Widgets Magazine
Widgets Magazine

ರಾಜ್ಯ ಸರ್ಕಾರದ ಯೂನಿವರ್ಸಲ್ ಹೆಲ್ತ್ ಕಾರ್ಡ್: ಯಾರೆಲ್ಲಾ, ಹೇಗೆ ಪಡೆಯಬಹುದು?

ಬೆಂಗಳೂರು, ಶನಿವಾರ, 3 ಫೆಬ್ರವರಿ 2018 (09:26 IST)

Widgets Magazine

ಬೆಂಗಳೂರು: ಕೇಂದ್ರ ಸರ್ಕಾರ ತನ್ನ ಈ ಸಾಲಿನ ಬಜೆಟ್ ನಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ 5 ಲಕ್ಷದವರೆಗಿನ ಉಚಿತ ಚಿಕಿತ್ಸೆ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ಪೈಪೋಟಿಗಿಳಿದಿದ್ದು, ಯೂನಿವರ್ಸಲ್ ಹೆಲ್ತ್ ಕಾರ್ಡ್ ನೀಡಲು ಮುಂದಾಗಿದೆ.
 

ಈಗಾಗಲೇ ಈ ಯೋಜನೆ ಸರ್ಕಾರದ ಉದ್ದೇಶದಲ್ಲಿತ್ತು. ಆದರೆ ಜಾರಿಗೆ ತಂದಿರಲಿಲ್ಲ. ಇದೀಗ ಕೇಂದ್ರ ಸರ್ಕಾರ ವಿಮೆ ಘೋಷಿಸುತ್ತಿದ್ದಂತೇ ರಾಜ್ಯ ಸರ್ಕಾರವೂ ತನ್ನ ಉದ್ದೇಶಿತ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ.
 
ಇದರಿಂದ ರಾಜ್ಯದ 1 ಕೋಟಿ 43 ಲಕ್ಷ ಕುಟುಂಬಗಳು ಲಾಭ ಪಡೆಯಲಿವೆ. ವಿಶೇಷವೆಂದರೆ ಈ ಯೋಜನೆಗೆ ಕೇವಲ ಬಿಪಿಎಲ್ ಅಥವಾ ಎಪಿಎಲ್ ಕುಟುಂಬ ಎಂಬ ಷರತ್ತು ವಿಧಿಸಲಾಗಿಲ್ಲ. ಸಾಮಾನ್ಯ ಜನತೆಗೂ ಲಾಭವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ.
 
ಎಲ್ಲಾ ಮಾದರಿಯ ರೋಗಗಳಿಗೂ ಈ ಕಾರ್ಡ್ ಬಳಸಿ ಸರ್ಕಾರದ ಉಚಿತ ಚಿಕಿತ್ಸೆ ಪಡೆಯಬಹುದು. ಒಂದು  ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲದೇ ಹೋದಲ್ಲಿ ವೈದ್ಯರು ಸೂಚಿಸುವ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು. ತಮ್ಮ ಆಧಾರ್ ಸಂಖ್ಯೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಿದರೆ ಹೆಲ್ತ್ ಕಾರ್ಡ್ ಉಚಿತವಾಗಿ ಒದಗಿಸಲಾಗುತ್ತದೆ! ಕಾರ್ಡ್ ಬಳಕೆ ಮಾಡಬೇಕಾದರೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಹೆಲ್ತ್ ಕಾರ್ಡ್ ಆರೋಗ್ಯ ವಿಮೆ ಕರ್ನಾಟಕ ಸರ್ಕಾರ ರಾಜ್ಯ ಸುದ್ದಿಗಳು Health Card Health Insurance Karnataka Govt State News

Widgets Magazine

ಸುದ್ದಿಗಳು

news

ಮುಂದಿನ ಚುನಾವಣೆಯಲ್ಲಿ ನಾನು ಸೋತರೆ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಮನೆಯಲ್ಲಿ ಜೀತಕ್ಕಿರುತ್ತೇನೆ-ಕೆ.ಎನ್.ರಾಜಣ್ಣ

ತುಮಕೂರು : ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಅವರು ...

news

ಮೋದಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ನಡೆಸಿದ ಯಡಿಯೂರಪ್ಪ

ನಗರದ ಅರಮನೆ ಮೈದಾನದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಭಾಗವಹಿಸುವ ಫೆಬ್ರುವರಿ 4ರ ಕಾರ್ಯಕ್ರಮದ ...

news

ಪ್ರತಿಯೊಂದು ಸಾವಿನಲ್ಲೂ ರಾಜಕೀಯ ಶೋಭೆಯಲ್ಲ– ಖಾದರ್

ಪ್ರತಿಯೊಂದು ಸಾವನ್ನೂ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ರಾಜಕೀಯ ಪಕ್ಷಗಳಿಗೆ ಶೋಭೆ ತರುವುದಿಲ್ಲ ಎಂದು ...

news

ಎಸ್‌.ಎಂ.ಕೃಷ್ಣ, ರಮ್ಯಾ ಯಾರೇ ಬಂದರೂ ನನ್ನ ಸ್ಪರ್ಧೆ ಖಚಿತ– ಅಂಬರೀಶ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಯಾರೇ ...

Widgets Magazine Widgets Magazine Widgets Magazine