ಕೇಂದ್ರ ಸರ್ಕಾರಕ್ಕೆ ಸುಳ್ಳು ವರದಿ ಕೊಟ್ಟರಾ ಶೋಭಾ ಕರಂದ್ಲಾಜೆ..?

ಬೆಂಗಳೂರು, ಬುಧವಾರ, 19 ಜುಲೈ 2017 (11:55 IST)

Widgets Magazine

ಕೋಮು ಗಲಭೆಯಲ್ಲಿ ಹತ್ಯೆಗೀಡಾದವರ ಪಟ್ಟಿಯನ್ನ ಕೇಂದ್ರ ಸರ್ಕಾರಕ್ಕೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ಬೇರೆ ಬೇರೆ ಕಾರಣಗಳಿಂದ ಮೃತಪಟ್ಟವರ ಹೆಸರುಗಳನ್ನ ಸೇರಿಸಿ 23 ಮಂದಿ ಕೋಮು ದಳ್ಳುರಿಗೆ ಬಲಿಯಾಗಿದ್ಧಾರೆಂದು ಕೇಂದ್ರ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 


ಸಹೋದರಿಯಿಂದ ಹತ್ಯೆಗೀಡಾದ ಕಾರ್ತಿಕ್ ರಾಜ್, ಆತ್ಮಹತ್ಯೆ ಮಾಡಿಕೊಂಡ ಮೂಡಬಿದಿರೆಯ ವಾಮನ ಪೂಜಾರಿ ಅವರನ್ನ ಹೆಸರನ್ನೂ ಕೇಂದ್ರಕ್ಕೆ ನೀಡಿರುವ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇದೇವೇಲೆ, ಗಲಭೆ ವೇಳೆ, ಗಾಯಗೊಂಡಿರುವ ಅಶೋಕ್ ಪೂಜಾರಿ ಸಹ ಮೃತಪಟ್ಟಿದ್ದಾರೆಂದು ವರದಿ ನೀಡಿರುವುದಾಗಿ ತಿಳಿದುಬಂದಿದೆ. ವಿಪರ್ಯಾಸವೆಂದರೆ, ಶೋಭಾ ಕರಂದ್ಲಾಜೆ ನೀಡಿರುವ ಪಟ್ಟಿಯಲ್ಲಿ ಮೊದಲನೇ ಹೆಸರೇ ಅಶೋಕ್ ಪೂಜಾರಿ ಅವರದ್ದು. ಸೆಪ್ಟೆಂಬರ್ 20ರ 2015ರಂದು ಅಶೋಕ್ ಪೂಜಾರಿ ಹತ್ಯೆಗೀಡಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಅಂದು ಅಶೋಕ್ ಪೂಜಾರಿ ಮೇಲೆ ಹಲ್ಲೆ ಮಾತ್ರ ನಡೆದಿದ್ದು, ಈಗಲೂ ಜೀವಂತವಾಗಿದ್ಧಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ಕೇಂದ್ರ ಸರ್ಕಾರದಿಂದ ಶಹಭಾಸ್`ಗಿರಿ ಗಿಟ್ಟಿಸಿಕೊಳ್ಳಲು ಶೋಭಾ ಕರಂದ್ಲಾಜೆ ಈ ವರದಿ ನೋಡಿದರೆ..? ರಾಜ್ಯದಲ್ಲಿ ಗಲಭೆಯಾಗು ಈ ಸಂದರ್ಭದಲ್ಲಿ ಶೋಭಾ ನೀಡಿರುವ ವರದಿ ಹಲವು ಪ್ರಶ್ನೆಗಳನ್ನ ಎತ್ತುವಂತೆ ಮಾಡಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ, ತಪ್ಪಾಗಿರುವುದು ನಿಜ ಸರಿ ಮಾಡಿ ಮತ್ತೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ವರದಿಯಿಂದ ಕೋಮು ದಳ್ಳುರಿ ಹೆಚ್ಚಿಸುವುದು ಶೋಭಾ ಕರಂದ್ಲಾಜೆ ಉದ್ದೇಶ ಎಂಬುದು ಸ್ಪಷ್ಟವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಡಿಐಜಿ ರೂಪಾಗೆ ಮಾಹಿತಿ ಕೊಟ್ಟ ಕೈದಿಯ ಮರ್ಮಾಂಗಕ್ಕೆ ಒದ್ದರಾ..?

ಡಿಐಜಿ ರೂಪಾ ಅವರಿಗೆ ಪರಪ್ಪನ ಅಗ್ರಹಾರ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ ಕೈದಿಗೆ ಮರ್ಮಾಂಗಕ್ಕೆ ಒದ್ದಿರುವ ...

news

379 ರೂ. ಕಳ್ಳತನ ಪ್ರಕರಣ 29 ವರ್ಷ ವಿಚಾರಣೆ, 5 ವರ್ಷ ಜೈಲು! ಇದೆಂಥಾ ವಿಚಿತ್ರ!?

ನವದೆಹಲಿ: ನಮ್ಮ ದೇಶದಲ್ಲಿ ಕೋರ್ಟ್ ವಿಚಾರಣೆಗಳು ಬೇಗನೇ ಮುಗಿಯಲು ಕ್ರಮ ಕೈಗೊಳ್ಳಬೇಕೆಂದು ಕಾನೂನು ತಜ್ಞರು ...

news

15 ವರ್ಷಗಳ ಬಳಿಕ ರೈಲು ಹತ್ತಿದ ಗಂಗೂಲಿಗೆ ಶಾಕ್..!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ 15 ವರ್ಷಗಳ ಬಳಿಕ ಟ್ರೇನ್ ಹತ್ತಿದ್ದರು. ಆದರೆ, ಅವರ ...

news

ಭಾರತವನ್ನು ವಿಲನ್ ಮಾಡಲು ಸರ್ವ ಪ್ರಯತ್ನ ನಡೆಸುತ್ತಿರುವ ಚೀನಾ

ನವದೆಹಲಿ: ಢೋಕ್ಲಂ ಗಡಿಯಲ್ಲಿ ಸಮರಾಭ್ಯಾಸ ನಡೆಸಿ ಭಾರತಕ್ಕೆ ಎಚ್ಚರಿಕೆ ನೀಡಿದ್ದ ಚೀನಾ ಇದೀಗ ಮತ್ತೊಮ್ಮೆ ...

Widgets Magazine