Widgets Magazine
Widgets Magazine

ಬೆಳಗಾವಿ ಅಧಿವೇಶನದ ಹೊರಗೂ ಒಳಗೂ ಸರ್ಕಾರಕ್ಕೆ ಪ್ರತಿಭಟನೆ ಬಿಸಿ

ಬೆಳಗಾವಿ, ಸೋಮವಾರ, 13 ನವೆಂಬರ್ 2017 (10:21 IST)

Widgets Magazine

ಬೆಳಗಾವಿ: ಇಂದಿನಿಂದ ಉತ್ತರಕರ್ನಾಟಕದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬೆಳಗಾವಿ ಸುವರ್ಣ ಸೌಧದಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಸರ್ಕಾರಕ್ಕೆ ಪ್ರತಿಭಟನೆ ಬಿಸಿ ಅರಿವಾಗಲಿದೆ.


 
ಸದನದ ಹೊರಗೆ ಖಾಸಗಿ ವೈದ್ಯರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಬಾಗಲಕೋಟೆಯ ಎಲ್ಲಾ ಖಾಸಗಿ ಆಸ್ಪತ್ರೆ ವೈದ್ಯರು ಆಸ್ಪತ್ರೆ ಬಂದ್ ಮಾಡಿ ಪ್ರತಿಭಟನೆ ಮಾಡಲು ತೆರಳಿದ್ದಾರೆ. 400 ಕ್ಕೂ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
 
ಅತ್ತ ಸದನದ ಒಳಗೆ ಪ್ರತಿಭಟನೆ ನಡೆಸಲು ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸಿದ್ಧತೆ ನಡೆಸಿದೆ. ಡಿವೈಎಸ್ ಪಿ ಗಣಪತಿ ಪ್ರಕರಣದಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿದ ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಅತ್ತ ಜೆಡಿಎಸ್ ವಿದ್ಯುತ್ ಹಗರಣವನ್ನು ಬಯಲಿಗೆಳೆಯಲು ಲೆಕ್ಕಾಚಾರ ಹಾಕಿದೆ. ಹೀಗಾಗಿ ವಿಶೇಷ ಸದನ ಪ್ರತಿಭಟನೆಯ ಬಿಸಿಯಲ್ಲೇ ಕರಗಿ ಹೋಗದಿದ್ದರೆ ಸಾಕು ಎಂದು ಜನತೆ ಪ್ರಾರ್ಥಿಸುವಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಆನ್ ಲೈನ್ ನಲ್ಲಿ ಕಾಂಡೋಮ್ ದಾಖಲೆಯ ಮಾರಾಟ!

ನವದೆಹಲಿ: ಆನ್ ಲೈನ್ ವ್ಯಾಪಾರ ಈ ದಿನಗಳಲ್ಲಿ ಭಾರೀ ಜನಪ್ರಿಯವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿ. ಆನ್ ...

news

‘ರೆಸ್ಟ್ ಮಾಡಿ ಅಂದ್ರೂ ಕೇಳದೇ ದಲಿತರ ಗುಡಿಸಲುಗಳಿಗೆ ಭೇಟಿ ನೀಡ್ತಿದ್ದಾರೆ ಕುಮಾರಸ್ವಾಮಿ’

ಬೆಂಗಳೂರು: ಕುಮಾರಸ್ವಾಮಿಗೆ ಎರಡೆರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ದಿನಕ್ಕೆ 10 ಗಂಟೆ ...

news

‘ಈಶ್ವರಪ್ಪ ತಲೆ, ಬಾಯಿಗೆ ಲಿಂಕ್ ಇಲ್ಲ’

ಬೆಂಗಳೂರು: ಚುನಾವಣೆ ಹತ್ತಿರಬರುತ್ತಿದ್ದಂತೆ ರಾಜಕೀಯ ನಾಯಕರ ಬಾಯಿಯಿಂದ ಎಲ್ಲೆ ಮೀರಿದ ಮಾತುಗಳು ಬರುವುದು ...

news

ಐಟಿ ದಾಳಿ ವೇಳೆ ಶಶಿಕಲಾ ನಟರಾಜನ್ ಬಗ್ಗೆ ಶಾಕಿಂಗ್ ವರದಿ!

ಚೆನ್ನೈ: ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮತ್ತು ಆಪ್ತರ ಸಂಸ್ಥೆಗಳ ಮೇಲೆ ಐಟಿ ...

Widgets Magazine Widgets Magazine Widgets Magazine