Widgets Magazine
Widgets Magazine

ಕನ್ನಡದ ಹಬ್ಬಕ್ಕೆ ಬರಲೊಲ್ಲೆ ಎಂದ ಕನ್ನಡತಿ ಶಿಲ್ಪಾ ಶೆಟ್ಟಿ..!

ಬೆಳಗಾವಿ, ಗುರುವಾರ, 27 ಅಕ್ಟೋಬರ್ 2016 (14:03 IST)

Widgets Magazine

ಬೆಳಗಾವಿ: ಪ್ರಸ್ತುತ ವರ್ಷ ಬೆಳಗಾವಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಹಾಲಿವುಡ್ ನಟಿ, ಕನ್ನಡತಿ ಶಿಲ್ಪಾ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ರದ್ದಾಗಿದೆ.
 

ಕನ್ನಡದ ಚೆಲುವೆ ಶಿಲ್ಪಾ ಶೆಟ್ಟಿ ಅವರನ್ನು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಆಚರಿಸಬೇಕೆಂದು ಜಿಲ್ಲಾಡಳಿತ ನಿರ್ಧರಿಸಿತ್ತು. ವಿದೇಶಗಳಲ್ಲಿ ಕನ್ನಡದ ಪತಾಕೆಯನ್ನು ಹಾರಿಸಿದ ಶಿಲ್ಪಾ ಶೆಟ್ಟಿ ಅವರನ್ನು ಕರೆಸಿದರೆ, ಕನ್ನಡದ ಹಬ್ಬಕ್ಕೆ ಇನ್ನಷ್ಟು ಕಳೆ ಬರುವುದಲ್ಲದೆ, ವಿದೇಶದಲ್ಲಿ ಕನ್ನಡ ಮತ್ತಷ್ಟು ಕೀರ್ತಿ ಪಡೆಯುತ್ತದೆ ಎನ್ನುವುದು ಜಿಲ್ಲಾಧಿಕಾರಿ ಎನ್. ಜೈರಾಮ ಅವರ ಮುಂದಾಲೋಚನೆಯಾಗಿತ್ತು. ಅದರಂತೆ, ಶಿಲ್ಪಾ ಶೆಟ್ಟಿ ಅವರನ್ನು ರಾಜ್ಯೋತ್ಸವದ ಮೆರವಣಿಗೆಗೆ ಕರೆತರುವ ಪ್ರಯತ್ನ ಮಾಡಲಾಗಿತ್ತು. ಅದಕ್ಕೆ ಶಿಲ್ಪಾ ಶೆಟ್ಟಿ ಒಪ್ಪಿಗೆಯನ್ನೂ ನೀಡಿದ್ದರು. ಆದರೆ, ಕನ್ನಡದ ಹಬ್ಬ ಹತ್ತಿರ ಬರುತ್ತಿದ್ದಂತೆ ಕೆಲವು ತಾಂತ್ರಿಕ ಕಾರಣಗಳನ್ನು ಒಡ್ಡಿ, ಬರಲಾಗದು ಎಂದು ತಿಳಿಸಿದ್ದಾರೆ. ಇದರಿಂದಾಗಿ ಶಿಲ್ಪಾ ಶೆಟ್ಟಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಇದರಿಂದಾಗಿ ಶಿಲ್ಪಾ ಶೆಟ್ಟಿಯ ಕಾರ್ಯಕ್ರಮ ರದ್ದಾಗಿದೆ.

 

ಶಿಲ್ಪಾ ಶೆಟ್ಟಿ ಬರದಿದ್ದರೇನಂತೆ, ಅದಕ್ಕೆ ಬದಲಾಗಿ ಇನ್ನಷ್ಟು ರಂಜನೀಯವಾಗಿ ಕನ್ನಡದ ಹಬ್ಬ ಆಚರಿಸಬೇಖೆಂದು ಪಣತೊಟ್ಟ ಜಿಲ್ಲಾಡಳಿತ ನೆಂಬರ್ 1ರ ಬದಲಾಗಿ, ಮೊದಲನೇ ವಾರ ಬೆಳಗಾವಿಯ ಸರ್ದಾರ ಮೈದಾನದಲ್ಲಿ ಅದ್ಧೂರಿ ರಸ ಮಂಜರಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ. ಆ ವೈಭವದ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕರೊಬ್ಬರನ್ನು ಕರೆಯಿಸಲು ಚಿಂತನೆ ನಡೆಸಿದೆ. ಇದರಿಂದ ಗಡಿ ನಾಡು ಬೆಳಗಾವಿಯಲ್ಲಿ ಕನ್ನಡದ ಹಬ್ಬ ವಿಜೃಂಭಿಸಲಿದೆ. ಹೀಗೆ ಜಿಲ್ಲಾಧಿಕಾರಿ ಜಯರಾಮ್ ಅವರು ವೈವಿಧ್ಯಮಯ ಕಾರ್ಯಕ್ರಮ ನಡೆಸುವ ಮೂಲಕ ಬೆಳಗಾವಿಯನ್ನು ಕನ್ನಡಮಯವನ್ನಾಗಿಸಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕರ್ನಾಟಕ ರಾಜ್ಯೋತ್ಸವ ಶಿಲ್ಪಾ ಶೆಟ್ಟಿ ಬೆಳಗಾವಿ ಕಾರ್ಯಕ್ರಮ Belagavi Program Karnataka Rajyotsava Shilpa Shetti

Widgets Magazine

ಸುದ್ದಿಗಳು

news

ಪ್ರತಿಯೊಬ್ಬ ದೇಶಪ್ರೇಮಿ ನೋಡಲೇಬೇಕಾದ ವಿಡಿಯೋ.

ದೇಶಕ್ಕಾಗಿ ಸರ್ವವನ್ನು ತ್ಯಾಗ ಮಾಡುವ ಸೈನಿಕರೆಂದರೆ ಯಾರಿಗೆ ತಾನೇ ಹೆಮ್ಮೆ ಇರುವುದಿಲ್ಲ ಹೇಳಿ. ತಮ್ಮ ...

news

ಕೇಜ್ರಿವಾಲ್‌ನನ್ನು ಕೊಲ್ಲುತ್ತೇನೆ: ಪೊಲೀಸರಿಗೆ ಪೋನ್ ಕರೆ

ವ್ಯಕ್ತಿಯೊಬ್ಬ ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಇರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ...

news

ಜಿಹಾದಿಗಳಿಂದಲೇ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ?

ಹಾಡುಹಗಲೇ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ...

news

ಮುಸ್ಲಿಂ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನಿರಾಕರಣೆ..!

ಮಂಗಳೂರು: ಮೂವತ್ತು ಮಂದಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡಲು ...

Widgets Magazine Widgets Magazine Widgets Magazine