ಸೋನಿಯಾ ಚಿಕಿತ್ಸೆಗಾಗಿ ವಿದೇಶಕ್ಕೆ ಹೋದರೆ ತಪ್ಪೇನು: ಸಿ.ಟಿ.ರವಿಗೆ ಸಿಎಂ ಟಾಂಗ್

ಬೆಂಗಳೂರು, ಶುಕ್ರವಾರ, 10 ಮಾರ್ಚ್ 2017 (14:14 IST)

Widgets Magazine

ಸೋನಿಯಾ ಗಾಂಧಿ ವಿದೇಶಕ್ಕೆ ಹೋಗಬಾರದಾ? ಚಿಕಿತ್ಸೆಗಾಗಿ ವಿದೇಶಕ್ಕೆ ಹೋದರೆ ತಪ್ಪೇನು ಎಂದು ಬಿಜೆಪಿ ಮುಖಂಡ ಸಿ.ಟಿ.ರವಿಗೆ ತಿರುಗೇಟು ನೀಡಿದ್ದಾರೆ.
 
ಬಿಜೆಪಿಯವರು ಬೇಜವಾಬ್ದಾರಿ ವ್ಯಕ್ತಿಗಳು. ಮನಬಂದಂತೆ ಹೇಳಿಕೆ ನೀಡುವುದೇ ಅವರ ಕಾಯಕವಾಗಿದೆ. ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
 ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಮಾನಸಿಕ ಆಸ್ಪತ್ರೆ ಆರಂಭಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡುತ್ತೇನೆ ಎಂದರು.
 
ಸಿ.ಟಿ ರವಿ ಹತಾಷರಾಗಿ ಟ್ವೀಟ್ ಮಾಡಿದ್ದಾರೆ. ಸೋನಿಯಾ ಗಾಂಧಿಯವರಿಗೆ ಎರಡು ಬಾರಿ ಪ್ರಧಾನಿಯಾಗುವ ಅವಕಾಶವಿತ್ತು. ಪ್ರಧಾನಿ ಸ್ಥಾನವನ್ನೇ ತಿರಸ್ಕರಿಸಿದ ಸೋನಿಯಾ ಗಾಂಧಿ ಧೀಮಂತ ಮಹಿಳೆ. ಅಂತಹ ನಾಯಕಿಯ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮತ ಕೇಳುವ ನೈತಿಕ ಹಕ್ಕಿಲ್ಲಃ ಕುಮಾರಸ್ವಾಮಿ

ಚಿಕ್ಕಮಗಳೂರು: ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಿಎಂ, ಜೆಡಿಎಸ್ ...

news

ಸೋನಿಯಾ ವಿದೇಶ ಭೇಟಿ ಬಗ್ಗೆ ಸಿ.ಟಿ. ರವಿ ವಿವಾದಾತ್ಮಕ ಟ್ವೀಟ್

ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯಲು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿರುವ ಬಗ್ಗೆ ...

news

ಏರ್ ಟೆಲ್ ಹೊಸ ಆಫರ್ ಸುದ್ದಿ ಓದಿ ಮೋಸ ಹೋಗಬೇಡಿ!

ನವದೆಹಲಿ: ಏರ್ ಟೆಲ್ ನಲ್ಲಿ ಹೊಸ ಇಂಟರ್ನೆಟ್ ಆಫರ್ ಬಂದಿದೆ. ಕೇವಲ 150 ರೂ. ಕೊಟ್ಟರೆ, 28 ಜಿಬಿ ನೆಟ್ ...

news

ವೈರಲ್ ಆಯ್ತು ಲಾಲೂ ಪ್ರಸಾದ್ ಯಾದವ್ ಪ್ರಕಟಿಸಿದ ಫೋಟೋ

ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅಂದರೆ ಹಾಗೇ. ರಾಜಕೀಯವಾಗಿ ಸುದ್ದಿ ಮಾಡುವ ಹಾಗೇ ಅವರ ...

Widgets Magazine