ಮತದಾರರ ಓಲೈಕೆಗೆ ಬಿಜೆಪಿಯಿಂದ ಸೀರೆ ಹಂಚಿಕೆ ಶುರು

ಹಾಸನ, ಶುಕ್ರವಾರ, 6 ಅಕ್ಟೋಬರ್ 2017 (17:25 IST)

ಬಿಜೆಪಿ ಮಹಿಳಾ ಮೋರ್ಚಾ ಬಾಗಿನದ ನೆಪದಲ್ಲಿ ಮತದಾರರನ್ನು ಸೆಳೆಯಲು ಮಹಿಳಾ ಮತದಾರರಿಗೆ ಸೀರೆ ಹಂಚಿಕೆ ಪಾಲಿಟಿಕ್ಸ್ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಹಾಸನದಲ್ಲಿ ಬಿಜೆಪಿಯಿಂದ ಮಹಿಳಾ ಮತದಾರರಿಗೆ ಸೀರೆ ಭಾಗ್ಯ ದೊರೆತಿದ್ದು, ಸೀರೆ ತೊಗೊಂಡು ಬಿಜೆಪಿಗೆ ವೋಟ್ ಹಾಕಿ ಎಂದು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
 
ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಬಿಜೆಪಿ ಮಹಿಳಾ ಮೋರ್ಚಾ ಬಾಗಿನದ ನೆಪದಲ್ಲಿ ಸೀರೆ ಹಂಚಿಕೆ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
 
ಚುನಾವಣೆಗೆ ಹಲವು ತಿಂಗಳುಗಳು ಬಾಕಿಯಿದ್ದರೂ ರಾಜಕೀಯ ಪಕ್ಷಗಳು ಈಗಾಗಲೇ ಮತದಾರರ ಓಲೈಕೆಗೆ ಮುಂದಾಗಿರುವುದು ನೋಡಿದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಗರಿಗೆದರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಬಿಜೆಪಿ ಬಿಜೆಪಿ ಮಹಿಳಾ ಮೋರ್ಚಾ ಸೀರೆ ಹಂಚಿಕೆ ಮತದಾರರು Bjp Saree Voters Attraction Bjp Womans Wing

ಸುದ್ದಿಗಳು

news

ಪ್ರಧಾನಿ ಮೋದಿ ಧುರ್ಯೋದನರಂತೆ, ಜೇಟ್ಲಿ ದುಶ್ಯಾಸನ: ಯಶ್ವಂತ್ ಸಿನ್ಹಾ ಪರೋಕ್ಷ ವಾಗ್ದಾಳಿ

ನವದೆಹಲಿ: ಬಿಜೆಪಿ ನಾಯಕತ್ವದಲ್ಲಿ ಪ್ರಧಾನಿ ಮೋದಿ ಧುರ್ಯೋದನನಂತಾಗಿದ್ದರೆ ವಿತ್ತಸಚಿವ ಅರುಣ್ ಜೇಟ್ಲಿ ...

news

ಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಜ್ಞಾನವಿಲ್ಸ: ಶೋಭಾ ಕರಂದ್ಲಾಜೆ

ಬನಹಟ್ಟಿ : ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಜ್ಞಾನವಿಲ್ಲ. ಕಾನೂನು ಕಲಿತಿರುವುದನ್ನು ಕೂಡಾ ...

news

ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇವೆ: ಈಶ್ವರಪ್ಪ ಗುಡುಗು

ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ...

news

ಜಿ.ಪರಮೇಶ್ವರ್‌ರನ್ನು ಸೋಲಿಸಿದ್ದೇ ಸಿಎಂ ಸಿದ್ದರಾಮಯ್ಯ: ಈಶ್ವರಪ್ಪ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ರನ್ನು ಸೋಲಿಸಿದ್ದೇ ಸಿಎಂ ...

Widgets Magazine