ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್ ಎಸ್ ಅಭಿವೃದ್ಧಿಗೆ ಸರಕಾರ ಚಿಂತನೆ ನಡೆಸಿದ್ದು, ಅದಕ್ಕೆ ಪೂರಕವಾಗಿ ...

news

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ಯಾರಿಗೆ?

ಬೆಂಗಳೂರು : ಸಿಎಜಿ ವರದಿ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.

Widgets Magazine