ಮಧ್ಯರಾತ್ರಿಯಿಂದಲೇ ಕಾವೇರಿಯಿಂದ ತಮಿಳುನಾಡಿಗೆ 3 ಟಿಎಂಸಿ ನೀರು ಹರಿಸಲಿರುವ ಸರಕಾರ

ಬೆಂಗಳೂರು, ಸೋಮವಾರ, 3 ಅಕ್ಟೋಬರ್ 2016 (19:43 IST)

ಕಾವೇರಿ ವಿಚಾರವಾಗಿ ಉಭಯ ಸದನಗಳಲ್ಲಿ ಸರಕಾರದ ನಿರ್ಣಯ ಅಂಗೀಕಾರವಾದ ಹಿನ್ನೆಲೆಯಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಯುವುದು ಬಹುತೇಕ ಖಚಿತಗೊಂಡಿದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 23 ರಂದು ಕರೆಯಲಾಗಿದ್ದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಕೈಗೊಳ್ಳಲಾಗಿರುವ ನಿರ್ಣಯದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಕುಡಿಯುವ ನೀರಿನ ಜೊತೆಗೆ ರೈತರ ಬೆಳೆಗೆ ನೀರು ಬಿಡುವು ನಿರ್ಣಯವನ್ನು ಕೈಗೊಂಡಿದೆ. 
 
ಕುಡಿಯುವ ನೀರಿನ ಜೊತೆಗೆ ರೈತರ ಬೆಳೆಗೆ ನೀರು ಬಿಡುವು ನಿರ್ಣಯವನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಮಂಡನೆ ಮಾಡುವ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡಲು ರಾಜ್ಯ ಸರಕಾರ ಸಿದ್ಧವಾಗಿದೆ. 
 
ಒಣಗುತ್ತಿರುವ ರೈತರ ಬೆಳೆಗೆ ನೀರು ಬಿಡಬೇಕಾಗಿದೆ. ರೈತರಿಗೆ ನೀರು ಬಿಟ್ಟರೇ ತಂತಾನೇ ತಮಿಳುನಾಡಿಗೆ 3 ಟಿಎಂಸಿ ನೀರು ಹರಿದು ಹೋಗುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುಡಿಯುವ ನೀರು ಮೂಲಭೂತ ಹಕ್ಕು: ಸಿಎಂ ಸಿದ್ದರಾಮಯ್ಯ

ಕುಡಿಯುವ ನೀರು ಮೂಲಭೂತ ಹಕ್ಕು ಎಂದು ಸದನದ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ...

news

ಜಾತಿ ಆಧಾರಿತ ಮೀಸಲಾತಿ ರದ್ದುಗೊಳಿಸಬೇಕು: ರಾಜ್ ಠಾಕ್ರೆ

ಠಾಣೆ: ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ...

news

ಕಾವೇರಿ ಕಣಿವೆಯ ರೈತರಿಗೆ ನೀರು ಹರಿಸಲು ಸರಕಾರ ಸಮ್ಮತಿ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರೈತರ ಬೆಳೆಗೆ ನೀರು ಬಿಡುವ ಕುರಿತಂತೆ ವಿಧಾನಸಭೆಯ ...

news

ಸುಪ್ರೀಂಕೋರ್ಟ್ ಕಾವೇರಿ ವಿಷಯದಲ್ಲಿ ರಾಜ್ಯ ಬಲಿಪಶು: ಶೆಟ್ಟರ್

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿಲನ್ ಅಲ್ಲ, ವಿಕ್ಟಿಮ್ ಎಂದು ...

Widgets Magazine