Widgets Magazine
Widgets Magazine

ಸಿದ್ದರಾಮಯ್ಯ ದುರಹಂಕಾರಿ ಮುಖ್ಯಮಂತ್ರಿ: ಶ್ರೀನಿವಾಸ್ ಪ್ರಸಾದ್

ಗುಂಡ್ಲುಪೇಟೆ, ಸೋಮವಾರ, 3 ಏಪ್ರಿಲ್ 2017 (15:48 IST)

Widgets Magazine

ದುರಹಂಕಾರಿ ಮುಖ್ಯಮಂತ್ರಿ. ದೇಶದಲ್ಲಿಯೇ ಅತಿ ದುರಹಂಕಾರಿ ಮುಖ್ಯಮಂತ್ರಿಯೆಂದರೆ ಅದು ಸಿಎಂ ಸಿದ್ದರಾಮಯ್ಯ ಮಾತ್ರ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
 
ಕುಡಿದರೆ 2-3 ಗಂಟೆ ಅಮಲಿರುತ್ತದೆ. ಆದರೆ, ಸಿಎಂ ಸಿದ್ದರಾಮಯ್ಯನವರಿಗೆ ಅಧಿಕಾರದ ಅಮಲೇರಿದೆ. ಸದಸ್ಯ ಅಧಿಕಾರದ ಅಮಲು ಇಳಿಯುವ ಸಾಧ್ಯತೆಗಳಿಲ್ಲ. ಜನರಿಂದ ಮಾತ್ರ ಸಿಎಂ ಅಧಿಕಾರದ ಅಮಲು ಇಳಿಸಲು ಸಾಧ್ಯ ಎಂದು ಕಿಡಿಕಾರಿದರು.
 
ಮಲ್ಲಿಕಾರ್ಜುನ್ ಖರ್ಗೆ ಇಲ್ಲಿಗೆ ಬಂದು ಭಾಷಣ ಮಾಡಿದ್ದಾರೆ. ಸಂಪುಟ ಪುನಾರಚನೆ ಮಾಡುವಾಗ ಖರ್ಗೆ ಎಲ್ಲಿ ಹೋಗಿದ್ದರು. ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಾಗ ಯಾಕೆ ಪ್ರಶ್ನಿಸಲಿಲ್ಲ ಎಂದು ಗುಡುಗಿದರು. 
 
ಹಿರಿಯನಾದ ನನ್ನನ್ನು ಕೈಬಿಟ್ಟು ತಮ್ಮ ಪುತ್ರನನ್ನು ಸಚಿವನಾಗಿ ಆಯ್ಕೆ ಮಾಡಿದಾಗ ಖರ್ಗೆ ಯಾಕೆ ಮೌನವಾಗಿದ್ದರು ಎಂದು ತಿರುಗೇಟು ನೀಡಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯರ ದುರಾಡಳಿತಕ್ಕೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ನಂಜನಗೂಡು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದಾವಣಗೆರೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವ

ದಾವಣಗೆರೆ: ದಾವಣಗೆರೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಭೂಮಿ ...

news

ದಾವಣಗೆರೆಯ ಹಲವೆಡೆ ಭೂಕಂಪನದ ಅನುಭವ

ನಿನ್ನೆಯಿಂದ ರಾಜ್ಯದ ಕೆಲವೆಡೆ ಭೂಕಂಪನದ ಅನುಭವವಾಗುತ್ತಿದೆ. ದ಻ವಣಗೆರೆಯ ಹಲವೆಡೆ ಕಂಪನದ ಅನುಭವವಾಗಿದೆ. ...

news

ಇರಾನ್ ಜೈಲು ಸೇರಿದ್ದ 15 ಮೀನುಗಾರರ ಬಿಡುಗಡೆ: ಸುಷ್ಮಾ ಸ್ವರಾಜ್

ಅಂತಾರಾಷ್ಟ್ರೀಯ ಜಲ ಗಡಿ ದಾಟಿದ ಆರೋಪದಲ್ಲಿ ಇರಾನ್ ಭದ್ರತಾ ಪಡೆಗಳಿಂದ ಬಂಧನಕ್ಕೊಳಗಾಗಿ ಇರಾನ್ ಜೈಲು ...

news

ತಮಿಳುನಾಡಿನಲ್ಲಿ ಜರ್ಮನ್ ಮಹಿಳೆಯ ಮೇಲೆ ಗ್ಯಾಂಗ್‌ರೇಪ್

ಮಹಾಬಲೀಪುರಂ: ತಮಿಳುನಾಡು ಪ್ರವಾಸಕ್ಕೆ ಬಂದಿದ್ದ ಜರ್ಮನ್ ಮೂಲದ ಮಹಿಳೆಯ ಮೇಲೆ ದುಷ್ಕರ್ಮಿಗಳು ...

Widgets Magazine Widgets Magazine Widgets Magazine