ಸಚಿವ ಯು.ಟಿ.ಖಾದರ್ ಕಾರಿನ ಮೇಲೆ ಕಲ್ಲು ತೂರಾಟಕ್ಕೆ ಯತ್ನ

ಮಂಗಳೂರು, ಶುಕ್ರವಾರ, 6 ಅಕ್ಟೋಬರ್ 2017 (18:41 IST)

ಕಳೆದ ಮಂಗಳವಾರದಂದು ಹತ್ಯೆಯಾಗಿದ್ದ ಬಿಜೆಪಿ ಕಾರ್ಯಕರ್ತ ಜುಬೈರ್ ನಿವಾಸಕ್ಕೆ ಭೇಟಿ ನೀಡಲು ಆಗಮಿಸಿದ ಸಚಿವ ಯು.ಟಿ.ಖಾದರ್ ಕಾರಿನ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟಕ್ಕೆ ಯತ್ನ ನಡೆಸಿದ ಘಟನೆ ವರದಿಯಾಗಿದೆ.
ಜುಬೈರ್ ಹತ್ಯೆಯಾದಾಗ ಮೃತದೇಹ ನೋಡಲು ಬಾರದ ಸಚಿವ ಖಾದರ್, ಇದೀಗ ಜುಬೇರ್ ನಿವಾಸಕ್ಕೆ ಭೇಟಿ ನೀಡುತ್ತಿರುವುದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಮೂಲಗಳು ತಿಳಿಸಿವೆ.
 
ಜುಬೈರ್ ನಿವಾಸಕ್ಕೆ ಭೇಟಿ ನೀಡಿ ಸಚಿವ ಖಾದರ್ ಕಾರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದಾಗ ಬೇರೆ ದಾರಿ ಕಾಣದೆ ಸಚಿವ ಖಾದರ್, ಬೇರೆ ಕಾರಿನಲ್ಲಿ ತೆರಳಿದರು ಎನ್ನಲಾಗಿದೆ.
 
ಸಚಿವ ಖಾದರ್ ತೆರಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಗುಂಪು ಚಪ್ಪಾಳೆ ತಟ್ಟಿ ತಮ್ಮ ಹೋರಾಟವನ್ನು ಸಮರ್ಥಿಸಿಕೊಂಡಿತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಕ್ಷ ಬಿಡದಂತೆ ಮಾಜಿ ಸಚಿವ ವಿಜಯ್ ಶಂಕರ್‌ಗೆ ಬಿಜೆಪಿ ಮುಖಂಡರ ಮನವಿ

ಮೈಸೂರು: ಬಿಜೆಪಿ ವರಿಷ್ಠರ ನಡೆಗೆ ಅಸಮಾಧಾನಗೊಂಡು ಬಿಜೆಪಿ ಪಕ್ಷವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದ ...

news

ಮತದಾರರ ಓಲೈಕೆಗೆ ಬಿಜೆಪಿಯಿಂದ ಸೀರೆ ಹಂಚಿಕೆ ಶುರು

ಹಾಸನ: ಬಿಜೆಪಿ ಮಹಿಳಾ ಮೋರ್ಚಾ ಬಾಗಿನದ ನೆಪದಲ್ಲಿ ಮತದಾರರನ್ನು ಸೆಳೆಯಲು ಮಹಿಳಾ ಮತದಾರರಿಗೆ ಸೀರೆ ಹಂಚಿಕೆ ...

news

ಪ್ರಧಾನಿ ಮೋದಿ ಧುರ್ಯೋದನರಂತೆ, ಜೇಟ್ಲಿ ದುಶ್ಯಾಸನ: ಯಶ್ವಂತ್ ಸಿನ್ಹಾ ಪರೋಕ್ಷ ವಾಗ್ದಾಳಿ

ನವದೆಹಲಿ: ಬಿಜೆಪಿ ನಾಯಕತ್ವದಲ್ಲಿ ಪ್ರಧಾನಿ ಮೋದಿ ಧುರ್ಯೋದನನಂತಾಗಿದ್ದರೆ ವಿತ್ತಸಚಿವ ಅರುಣ್ ಜೇಟ್ಲಿ ...

news

ಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಜ್ಞಾನವಿಲ್ಸ: ಶೋಭಾ ಕರಂದ್ಲಾಜೆ

ಬನಹಟ್ಟಿ : ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಜ್ಞಾನವಿಲ್ಲ. ಕಾನೂನು ಕಲಿತಿರುವುದನ್ನು ಕೂಡಾ ...

Widgets Magazine