ಸಿದ್ದಗಂಗಾ ಶ್ರೀ ನಮ್ಮ ಪಾಲಿನ ಸುಪ್ರೀಂಕೋರ್ಟ್ ಇದ್ದಂತೆ: ಈಶ್ವರ್ ಖಂಡ್ರೆ

ತುಮಕೂರು, ಮಂಗಳವಾರ, 12 ಸೆಪ್ಟಂಬರ್ 2017 (18:25 IST)

ಸಿದ್ದಗಂಗಾ ಶ್ರೀ ನಮ್ಮ ಪಾಲಿನ ಸುಪ್ರೀಂಕೋರ್ಟ್ ಇದ್ದಂತೆ ಎಂದು ಪೌರಾಡಳಿತ ಖಾತೆ ಸಚಿವ ಆಶ್ವರ್ ಖಂಡ್ರೆ ಹೇಳಿದ್ದಾರೆ.
ಇಂದು ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ಯಾಮನೂರು ಶಿವಶಂಕರಪ್ಪ ಮತ್ತು ಈಶ್ವರ್ ಖಂಡ್ರೆ, ಸಿದ್ದಗಂಗಾ ಶ್ರೀಗಳ ಮಾತೇ ಅಂತಿಮ ಎಂದರು.
 
ವೀರಶೈವ-ಲಿಂಗಾಯುತರಲ್ಲಿ ಯಾವುದೇ ಭೇಧಭಾವ ಇಲ್ಲ ಎಂದು ಶ್ರೀಗಳು ಸ್ಪಷ್ಟೀಕರಣ ನೀಡಿದ್ದಾರೆ. ಸಿದ್ದಗಂಗಾ ಶ್ರೀ ನಮ್ಮ ಪಾಲಿನ ಸುಪ್ರೀಂಕೋರ್ಟ್ ಇದ್ದಂತೆ. ಅವರ ಮಾತೇ ವೇದವಾಕ್ಯ ಎಂದು ಸ್ಪಷ್ಟನೆ ನೀಡಿದರು.  
 
ಸಚಿವ ಎಂ.ಬಿ.ಪಾಟೀಲರನ್ನು ಗಣನೆಗೆ ತೆಗೆದುಕೊಂಡು ಅವರ ಮನವೊಲಿಸುವ ಪ್ರಯತ್ನಿಸುತ್ತೇವೆ. ಅವರೊಂದಿಗೆ ಒಟ್ಟಾಗಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.
 
ಒಟ್ಟಿಗೆ ಬಂದ್ರೆ ಮನವಿ ಪುರಸ್ಕರಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಬ್ಬರನ್ನು ಒಗ್ಗೂಡಿಸಲು ಸಿಎಂ ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿದ್ದಗಂಗಾ ಶ್ರೀ ಈಶ್ವರ್ ಖಂಡ್ರೆ ಶಾಮನೂರು ಶಿವಶಂಕರಪ್ಪ Siddaganga Shree Eashwar Khandre Shamnoor Shivshankarppa

ಸುದ್ದಿಗಳು

news

ಐಸಿಸ್ ಉಗ್ರರು ಅಪಹರಿಸಿದ್ದ ಕೇರಳದ ಪಾದ್ರಿ ಬಿಡುಗಡೆ

ಐಸಿಸ್ ಉಗ್ರರು ಅಪಹರಿಸಿದ್ದ ಕೇರಳದ ಪಾದ್ರಿ ಟಾಮ್ ಉಝುನ್ನಾಲಿಯನ್ನ ರಕ್ಷಿಸಲಾಗಿದೆ. 2016ರಿಂದ ...

news

ಕೆಂಪಯ್ಯ ವಿರುದ್ಧ IAS, IPS ಅಧಿಕಾರಿಗಳು ಸಿಡಿದೆದ್ದದ್ದು ಯಾಕೆ….?

ಬೆಂಗಳೂರು: ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ವಿರುದ್ಧ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ...

news

ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಳ

ನವದೆಹಲಿ: ಕೇಂದ್ರ ಸರಕಾರಿ ನೌಕರರ ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ. ಕೇಂದ್ರ ಸಚಿವ ಸಂಪುಟ ನೌಕರರ ...

news

ತಮಿಳುನಾಡಿನ 200ಕ್ಕೂ ಅಧಿಕ ಪೊಲೀಸರು ಕೊಡಗಿನ ರೆಸಾರ್ಟ್`ಗೆ ಬಂದಿದ್ದೇಕೆ..?

ವಿ.ಕೆ. ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರನ್ನ ಅಣ್ಣಾಡಿಎಂಕೆ ಪಕ್ಷದ ಹುದ್ದೆಯಿಂದ ಉಚ್ಚಾಟಿಸಿದ ಬಳಿಕ ...

Widgets Magazine