ಮೈತ್ರಿ ಸರಕಾರಕ್ಕೆ ಶಾಕ್: ವಿಪಕ್ಷ ಸಾಲಿನಲ್ಲಿ ಕೂಡ್ತೇವೆ ಎಂದ ಪಕ್ಷೇತರ ಶಾಸಕರು

ಬೆಂಗಳೂರು, ಶನಿವಾರ, 13 ಜುಲೈ 2019 (17:11 IST)

ಸಚಿವ ಸ್ಥಾನ ತೊರೆದು ಅತೃಪ್ತರ ಜತೆ ಗುರುತಿಸಿಕೊಂಡಿದ್ದ ಪಕ್ಷೇತರ ಇಬ್ಬರು ಶಾಸಕರು ಇದೀಗ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳೋದಕ್ಕೆ ರೆಡಿಯಾಗಿದ್ದಾರೆ.

ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿರೋ ಪಕ್ಷೇತರ ಶಾಸಕರಾದ ಹೆಚ್.ನಾಗೇಶ್ ಹಾಗೂ ಆರ್. ಶಂಕರ್ ಅವರು ಅಧಿವೇಶನದಲ್ಲಿ ತಮಗೆ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಬೇಕು. ಹೀಗಂತ ಸ್ಪೀಕರ್ ಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

ಸಮ್ಮಿಶ್ರ ಸರಕಾರಕ್ಕೆ ಬೆಂಬಲ ನೀಡಿದ್ದರಿಂದ ಈ ಹಿಂದೆ ಆಡಳಿತ ಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಸ್ಥಾನದಲ್ಲಿ ಕೂಡುವುದಕ್ಕೆ ಸಿದ್ಧವಿರೋದಾಗಿ ಹೇಳಿದ್ದಾರೆ.

ಇಬ್ಬರೂ ಪಕ್ಷೇತರ ಶಾಸಕರು ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದರು. ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ಕೊಟ್ಟು ಮುಂಬೈ ಸೇರಿದ್ದಾರೆ.





ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಧಿವೇಶನಕ್ಕೆ ಹಾಜರ್ ಎಂದ ರಾಮಲಿಂಗಾರೆಡ್ಡಿ

ಮೈತ್ರಿ ಸರಕಾರದ ವಿರುದ್ಧ ಅಸಮಧಾನಗೊಂಡು ರಾಜೀನಾಮೆ ನೀಡಿರೋ ರಾಮಲಿಂಗಾರೆಡ್ಡಿ ಅಧಿವೇಶನಕ್ಕೆ ಹಾಜರ್ ...

news

ಮನೆ ಮಂದಿಯನ್ನು ಕಟ್ಟಿ ಹಾಕಿ ಅವರು ಮಾಡಿದ್ದೇನು? ಶಾಕಿಂಗ್

ಮನೆಯಲ್ಲಿದ್ದ ಜನರನ್ನು ಹಿಗ್ಗಾಮುಗ್ಗಾ ಥಳಿಸಿ ಅವರನ್ನು ಕಟ್ಟಿ ಹಾಕಿ ಮಾಡಬಾರದ ಕೆಲಸವನ್ನು ಮಾಡಲಾಗಿದೆ.

news

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆತ ಮಾಡಿದ್ದೇನು?

ಅಪ್ರಾಪ್ತೆಯನ್ನ ಅಪಹರಿಸಿ ಆಕೆಗೆ ಮಾಡಬಾರದ್ದನ್ನು ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

news

ಮೈತ್ರಿ ಸರಕಾರ ಮುಳುಗುತ್ತಿರೋ ಹಡಗು - ಆಪರೇಷನ್ ರಿವರ್ಸ್ ಆಗೋದಿಲ್ಲ ಎಂದ ಬಿಜೆಪಿ ಶಾಸಕರು

ಬಿಜೆಪಿಯಿಂದ ರಿವರ್ಸ್ ಆಪರೇಷನ್ ಶಾಸಕರು ಒಳಗಾಗುತ್ತಾರೆ ಎಂದು ಹೇಳಲಾಗುತ್ತಿದ್ದವರೇ ಆ ಕುರಿತು ಸ್ಪಷ್ಟವಾಗಿ ...