Widgets Magazine
Widgets Magazine

ಇನ್ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ: ಶ್ರೀನಿವಾಸ ಪ್ರಸಾದ್ ಘೋಷಣೆ

ಮೈಸೂರು, ಗುರುವಾರ, 13 ಏಪ್ರಿಲ್ 2017 (13:49 IST)

Widgets Magazine

ನಂಜನಗೂಡು ಉಪಚುನಾವಣೆಯಲ್ಲಿ  ಸೋಲನುಭವಿಸಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಇನ್ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ  ಆದರೆ, ರಾಜಕೀಯ ನಿವೃತ್ತಿ ಪಡೆಯುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.


ಸುದ್ದಿಗೋಷ್ಠಿಯುದ್ದಕ್ಕೂ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಇನ್ನಿತರೆ ಕಾಂಗ್ರೆಸ್ ನಾಯಕರ ವಿರುದ್ಧ ಶ್ರೀನಿವಾಸಪ್ರಸಾದ್ ವಾಗ್ದಾಳಿ ನಡೆಸಿದರು. ಕೊನೆಗಾಲದಲ್ಲಿ ಸಚಿವ ಸ್ಥಾನದಿಂದ ತೆಗೆದು ನನ್ನ ಸಚಿವ ಸ್ಥಾನದಿಂದ ತೆಗೆದ ಘಾಸಿ ಉಂಟುಮಾಡಿದರು. ಅದಕ್ಕೇ ಪಕ್ಷ ಬಿಟ್ಟು ಬಂದೆ. ನನ್ನ ಮೇಲೆ ಒಂದು ಚಿಕ್ಕ ಕಳಂಕವಿದ್ದರೆ ತೋರಿಸಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.

ಕೊನೆಯ 3 ದಿನ ಯಾವ ರೀತಿ ಚುನಾವಣೆ ನಡೆಸಿದರು ಎಂಬುದನ್ನ ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಲಿ. 1.25 ಲಕ್ಷ ಜನರಿಗೆ ಹಣ ಹಂಚಿದ್ದಾರೆ. ಸಿಎಂ ಆಪ್ತ ಕೆಂಪಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.

ಅವತ್ತು ಚಾಮುಂಡೇಶ್ವರಿ ಚುನಾವಣೆಯಲ್ಲಿ ಕೇವಲ 250 ಮತಗಳಿಂದ ಗೆದ್ದಿದ್ದೆ, ಅವತ್ತು ನೀನೂ ಸೋತಿದ್ದರೆ ರಾಜಕೀಯ ಜೀವನ ಅಂತ್ಯವಾಗುತ್ತಿತ್ತು. ಚಾಮುಂಡೇಶ್ವರಿ ಚುನಾವಣೆ ವೇಳೆ ನನ್ನ ಮನೆ ಬಾಗಿಲಿಗೆ ಬಂದದ್ದು ಮರೆತುಬಿಟ್ಟಿರಾ..? ಖರ್ಗೆವರೆಗೆ ನಿಮ್ಮ ರೀತಿ ಮಗನಿಗೆ ಸಚಿವ ಸ್ಥಾನ ಕೊಡಿಸಲು ನಾನು ಪ್ರಯತ್ನ ನಡೆಸಿದ್ನಾ ಎಂದು ವಾಗ್ದಾಳಿ ನಡೆಸಿದ್ದಾರೆ.
 
 
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಶ್ರೀನಿವಾಸ ಪ್ರಸಾದ್ ಸಿದ್ದರಾಮಯ್ಯ Siddaramaiah Congress Sreenivasa Prasadh

Widgets Magazine

ಸುದ್ದಿಗಳು

news

ಡಿ.ಕೆ.ಶಿವಕುಮಾರ್‌ರಿಂದ ಬಿಎಸ್‌ವೈ, ಶೋಭಾ ಕರಂದ್ಲಾಜೆ ರಕ್ಷಣೆ: ಕುಮಾರಸ್ವಾಮಿ

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ...

news

ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಅಭಿನಂದನೆ

ಬೆಂಗಳೂರು: ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ್ದರಿಂದ ಎಐಸಿಸಿ ...

news

ಉಪಚುನಾವಣೆಯ ಫಲಿತಾಂಶದ ಬಗ್ಗೆ ಯಡಿಯೂರಪ್ಪ, ಈಶ್ವರಪ್ಪ ರಿಯಾಕ್ಷನ್

ಮತದಾರರ ತೀರ್ಪನ್ನ ಗೌರವಿಸುವುದಾಗಿ ಉಪಚುನಾವಣೆ ಫಲಿತಾಂಶದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ...

news

ಪ್ರಧಾನಿ ಮೋದಿ ನಿದ್ರೆ ಮಾಡುವುದು ಎಲ್ಲಿ ಗೊತ್ತಾ?

ನವದೆಹಲಿ: ಪ್ರಧಾನಿ ಹುದ್ದೆ ಎಂದ ಮೇಲೆ ಭಾರೀ ಜವಾಬ್ದಾರಿ ಇರುವುದು ಸಹಜ. ಹಾಗಿದ್ದರೆ, ಅವರು ಒತ್ತಡ ಮರೆತು ...

Widgets Magazine Widgets Magazine Widgets Magazine