ಅಯ್ಯರ್ ಅಮಾನತು ಕಣ್ಣೊರೆಸುವ ತಂತ್ರವೆಂದ ಶೋಭಾ

ಉಡುಪಿ, ಶುಕ್ರವಾರ, 8 ಡಿಸೆಂಬರ್ 2017 (17:32 IST)

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೀಚ ಎಂದು ಕರೆದಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಅಮಾನತು ಮಾಡುವ ಮೂಲಕ ಕಾಂಗ್ರೆಸ್ ಕಣ್ಣೊರೆಸುವ ತಂತ್ರವನ್ನು ಅನುಸರಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀಚ ಎಂಬ ಪದ ಬಳಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಣಿಶಂಕರ್ ಅಯ್ಯರ್ ಮಾತನಾಡಿದ್ದು, ಕಾಂಗ್ರೆಸ್‍ನ ಮಾನಸಿಕ ಮನಸ್ಥಿತಿಯನ್ನು ತೋರಿಸುತ್ತದೆ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಮಾತ್ರ ಚಡಪಡಿಕೆಯ ಮಾತು ಬರುತ್ತದೆ ಎಂದು ಕಿಡಿಕಾರಿದ್ದಾರೆ.
 
ಭಾರತವನ್ನು ಕಾಂಗ್ರೆಸ್‍ನ ವಂಶಾಡಳಿತಕ್ಕೆ ಬರೆದುಕೊಟ್ಟಿಲ್ಲ. ಅಧಿಕಾರ ಇಲ್ಲದಿದ್ದಾಗ ಇವರಿಗೆ ಚಡಪಡಿಕೆ ಶುರುವಾಗುತ್ತದೆ. ಅದರ ಪ್ರತಿಫಲವೇ ನೀಚ ಎಂಬ ಶಬ್ದವನ್ನು ಬಳಸಿರುವುದು. ಗುಜರಾತಿನ ಜನರು ಕಾಂಗ್ರೆಸ್‍ಗೆ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಯಿ ಪರವಾಗಿ ಮಾನತನಾಡಿದ್ದಕ್ಕೆ ತಂದೆಯಿಂದ ಮಗಳ ಕೊಲೆ

ತಾಯಿಯ ಪರವಾಗಿ ಮಾತನಾಡುತ್ತಾಳೆ ಎಂದು ಸಿಟ್ಟುಗೊಂಡ ಪಾಪಿ ತಂದೆಯೊಬ್ಬ 18 ವರ್ಷದ ಮಗಳನ್ನೇ ಕತ್ತು ಹಿಸುಕಿ ...

news

ಸಿಸಿಬಿ ಎದುರು ರವಿ ಬೆಳಗೆರೆಯ ಹೈಡ್ರಾಮಾ!

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಸಿಸಿಬಿ ಅವರಿಂದ ರವಿ ...

news

ವಿಧಾನಸೌಧದ ಗೇಟ ಬಳಿ ನಿಂತಿದ್ದ ಕಾರಲ್ಲಿ ಕೋಟಿ ಹಣ ಪತ್ತೆ

ಬೆಂಗಳೂರು: ವಿಧಾನಸೌಧದ ಗೇಟಿನ ಬಳಿ ನಿಂತಿದ್ದ ಕಾರಲ್ಲಿ ಹಣ ಪತ್ತೆಯಾದ ಘಟನೆ ನಡೆದಿದೆ.

news

ಪ್ರಧಾನಿ ಮೋದಿ ಜನವಿರೋಧಿ ನೀತಿಗೆ ಬೇಸತ್ತು ಬಿಜೆಪಿ ಸಂಸದ ರಾಜೀನಾಮೆ

ನವದೆಹಲಿ: ಮಹಾರಾಷ್ಟ್ರದ ಗೊಂಡಿಯಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಾನಾ ಪಾಟೋಳೆ ರಾಜೀನಾಮೆ ...

Widgets Magazine
Widgets Magazine