ಅನಂತ್‌ಕುಮಾರ್ ಹೆಗಡೆ ಮತಾಂಧ, ಮಹಾಮೂರ್ಖ: ಬಿಜೆಪಿ ಮುಖಂಡ

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (16:06 IST)

ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ ಮತ್ತು ಬಿಜೆಪಿ ನಾಯಕ ಮಧುಸೂಧನ ಮತಾಂಧರು ಮತ್ತು ಮಹಾನ್ ಮೂರ್ಖರು ಎಂದು ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಹೆಗಡೆ ಮತ್ತು ಮಧುಸೂಧನ್ ಬದಲಾಯಿಸುವ ಹೇಳಿಕೆ ನೀಡಿ ಪ್ರಧಾನಿ ಮೋದಿ ಸರಕಾರಕ್ಕೆ ಅಪಮಾನ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದ ಹೈಕಮಾಂಡ್ ಕೂಡಲೇ ಇಬ್ಬರಿಗೆ ಕಠಿಣ ಎಚ್ಚರಿಕೆ ನೀಡಬೇಕು, ಮತ್ತೆ ಆದೇ ರೀತಿ ಮುಂದುವರಿದಲ್ಲಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
 
ದೇಶದಲ್ಲಿ ಸಂವಿಧಾನವಿರುವುದರಿಂದಲೇ ಚಹಾ ಮಾರುತ್ತಿದ್ದ ನಾನು ಪ್ರಧಾನಮಂತ್ರಿಯಾಗಿದ್ದೇನೆ ಎಂದು ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಸಂವಿಧಾನ ಪವಿತ್ರ ಪುಸ್ತಕ ಎಂದು ಬಣ್ಣಿಸಿದ್ದಾರೆ. ಆದರೆ, ಐದು ಬಾರಿ ಸಂಸದರಾಗಿರುವ ಹೆಗಡೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳದಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
 
ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಹೆಗಡೆಯವರಿಗೆ ಸಂವಿಧಾನ ಮತ್ತು ಜಾತ್ಯಾತೀತೆಯ ಬಗ್ಗೆ ಕನಿಷ್ಠ ಜ್ಞಾನವಾದರೂ ಇರಬೇಕಾಗಿತ್ತು. ಹೆಗಡೆ ಹೇಳಿಕೆ ಖಂಡಿಸಿ ಜನರು ಪ್ರತಿಭಟನೆ ನಡೆಸುತ್ತಿರುವುದು ನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
 
ಮಾಜಿ ವಿಧಾನಪರಿಷತ್ ಸದಸ್ಯ ಮಧುಸೂಧನ್, ಸಚಿವ ಹೆಗಡೆ ಹೇಳಿಕೆಯನ್ನು ಬೆಂಬಲಿಸಿ ಅನಗತ್ಯವಾಗಿ ಮನಬಂದಂತೆ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ತಮ್ಮದೇ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗುಜರಾತ್ ಡಿಸಿಎಂ ನಿತಿನ್ ಪಟೇಲ್‌ರಿಗೆ ಆಹ್ವಾನ ನೀಡಿದ ಹಾರ್ದಿಕ್ ಪಟೇಲ್

ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರನ್ನು ತಮ್ಮೊಡನೆ ಕೈ ಜೋಡಿಸುವಂತೆ ಪಾಟಿದರ್‌ ಹೋರಾಟಗಾರ ...

news

ಸಿದ್ದರಾಮಯ್ಯರನ್ನು ಹೊಗಳಿದ ಬಿಜೆಪಿ ಶಾಸಕ ಸುರೇಶಗೌಡ!

ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರು ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ...

news

ಗೋವಾ ಸಿಎಂ ಪತ್ರವನ್ನು ನ್ಯಾಯಾಧೀಕರಣಕ್ಕೆ ನೀಡಲಿ– ಶೆಟ್ಟರ್

ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ಮಹಾ ನಾಟಕವಾಡುತ್ತಿದೆ ಎಂದು ಆರೋಪಿಸಿರುವ ವಿರೋಧಪಕ್ಷದ ನಾಯಕ ಜಗದೀಶ ...

news

ಬಹುಪತ್ನಿತ್ವ ನಿಷೇಧಿಸಲು ಮುಸ್ಲಿಂ ಮಹಿಳೆಯರ ಒತ್ತಾಯ

ತ್ರಿವಳಿ ತಲಾಖ್ ರದ್ದುಮಾಡಿದ ವಿಧೇಯಕಕ್ಕೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ...

Widgets Magazine