ಎಸ್ಐಟಿಯಿಂದ ಅಜ್ಞಾತ ಸ್ಥಳದಲ್ಲಿ ಕುಣಿಗಲ್ ಗಿರಿ ವಿಚಾರಣೆ

ಬೆಂಗಳೂರು, ಶನಿವಾರ, 16 ಸೆಪ್ಟಂಬರ್ 2017 (16:22 IST)

Widgets Magazine

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕೆ ವ್ಯಕ್ತವಾದವರನ್ನ ಎಸ್`ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸುತ್ತಿದ್ದಾರೆ. ಇವತ್ತು ರೌಡಿ ಶೀಟರ್ ಕುಣಿಗಲ್ ಗಿರಿಯನ್ನ ತನಿಖೆಗೆ ಒಳಪಡಿಸಿದ್ದಾರೆಂದು ವರದಿಯಾಗಿದೆ.


ಗೌರಿ ಲಂಕೇಶ್ ಹತ್ಯೆಯಾದ ದಿನ ಕುಣಿಗಲ್ ಗಿರಿ ರಾಮನಗರ ಜೈಲಿನಲ್ಲಿದ್ದರು. ನಿನ್ನೆ ಬಿಡುಗಡೆಯಾಗಿದ್ದಾರೆ. ಆದರೆ, ಕುಣಿಗಲ್ ಗಿರಿ ಸಹಚರರ ಮೇಲಿನ ಶಂಕೆ ಹಿನ್ನೆಲೆಯಲ್ಲಿ ಎಸ್`ಐಟಿ ಕುಣಿಗಲ್ ಗಿರಿ ಕುರಿತಂತೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದದನ್ನ ಗಮನಿಸಿದ ಕುಣಿಗಲ್ ಗಿರಿ ನಿನ್ನೆ ಸ್ವಯಂಪ್ರೇರಿತರಾಗಿ ಸಿಐಡಿ ಕಚೇರಿ ಆವರಣದಲ್ಲಿರುವ ಎಸ್ಯಟಿ ಕಚೇರಿಗೆ ಪೋಷಕರ ಸಮೇತರಾಗಿ ಭೇಟಿ ನೀಡಿದ್ದರು. ಆದರೆ, ನಿನ್ನೆ ಅಧಿಕಾರಿಗಳ ಭೇಟಿ ಸಾಧ್ಯವಾಗಿರಲಿಲ್ಲ. ಹೀಗಾಗಿ, ಇವತ್ತು ಕುಣಿಗಲ್ ಗಿರಿಯನ್ನ ಕರೆಸಿಕೊಂಡಿರುವ ಎಸ್ಐಟಿ ತಂಡ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ.

ನಿನ್ನೆ ಎಸ್`ಐಟಿ ಕಚೇರಿಗೆ ಬಂದಿದ್ದ ಕುಣಿಗಲ್ ಗಿರಿ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ. ಮಾಧ್ಯಮಗಳಲ್ಲಿ ವರದಿ ನೋಡಿ ನನ್ನ ಪೋಷಕರು ಆತಂಕಗೊಂಡಿದ್ದರು. ಹೀಗಾಗಿ, ಸ್ಪಷ್ಟನೆ ನೀಡಲು ಇಲ್ಲಿಗೆ ಬಂದಿದ್ದೇನೆ. ಇವತ್ತು ತಾನೇ ಜೈಲಿನಿಂದ ರಿಲೀಸ್ ಆಗಿದ್ದು, 7-8 ವರ್ಷಗಳ ಬಳಿಕ ಊರಿಗೆ ತೆರಳುತ್ತಿದ್ದೇನೆ. ಕೃಷಿ ಮಾಡಿಕೊಂಡು ಬದುಕುತ್ತೇನೆಂದು ಹೇಳಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕುಣಿಗಲ್ ಗಿರಿ ಎಸ್ಐಟಿ ತನಿಖೆ ಗೌರಿ ಲಂಕೇಶ್ Sit Kunigal Giri Gauri Lankesh

Widgets Magazine

ಸುದ್ದಿಗಳು

news

ಆನಂದ್ ಗುರೂಜಿ ಮನೆ ಮೇಲೆ ಬಿಯರ್ ಬಾಟಲಿ, ಮಾಂಸದ ತುಂಡುಗಳನ್ನ ಎಸೆದ ದುಷ್ಕರ್ಮಿಗಳು

ಬೈಕ್`ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಮನೆ ಮೇಲೆ ಮಾಂಸದ ತುಂಡು, ...

news

ಬಿಜೆಪಿ ನಾಯಕರದ್ದು ಢೋಂಗಿ ಹೋರಾಟ: ಕೃಷ್ಣ ಭೈರೇಗೌಡ

ಬೆಂಗಳೂರು: ಬಿಜೆಪಿ ನಾಯಕರ ಢೋಂಗಿ ಹೋರಾಟ ರಾಜ್ಯದ ಜನತೆಗೆ ಗೊತ್ತಿದೆ ಎಂದು ಕೃಷಿ ಖಾತೆ ಸಚಿವ ಕೃಷ್ಣ ...

news

ಗುಂಡಿ ಬಿದ್ದ ರಸ್ತೆಗಳಿಗೆ ವೈಟ್ ಟ್ಯಾಪಿಂಗ್: ಸಚಿವ ಜಾರ್ಜ್

ಬೆಂಗಳೂರು: ನಗರದಲ್ಲಿ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಮಾಧ್ಯಮದವರು ...

news

ಯಾವುದೇ ಅಸಮಾಧಾನವಿಲ್ಲ.. ಸಿಎಂ, ಪರಮೇಶ್ವರ್ ಸಹೋದರರಂತಿದ್ದಾರೆ: ವೇಣುಗೋಪಾಲ್

ಬೆಂಗಳೂರು: ಸಿಎಂ, ಪರಮೇಶ್ವರ್ ನಡುವೆ ಭಿನ್ನಾಬಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಯಾವುದೇ ...

Widgets Magazine