ಬಾದಾಮಿಯಲ್ಲಿ ಕಣ್ಣೀರಿಟ್ಟ ಶ್ರೀರಾಮುಲು

ಬಾದಾಮಿ, ಮಂಗಳವಾರ, 15 ಮೇ 2018 (14:21 IST)

ಬಾದಾಮಿ : ಬಾದಾಮಿ ಕ್ಷೇತ್ರದಲ್ಲಿ ಸೊಲನುಭವಿಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಕಣ್ಣೀರಿಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ ಕೂಡ ಬಾದಾಮಿಯಲ್ಲಿ  ಅವರ ವಿರುದ್ಧ ಸೋಲನುಭವಿಸಿದ್ದಾರೆ. ಇದರಿಂದ ಶ್ರೀರಾಮುಲು ಹಾಗೂ ಅವರ ಜೊತೆ ಅವರ ಬೆಂಬಲಿಗರು ಕೂಡ ಕಣ್ಣೀರಿಟ್ಟದ್ದಾರೆ.

 

ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿ ಶ್ರೀ ರಾಮುಲು ಅವರು,’ನೈತಿಕವಾಗಿ ಗೆಲುವು ನನ್ನದೆ ಆಗಿದೆ, ಬಾದಾಮಿಯಲ್ಲಿ ಸಿದ್ದರಾಮಯ್ಯ ರ ಗೆಲುವು ಗೆಲುವು ಅಲ್ಲ. ನನ್ನ ಸೋಲಿಗೆ ಜೆಡಿಎಸ್ ಹೆಚ್ಚು ತಗೆದುಕೊಂಡಿದ್ದೆ ಕಾರಣ. ಜೆಡಿಎಸ್ ಅಭ್ಯರ್ಥಿ ಬಾದಾಮಿ ಯಲ್ಲಿ ಇಷ್ಟೊಂದು ಮತ ಪಡೆಯುತ್ತಾರೆ ಎಂದು ನಾನು ಊಹಿಸಿರಲಿಲ್ಲ . ಬಾದಾಮಿಯಿಂದ ನಾನು ಗೆಲ್ಲಬೇಕೆನ್ನುವ ಆಸೆಯಿತ್ತು, ಸೋತಿರೋದಕ್ಕೆ ಭಾವುಕನಾದೆ. ನಾನು ಬಾದಾಮಿಯಲ್ಲಿ ಸೋಲನ್ನು ಕಂಡರೂ ಆಗಾಗ ಬಾದಾಮಿಗೆ ಬಂದು ಹೋಗುವೆ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಬಂಪರ್ ಆಫರ್?!

ಬೆಂಗಳೂರು: ಅಧಿಕಾರ ಉಳಿಸಿಕೊಳ್ಳಲು ಕೊನೇ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಜೆಡಿಎಸ್ ಗೆ ಬಂಪರ್ ...

news

ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ

ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ...

news

ಕೇಂದ್ರ ಸರ್ಕಾರದ ವಿರುದ್ಧ ಎಂ ಬಿ ಪಾಟೀಲ್ ಗರಂ

ವಿಜಯಪುರ: ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕರ್ನಾಟಕಕ್ಕೆ ಬಹುದೊಡ್ಡ ಮೋಸ ಮಾಡಿದೆ. ಚುನಾವಣೆ ಮತದಾನ ಮುಗಿದ ...

news

ಎರಡು ಕ್ಷೇತ್ರದಲ್ಲೂ ಗೆಲುವು ಸಾಧಿಸಿದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ...

Widgets Magazine