ಧಾರವಾಹಿ ನೋಡಿ ಈ ಕೆಲಸ ಮಾಡಿದಳಾ ಬಾಲಕಿ?!

ಬೆಂಗಳೂರು, ಗುರುವಾರ, 30 ನವೆಂಬರ್ 2017 (10:13 IST)

ಬೆಂಗಳೂರು: ಧಾರವಾಹಿಗಳು ಜನರ ಮನಸ್ಸಿಗೆ ಎಷ್ಟು ಬೇಗ ತಲುಪುತ್ತದೆ ಮತ್ತು ಎಷ್ಟು ಪರಿಣಾಮಕಾರಿಯಾಗುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ.
 
ಅದೇ ರೀತಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿ ನೋಡುತ್ತಿದ್ದ ಪರಿವಾರದ ಮಗುವೊಂದು ಧಾರವಾಹಿಯ ಪ್ರಭಾವದಿಂದ ಮೈಗೆ ಬೆಂಕಿ ಹಚ್ಚಿಕೊಂಡು ಸಾವಿಗೀಡಾದ ಶಂಕೆ ವ್ಯಕ್ತವಾಗಿದೆ.
 
ಧಾರವಾಹಿಯಲ್ಲಿ ಬರುವ ದೃಶ್ಯವನ್ನು ನೋಡಿ ಪ್ರೇರಣೆಗೊಂಡ 7 ವರ್ಷದ ಬಾಲಕಿ ಈ ಘೋರ ಕೃತ್ಯಕ್ಕೆ ಮುಂದಾಗಿರಬೇಕೆಂದು ಶಂಕಿಸಲಾಗಿದೆ. ನ.12 ರಂದೇ ಬಾಲಕಿ ಬೆಂಕಿ ಅನಾಹುತದಿಂದ ಸಾವಿಗೀಡಾಗಿದ್ದಳು. ಆದರೆ ಆಗ ಆಕಸ್ಮಿಕವಾಗಿ ಬೆಂಕಿ ತಗಲಿ ಬಾಲಕಿ ಸಾವನ್ನಪ್ಪಿರುವುದಾಗಿ ದೂರು ದಾಖಲಿಸಿದ್ದ ಪೋಷಕರು  ಇದೀಗ ತಮ್ಮ ಮಗಳ ಸಾವಿಗೆ ಧಾರವಾಹಿ ದೃಶ್ಯವೇ ಕಾರಣ ಎನ್ನುತ್ತಿದ್ದಾರೆ.
 
ಇಷ್ಟು ತಡವಾಗಿ ಇಂತಹದ್ದೊಂದು ಆರೋಪ ಮಾಡಲು ಕಾರಣವೇನೆಂದು ತಿಳಿದುಬಂದಿಲ್ಲ. ನೆರೆಹೊರೆಯವರ ಪ್ರಕಾರ ಮಗುವಿನ ಕುಟುಂಬದವರು ನಂದಿನಿ ಧಾರವಾಹಿ ನೋಡುತ್ತಿದ್ದರಂತೆ. ಆದರೆ ಅದುವೇ ಬಾಲಕಿಯ ಕೃತ್ಯಕ್ಕೆ ಪ್ರೇರಣೆಯಾಯಿತಾ ಎಂಬುದು ಇನ್ನೂ ಗೊಂದಲದಲ್ಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಉದಯ ಟಿವಿ ನಂದಿನಿ ಧಾರವಾಹಿ ಬೆಂಕಿ ಅನಾಹುತ ಅಪರಾಧ ಸುದ್ದಿಗಳು Udaya Tv Nandini Serial Fire Tragedy Crime News

ಸುದ್ದಿಗಳು

news

‘ಕುಮಾರಸ್ವಾಮಿ ಸಿಎಂ ಆಗೋದು ತಡೆಯಕ್ಕೆ ಯಾರಿಂದಲೂ ಸಾಧ್ಯವಿಲ್ಲ’

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿ, ಕುಮಾರಸ್ವಾಮಿ ಸಿಎಂ ಆಗುವುದನ್ನು ತಪ್ಪಿಸಲು ...

news

ರಮ್ಯಾ ಬಗ್ಗೆ ನಮಗೇನೂ ಗೊತ್ತಿಲ್ಲಪ್ಪ.. ಎಂದ್ರು ಕೈ ನಾಯಕರು!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ನಿನ್ನೆ ಹುಟ್ಟುಹಬ್ಬ ...

news

ರಾಹುಲ್ ಗಾಂಧಿ ಸೋಮನಾಥ ದೇವಾಲಯ ಭೇಟಿ ಬೆನ್ನಲ್ಲೇ ವಿವಾದ

ಅಹಮ್ಮದಾಬಾದ್: ಗುಜರಾತ್ ಮತದಾರರನ್ನು ಸೆಳೆಯಲು ರ್ಯಾಲಿ ಜತೆಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ...

news

ನಟಿ ರಮ್ಯಾಗೆ ಸಿಎಂ ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು: ನಿನ್ನೆ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ. ಸಹಜವಾಗಿ ಅವರ ...

Widgets Magazine