ಸಿಎಂ ಸಿದ್ದರಾಮಯ್ಯ ಕೈಗೆ ರಕ್ತ ಅಂಟಿಕೊಂಡಿದೆ: ಕರಂದ್ಲಾಜೆ

ಮಂಗಳೂರು, ಶನಿವಾರ, 8 ಜುಲೈ 2017 (16:54 IST)

ಕೈಗೆ ರಕ್ತ ಅಂಟಿಕೊಂಡಿದೆ. ನೀವು ಯಾಕೆ ಜಾತಿರಾಜಕಾರಣ ಮಾಡುತ್ತಿದ್ದೀರಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
 
ಹಿಂದುಗಳಿಗೊಂದು ಕಾನೂನು ಮುಸ್ಲಿಮರಿಗೊಂದು ಕಾನೂನು ನ್ಯಾಯವೇ ಎಂದು ಪ್ರಶ್ನಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಫ್‌ಡಿ ಮತ್ತು ಎಸ್‌ಡಿಪಿಐ ಸಂಘಟನೆಗಳು ಹಿಂದುಗಳ ವಿರುದ್ಧ ದ್ವೇಷ ಸಾಧಿಸುತ್ತಿವೆ ಎಂದು ಆರೋಪಿಸಿದ್ದಾರೆ.
 
ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದಾಗ ಬಿಜೆಪಿ ನಾಯಕರ ಮೇಲೆ ಕೇಸ್‌ಗಳನ್ನು ಹಾಕುತ್ತೀರಾ, ಸಿಎಂ ಸಿದ್ದರಾಮಯ್ಯ ಕೂಡಾ ಮಂಗಳೂರಿಗೆ ಆಗಮಿಸಿದ್ದರಿಂದ ಅವರ ವಿರುದ್ಧವು ಪೊಲೀಸರು ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
 
ಕಲ್ಲಡ್ಕ ಪ್ರಭಾಕರ್ ವಿರುದ್ಧ ಮಂಗಳೂರು ಮುಸ್ಲಿಂ ಎನ್ನುವ ಸಂಘಟನೆ ಫೇಸ್‌ಬುಕ್‌‌ನಲ್ಲಿ ಜೀವ ಬೆದರಿಕೆಯೊಡ್ಡಿದೆ. ಆದಾಗ್ಯೂ ಸೈಬರ್ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಶೋಭಾ ಕರಂದ್ಲಾಜೆ ಬಿಜೆಪಿ ಕಾಂಗ್ರೆಸ್ Bjp Congress Cm Siddaramaiah Shobha Karandlaje Bantwal Murder

ಸುದ್ದಿಗಳು

news

ಜೆಟ್ ಬ್ಲಾಸ್ಟ್: ಇಂಡಿಗೋ ಬಸ್ ಗೆ ತಗುಲಿದ ವಿಮಾನದ ರಕ್ಕೆ; ಐವರಿಗೆ ಗಾಯ

ಸ್ಪೈಸ್ ಜಟ್ ವಿಮಾನದ ರಕ್ಕೆ ಇಂಡಿಗೋ ಬಸ್ ಗೆ ತಗುಲಿದ ಪರಿಣಾಮ ಬಸ್ ನಲ್ಲಿದ್ದ ಐವರು ಪ್ರಯಾಣಿಕರು ...

news

ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ: ಅಶೋಕ್ ಚೌಧರಿ

ನವದೆಹಲಿ: ನರೇಂದ್ರ ಮೋದಿ ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ...

news

ಮುಂಬೈ ಸರಣಿ ಸ್ಫೋಟದ ಪ್ರಮುಖ ಖಾದಿರ್ ಅಹ್ಮದ್ ಬಂಧನ

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಖಾದಿರ್ ಅಹ್ಮದ್ ನನ್ನು ಗುಜರಾತ್, ಉತ್ತರ ...

news

ಕೈಕಂಬ ಬಳಿ ಮತ್ತೊರ್ವ ಯುವಕನಿಗೆ ಚೂರಿ ಇರಿತ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬ ಬಳಿ ಮತ್ತೊಬ್ಬ ಯುವಕನಿಗೆ ಚೂರಿಯಿಂದ ಇರಿದ ...

Widgets Magazine