ಗೌರಿ ಲಂಕೇಶ್ ಹತ್ಯೆ ಕೇಸ್: ಆಪರೇಶನ್ DTSI ಆರಂಭಿಸಿದ ಎಸ್`ಐಟಿ

ಬೆಂಗಳೂರು, ಶನಿವಾರ, 16 ಸೆಪ್ಟಂಬರ್ 2017 (13:27 IST)

ಗೌರಿ ಲಂಕೇಶ್ ತನಿಖೆಯನ್ನ ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇದೀಗ ಆಪರೇಶನ್ 150 ಡಿಟೆಸ್ ಐ ಆರಂಭಿಸಿದ್ದಾರೆ. ಹೌದು, ಗೌರಿ ಹಂತಕರು ಈ ಬ್ರ್ಯಾಂಡ್`ನ ಪಲ್ಸಾರ್ ಬೈಕಿನಲ್ಲಿ ಹೋಗಿರುವ ಮಾತಿ ಹಿಸಿಕ್ಕಿದ್ದು, ರಾಜ್ಯಾದ್ಯಂತ 150 ತಂಡಗಳು ಹುಡುಕಾಟದಲ್ಲಿ ತೊಡಗಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.


ಕಾಕ್ ಟೈಲ್ ರೆಡ್ ವೈನ್ ಬಣ್ಣದ ಪಲ್ಸಾರ್ ಬಣ್ಣದ ಬೈಕಿನಲ್ಲಿ ಹಂತಕರು ಪರಾರಿಯಾಗಿದ್ದು, ಬೈಕ್ ಯಾರ ಹೆಸರಿನಲ್ಲಿದೆ. ಖರೀದಿಸಿದವರ್ಯಾರು..? ಖರೀದಿಸದವರ ಬಳಿಯೇ ಇದೆಯಾ..? ಮತ್ಯಾರಿಗಾದರೂ ಮಾರಿದ್ದಾರಾ..? ಅಥವಾ ಬೈಕ್ ಕಳ್ಳತನವಾದ ಬಗ್ಗೆ ದೂರು ನೀಡಲಾಗಿದೆಯಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದರ ಜೊತೆಗೆ ಸಿಟಿವಿ ದೃಶ್ಯಾವಳಿಯಲ್ಲಿ ಪಲ್ಸಾರ್ ಬೈಕಿನ 2 ನಂಬರ್ ಪೊಲೀಸರಿಗೆ ಗೊತ್ತಾಗಿದೆ. ಮತ್ತೆರಡು ನಂಬರ್ ಸ್ಪಷ್ಟವಾಗಿಲ್ಲದ ಕಾರಣ ಅಹಮದಾ ಬಾದ್`ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಉಳಿದೆರಡು ನಂಬರ್`ಗಳ ಮಾಹಿತಿ ಸಿಕ್ಕ ಬಳಿಕ ಕೊಲೆಗಾರರ ಪತ್ತೆಗೆ ಪ್ರಮುಖವಾಗಿ ನೆರವಾಗಲಿದೆ ಎಂದು ತಿಳಿದು ಬಂದಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್`ಐಟಿ ಅಧಿಕಾರಿಗಳು ಎಲ್ಲ ಆಂಗಲ್`ಗಳಲ್ಲೂ ತನಿಖೆ ಮುಂದುವರೆಸಿದ್ದಾರೆ. ಈ ಮಧ್ಯೆ, ಹಂತಕರ ಸುಳಿವು ನೀಡುವಂತೆ ಎಸ್`ಐಟಿ ನೀಡಿದ್ದ ಫೋನ್ ನಂಬರ್`ಗೆ ಕರೆ ಮಾಡಿದ ಶೇ.30ರಷ್ಟು ಜನರು ಸ್ವಾಮೀಜಿಯೊಬ್ಬರ ಹೆಸರು ಹೇಳಿದ್ದು, ಅವರನ್ನೂ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಆಪರೇಶನ್ ಡಿಟಿಎಸ್ ಐ ಗೌರಿ ಲಂಕೇಶ್ ಹತ್ಯೆ ಎಸೈಟಿ Sit Operation Dtsi Gauri Lankesh

ಸುದ್ದಿಗಳು

news

ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಬಿಜೆಪಿ ಒತ್ತಾಯ

ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಗರಾಭಿವೃದ್ಧಿ ಖಾತೆ ಸಚಿವ ...

news

ಮುಸ್ಲಿಮರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಓಲೈಕೆ: ಯಡಿಯೂರಪ್ಪ ಕಿಡಿ

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ಬಗ್ಗೆ ನಿಜವಾದ ಕಾಳಜಿಯಿಲ್ಲ. ಕೇವಲ ಓಟ್ ಬ್ಯಾಂಕ್‌ಗಾಗಿ ...

news

ಲಂಡನ್ನಿನ ಬಕೆಟ್ ಬಾಂಬ್ ದಾಳಿಯ ಹೊಣೆ ಹೊತ್ತ ಐಸಿಸ್

ಲಂಡನ್ನಿನ ಅಂಡರ್ ಗ್ರೌಂಡ್ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನ ಇರಾಕ್`ನ ಐಸಿಸ್ ...

news

ಪರಮೇಶ್ವರ್ ಬಿಟ್ಟ ಅಸ್ತ್ರಕ್ಕೆ ತತ್ತರಿಸಿದ ಸಿಎಂ ಸಿದ್ದರಾಮಯ್ಯ...

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ವಿಧಾನ ಪರಿಷತ್ ಸದಸ್ಯರ ನೇಮಕದಲ್ಲಿ ಆರಂಭವಾದ ಸಿಎಂ ಸಿದ್ದರಾಮಯ್ಯ ...

Widgets Magazine