ಉಪಚುನಾವಣೆ ಜಮಖಂಡಿಗೆ ಶ್ರೀಕಾಂತ್ ಕುಲಕರ್ಣಿ ಬಿಜೆಪಿ ಅಭ್ಯರ್ಥಿ?

ಬಾಗಲಕೋಟೆ, ಬುಧವಾರ, 10 ಅಕ್ಟೋಬರ್ 2018 (13:48 IST)

 ಜಮಖಂಡಿ ಮತಕ್ಷೇತ್ರದ ಸಿದ್ದು ನ್ಯಾಮಗೌಡ್ರ ಅಕಾಲಿಕ ನಿಧನದಿಂದಾಗಿ ಮತಕ್ಷೇತ್ರದ ಉಪಚುನಾವಣೆಯ ದಿನಾಂಕ ಕೂಡ ಅಂತಿಮವಾಗಿದೆ ಬರೋ ತಿಂಗಳು 3 ಕ್ಕೆ ಚುನಾವಣೆ ನಡೆಸುವದಾಗಿ  ಚುನಾವಣಾ ಆಯೋಗ ತಿಳಿಸಿದೆ. ಏತನ್ಮಧ್ಯೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಮೆಗಾಫೈಟ್ ಆರಂಭಗೊಂಡಿದೆ.

ಜಮಖಂಡಿಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ನನಗ್ ಬೇಕು ನನಗ್ ಬೇಕು ಎಂದು ಬಿಜೆಪಿ ಮುಖಂಡರು ಪೈಪೋಟಿಗೆ ಇಳಿದಿದ್ದಾರೆ. ಬೆಂಗಳೂರಿಗೆ ಹೋಗಿ ಒತ್ತಾಯ ಮಾಡುತ್ತಿರುವ ಶ್ರೀಕಾಂತ್ ಕುಲಕರ್ಣಿ, ಸಂಗಮೇಶ್ ನಿರಾಣಿ, ಜಗದೀಶ್ ಗುಡಗುಂಟಿ ಈ ಮೂವರ ಪೈಪೋಟಿ ಜಾಸ್ತಿನೇ ಆಗ್ತಿದೆ. ಆದರೆ ಮತಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳು ಮತ್ತು ಪಕ್ಷದಲ್ಲಿ ಸೇವೆ ಮಾಡಿರುವ ಅಭ್ಯರ್ಥಿಗಳು ಆದ ಉಮೇಶ್ ಮಹಾಬಳಶೆಟ್ಟಿ, ಬಿ. ಎಸ್. ಸಿಂಧೂರ್ ಒಳಗೊಂಡಂತೆ ಇನ್ನೂ ಅನೇಕ ಆಕಾಂಕ್ಷಿಗಳಿದ್ದಾರೆ.

ಆದರೆ ಶ್ರೀಕಾಂತ್ ಕುಲಕರ್ಣಿ ಮಾತ್ರ ಪ್ರಬಲವಾಗಿ  ಸಂಘಟನೆಯಲ್ಲಿ ತುಂಬಾ ಹಳಬರು ಜೊತೆಯಲ್ಲಿ ಸಂಘ ಕಟ್ಟಿ ಬೆಳೆಸುವದರಲ್ಲೂ ಸಾಕಷ್ಟು ಓಡಾಡಿದ್ದಾರೆ. ಹೈಕಮಾಂಡಿನಲ್ಲಿ ಒಳ್ಳೆ ಹೆಸರು ಇಟ್ಟಿರುವವರು  ಹಾಗಾಗಿ ಶ್ರೀಕಾಂತ್ ಕುಲಕರ್ಣಿಯವರಿಗೆ ಬಹುತೇಕ ಬಿಜೆಪಿ ಟಿಕೆಟ್ ಫೈನಲ್ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗದ ಕಾಂಗ್ರೆಸ್ ಜನಪ್ರತಿನಿಧಿಗಳು ಕಾರಣವೇನು ಗೊತ್ತಾ?

ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆತಿದ್ದು, ಚಾಮುಂಡಿ ದೇವಿಗೆ ಪುಷ್ಪಾರ್ಚನೆ ...

news

ಮೈಸೂರು ದಸರಾದ ಉಪಾಧ್ಯಕ್ಷ ಸ್ಥಾನಕ್ಕಾಗಿ ಮೈತ್ರಿ ಸರ್ಕಾರದಲ್ಲಿ ಬುಗಿಲೆದ್ದ ಭಿನ್ನಮತ

ಚಾಮರಾಜನಗರ : ಮೈಸೂರು ದಸರಾ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಇದೀಗ ಮೈತ್ರಿ ಸರ್ಕಾರದ ಕಾಂಗ್ರೆಸ್ ಹಾಗೂ ...

news

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ: ಕಾಮುಕರು ಅಂದರ್

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ.

news

ರೂಪಾಯಿ ಮೌಲ್ಯ ಕುಸಿತ; ಸಮಸ್ಯೆ ಪರಿಹರಿಸಲು ಆರ್.ಬಿ.ಐ ಹೊಸ ಪ್ಲಾನ್

ನವದೆಹಲಿ : ಇತ್ತೀಚೆಗೆ ದಿನೇದಿನೇ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನಲೆಯಲ್ಲಿ ಅದನ್ನು ...

Widgets Magazine