ಶ್ರೀರಾಮ ದೇವರಲ್ಲ, ರಾಮಮಂದಿರ ಕಟ್ಟುವ ಮುನ್ನ ಯೋಚಿಸಿ: ಭಗವಾನ್

ಬೆಂಗಳೂರು, ಮಂಗಳವಾರ, 26 ಸೆಪ್ಟಂಬರ್ 2017 (14:27 IST)

ವಾಲ್ಮಿಕಿ ಎಲ್ಲಿಯೂ ರಾಮನನ್ನು ದೇವರು ಎಂದು ಕರೆದಿಲ್ಲ. ವಾಲ್ಮಿಕಿ ರಾಮಾಯಾಣದಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಪ್ರೊ.ಕೆ.ಎಸ್.ಭಗವಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರಿನ ವಿಶಿಷ್ಠ ಕವಿಗೋಷ್ಠಿಯ ವೇಳೆ ಮಾತನಾಡಿದ ಸಾಹಿತಿ ಭಗವಾನ್, ವಾಲ್ಮಿಕಿ ರಾಮಾಯಣದಲ್ಲಿ ರಾಮನ ನಿಜರೂಪ ತಿಳಿದಿದೆ. ಅಂದ ಮೇಲೂ ರಾಮ ಮಂದಿರ ನಿರ್ಮಿಸುವುದು ಯಾತಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.
 
ಬ್ರಾಹ್ಮಣರ ಮಾತುಗಳನ್ನು ಕೇಳಿ ರಾಮ, ಶಂಭೂಕನ ತಲೆಯನ್ನು ಕತ್ತರಿಸಿದ. ತುಂಬು ಗರ್ಭಿಣಿಯನ್ನು ಕಾಡಿಗೆ ಕಳುಹಿಸಿದ. ಇಂತಹ ವ್ಯಕ್ತಿಗೆ ದೇವಾಲಯ ನಿರ್ಮಿಸಬೇಕೆ? ರಾಮಮಂದಿರ ನಿರ್ಮಿಸುವ ಮೊದಲ ಯೋಚಿಸಿ ಎಂದು ಸಲಹೆ ನೀಡಿದ್ದಾರೆ.
 
ಪತ್ನಿಯನ್ನು ಗೌರವಿಸದಂತಹ ವ್ಯಕ್ತಿಯಾದ ರಾಮನಿಗೆ ದೇವಾಲಯ ಕಟ್ಟಲು ಹೊರಟಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಪ್ರೊಫೆಸರ್ ಕೆ.ಎಸ್.ಭಗವಾನ್ ಮತ್ತೊಮ್ಮೆ  ವಿವಾದದ ಕಿಡಿ ಹಬ್ಬಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಉಪರಾಷ್ಟ್ರಪತಿ ವೆಂಕಯ್ಯ

ಹುಬ್ಬಳ್ಳಿ: ಗದಗದ ನರಗುಂದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಉಪರಾಷ್ಟ್ರಪತಿ ...

news

ಬಿಜೆಪಿ, ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಬಿಎಂಪಿ ವ್ಯಾಪ್ತಿಗೆ ರಾಜಕೀಯ ಕಾರಣಗಳಿಗಾಗಿ 120 ಹಳ್ಳಿಗಳನ್ನು ...

news

ಗೋವಾದ ಬೈನಾ ಬೀಚ್`ನಲ್ಲಿ ಕನ್ನಡಿಗರ 55 ಮನೆಗಳು ತೆರವು

ಗೋವಾ ಕನ್ನಡಿಗರ ಮೇಲೆ ಅಲ್ಲಿನ ಸರ್ಕಾರ ಮತ್ತೆ ದೌರ್ಜನ್ಯ ಎಸಗಿದೆ. ಬೈನಾ ಬೀಚ್`ನಲ್ಲಿ ನೆಲೆಸಿದ್ದ ...

news

ಸಚಿವ ರಮಾನಾಥ್ ರೈ ವಿರುದ್ಧ ಮಂಗಳೂರು ಕೋರ್ಟ್`ನಲ್ಲಿ ದೂರು ದಾಖಲು

ಕಾಂಗ್ರೆಸ್ ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದಡಿ ಅರಣ್ಯ ಸಚಿವ ...

Widgets Magazine
Widgets Magazine