ಹರತಾಳು ಹಾಲಪ್ಪ ವಿರುದ್ಧದ ರೇಪ್ ಕೇಸ್ ತೀರ್ಪು ಇಂದು ಪ್ರಕಟ

ಶಿವಮೊಗ್ಗ, ಮಂಗಳವಾರ, 8 ಆಗಸ್ಟ್ 2017 (09:53 IST)

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರವೆಸಗಿದ ಆರೋಪ ೆದುರಿಸುತ್ತಿರುವ ಮಾಜಿ ಸಚಿವ ವಿರುದ್ಧದ ಪ್ರಕರಣದ ತೀರ್ಪು ಇಂದು ಹೊರ ಬೀಳಲಿದೆ. ಶಿವಮೊಗ್ಗದ 2ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಲಿದೆ.7 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.


ಮಾಜಿ ಸಚಿವ ಹರತಾಳು ಹಾಲಪ್ಪ ಅವರು ವಿನೋಬನಗರ ಕಲ್ಲಹಳ್ಳಿಯಲ್ಲಿರುವ ಮನೆಯಲ್ಲಿ ಸ್ನೇಹಿತ ವೆಂಕಟೇಶಮೂರ್ತಿಯವರ ಪತ್ನಿ ಮೇಲೆ 2009ನೇ ನವೆಂಬರ್ 26ರಂದು ಎಸಗಿದ್ದರೆಂದು ಆರೋಪಿಸಲಾಗಿದ್ದು, ಪ್ರಕರಣ 2010ನೇ ಮೇ 2ರಂದು ಬೆಳಕಿಗೆ ಬಂದಿತ್ತು. ಹೀಗಾಗಿ, ಹಾಲಪ್ಪ ಅವರು ತಮ್ಮ ಸಚಿವಗಿರಿಗೆ ರಾಜೀನಾಮೆ ನೀಡಿದ್ದರು.

ಅತ್ಯಾಚಾರ ಆರೋಪ ಮಾಡಿದ್ದ ವೆಂಕಟೇಶಮೂರ್ತಿ ಪತ್ನಿ  ಬೆಂಗಳೂರಲ್ಲಿ ಪೊಲೀಸ್ ಮಹಾನಿರ್ದೇಶಕರು, ಶಿವಮೊಗ್ಗದ ವಿನೋಬನಗರ ಠಾಣೆಗೆ ದೂರು ನೀಡಿದ್ದರು. ರಾಜ್ಯಾದ್ಯಂತ ಪ್ರಕರಣ ಭಾರೀ ಸದ್ದು ಮಾಡಿತ್ತು. ಬಳಿಕ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕರಣವನ್ನ ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಪ್ರಕರಣದ ಬಗ್ಗೆ ಮಾರ್ಚ್ 30, 2011ರಂದು ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯಸಭೆ ಚುನಾವಣೆ ಗೆಲ್ಲಲೇ ಬೇಕೆಂಬ ಜಿದ್ದು ಬಿಜೆಪಿಗೇಕೆ?

ನವದೆಹಲಿ: ಸಂಸತ್ತಿನ ಮೇಲ್ಮನೆಯ ಮೂರು ಸ್ಥಾನಗಳಿಗೆ ಗುಜರಾತ್ ನಲ್ಲಿ ನಡೆಯುತ್ತಿರುವ ಚುನಾವಣೆ ದೇಶದ ಎರಡು ...

news

‘ಕಾಂಗ್ರೆಸ್ ಅಸ್ತಿತ್ವಕ್ಕೇ ಕುತ್ತು ಬಂದಿದೆ’

ಕೊಚ್ಚಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಲೆಯಲ್ಲಿ ದೇಶದ ಹಿರಿಯ ...

news

ಪ್ರಧಾನಿ ಮೋದಿ ಬಗ್ಗೆ ಚೀನಾ ಅಧ್ಯಕ್ಷರಿಗೆ ಭಯವಿದೆಯಂತೆ!

ನವದೆಹಲಿ: ಪ್ರಧಾನಿ ಮೋದಿ ಭಾರತದ ಹಿತಕ್ಕಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಲ್ಲ ಚಾಣಕ್ಷ್ಯ ಎಂಬ ಭಯ ಚೀನಾ ...

news

ಅಹ್ಮದ್ ಪಟೇಲ್`ಗೆ ಇಂದು ಅಗ್ನಿ ಪರೀಕ್ಷೆ: ಸಫಲವಾಗುತ್ತಾ ಡಿಕೆಶಿ ಶ್ರಮ..?

ಗುಜರಾತ್`ನಲ್ಲಿಂದು 3 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕಳೆದ 20 ದಿನಗಳಿಂದ ನಡೆದ ...

Widgets Magazine