Widgets Magazine

ರಾಜ್ಯದಲ್ಲಿ ‘ಕರ್ನಾಟಕ ಜನತಾ ರಂಗ 'ಎಂಬ ಹೊಸ ಪಕ್ಷ ಸ್ಥಾಪನೆ

ಬೆಂಗಳೂರು| pavithra| Last Modified ಮಂಗಳವಾರ, 12 ಫೆಬ್ರವರಿ 2019 (11:42 IST)
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಿಂದ ಜನತೆ ಬೇಸತ್ತು ಹೋದ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯದಲ್ಲಿ ಹೊಸ ಪಕ್ಷವೊಂದನ್ನು ಸ್ಥಾಪನೆ ಮಾಡಿದ್ದಾರೆ.


ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾರೆಡ್ಡಿ ಅವರು `ಕರ್ನಾಟಕ ಜನತಾ ರಂಗ' ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಹಾಗೇ ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರದಿಂದ ‘ಕರ್ನಾಟಕ ಜನತಾ ರಂಗ' ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಅಲ್ಲದೇ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರ, ಸೃಜನ ಪಕ್ಷಪಾತ ಹಾಗೂ ಕುಟಿಲ ರಾಜಕೀಯದಲ್ಲಿ ಮುಳುಗಿ ಹೋಗಿವೆ. ಹಾಗಾಗಿ ಕೆಲವು ಸಮಾನ ಮನಸ್ಕರರು ಸೇರಿಕೊಂಡು ಪರ್ಯಾಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದೇವೆ ಎಂದು ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :