ಕೆಂಪಯ್ಯನ ಮೂಲಕವೇ ಎಲ್ಲಾ ಮಾಡ್ಸಿ: ಕರಂದ್ಲಾಜೆ ಲೇವಡಿ

ಕಲಬುರಗಿ, ಮಂಗಳವಾರ, 11 ಜುಲೈ 2017 (15:06 IST)

ಮಂಗಳೂರಿನ ಗಲಭೆ ನಿಯಂತ್ರಣಕ್ಕೆ ಉಸ್ತುವಾರಿಯಾಗಿ ಕೆಂಪಯ್ಯನವರನ್ನು ವಹಿಸಲಾಗುವುದು ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಕೆಂಪಯ್ಯನವರ ಮೂಲಕವೇ ಎಲ್ಲಾ ಮಾಡಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಗೃಹ ಸಚಿವರ ಸಲಹೆಗಾರರಾಗಿರುವ ನನಗೆ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿ ಉದ್ಯೋಗದಿಂದ ನಿರ್ಗಮಿಸಿದ್ದಾರೆ. ಅಂತಹ ವ್ಯಕ್ತಿಗೆ ಮಂಗಳೂರಿನ ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂದು ಲೇವಡಿ ಮಾಡಿದ್ದಾರೆ.
 
ಮಂಗಳೂರು ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪ ಎದುರಿಸುತ್ತಿರುವ ಸಚಿವರಾದ ರಮಾನಾಥ್ ರೈ ಮತ್ತು ಯು.ಟಿ.ಖಾದರ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
 
ದಕ್ಷಿಣ ಕನ್ನಡದಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ವಿಡಿಯೋಗಳಲ್ಲಿ ದೃಶ್ಯಗಳು ದಾಖಲಾಗಿವೆ. ವಿಡಿಯೋಗಳನ್ನು ನೋಡಿ ಅಪರಾಧಿಗಳ ವಿರುದ್ಧ ಸರಕಾರ ಕ್ರಮಕೈಗೊಳ್ಳಲಿ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕೆಂಪಯ್ಯ ಶೋಭಾ ಕರಂದ್ಲಾಜೆ ಬಿಜೆಪಿ ಮಂಗಳೂರು ಘಟನೆ Kempayya Bjp Shobha Karandlaje Mangalore Incident

ಸುದ್ದಿಗಳು

news

ಬಿಜೆಪಿಯವರು ಸುಮ್ಮನಿದ್ರೆ ಎಲ್ಲಾ ಗಲಾಟೆಗಳು ನಿಲ್ಲುತ್ತವೆ: ಸಿಎಂ ತಿರುಗೇಟು

ಬೆಂಗಳೂರು: ಮಂಗಳೂರಿನಲ್ಲಿ ಗಲಾಟೆ ಮಾಡುವವರು ಬೇರೆ ಕಡೆಯಿಂದ ಬಂದವರಲ್ಲ. ಗಲಾಟೆ ಮಾಡುವವರು ನಮ್ಮಲ್ಲಿಯೇ ...

news

ಅಮರ್‌ನಾಥ್ ಯಾತ್ರಿಕರ ದಾಳಿಯ ವೇಳೆ ರಕ್ಷಕನಾಗಿ ಬಂದ ಪುಣ್ಯಾತ್ಮ ಯಾರು ಗೊತ್ತಾ?

ಅಹ್ಮದಾಬಾದ್: ಅಮರ್‌ನಾಥ್ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ ಚಾಲಕ ಸಲೀಂ ಬುದ್ಧಿವಂತಿಕೆಯಿಂದ ವರ್ತಿಸದೆ ...

news

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್, ಬಿಜೆಪಿ ಮ್ಯಾಚ್ ಫಿಕ್ಸಿಂಗ್: ಕುಮಾರಸ್ವಾಮಿ

ಬೆಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮು ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಒನ್ ಡೇ ಮ್ಯಾಚ್ ...

news

ಗೋವುಗಳ ಮಾರಾಟ, ಸರಬರಾಜು ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ

ಕೇಂದ್ರ ಸರ್ಕಾರದ ಗೋಹತ್ಯೆ, ಗೋವುಗಳ ಸರಬರಾಜು ನಿಷೇಧ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಕೇಂದ್ರದ ...

Widgets Magazine