ಬೆಂಗಳೂರು : ಅಂತೂ ಇಂತೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಅಖಾಡ ರೆಡಿಯಾಗ್ತಿದೆ. ಕೋಲಾರ ಘೋಷಣೆಗೂ ಮುನ್ನ ಇಂದು (ಶುಕ್ರವಾರ) ಬಾದಾಮಿ ಕ್ಷೇತ್ರದಲ್ಲಿ ಸಿದ್ದು ಸಂಚಾರ ಮಾಡಲಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಿರುವ ಸಿದ್ದರಾಮಯ್ಯ ಬಾದಾಮಿ ಭೇಟಿ ವೇಳೆಯೇ ಕೋಲಾರ ಸ್ಪರ್ಧೆಯ ಸುಳಿ ಕೊಟ್ಟುಬಿಡ್ತಾರಾ ಎಂಬ ಕುತೂಹಲ ಮನೆ ಮಾಡಿದೆ.ಜನವರಿ 9ರಂದು ಕೋಲಾರಕ್ಕೆ ಸಿದ್ದರಾಮಯ್ಯ ಸೆಕೆಂಡ್ ಎಂಟ್ರಿ ಕೊಡಲಿದ್ದಾರೆ. ಸೆಕೆಂಡ್ ಎಂಟ್ರಿಯಲ್ಲಿ ಕೋಲಾರ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಘೋಷಣೆ