ರಾಜಕೀಯ ಹತ್ಯೆ ತಡೆಯಲು ಸರಕಾರಕ್ಕೆ ಗೃಹ ಸಚಿವಾಲಯ ಸೂಚನೆ

ಬೆಂಗಳೂರು, ಮಂಗಳವಾರ, 25 ಜುಲೈ 2017 (16:38 IST)

ಬಿಜೆಪಿ ನಾಯಕರ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ ರಾಜಕೀಯ ಹತ್ಯೆಗಳನ್ನು ತಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
 
ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ರಾಜಕೀಯ ನಾಯಕರ ಹತ್ಯೆಗಳ ಬಗ್ಗೆ ಮಾಹಿತಿ ನೀಡಿ, ರಾಜ್ಯ ಸರಕಾರಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು.
 
ಮಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ರಾಜಕೀಯ ನಾಯಕರ ಹತ್ಯೆಯ ವಿವರಗಳು ಮತ್ತು ಅದನ್ನು ತಡೆಯಲು ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಗೃಹ ಸಚಿವಾಲಯದ ಆಧೀನ ಕಾರ್ಯದರ್ಶಿ ಕಟ್ಟು ನಿಟ್ಟಿನ ಆದೇಶ ಜಾರಿ ಮಾಡಿದೆ.
 
ರಾಜ್ಯದಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ನೇತೃತ್ವದ ಸರಕಾರಕ್ಕೆ ಗೃಹ ಸಚಿವಾಲಯ ನಿರ್ದೇಶನ ನೀಡಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಗೃಹ ಸಚಿವಾಲಯ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪ ರಾಜನಾಥ್ ಸಿಂಗ್ Yeddyurappa Cm Siddaramaiah Home Ministry Rajnath Singh

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯರಿಂದ ಕೀಳುಮಟ್ಟದ ರಾಜಕಾರಣ: ಕುಮಾರಸ್ವಾಮಿ

ಮೈಸೂರು: ಪ್ರತ್ಯೇಕ ಲಿಂಗಾಯುತ ಧರ್ಮ ಸ್ಥಾಪನೆಗಾಗಿ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸುತ್ತಿರುವುದು ...

news

ನಡುಬೀದಿಯಲ್ಲಿ ನಿಂತು ಹಸ್ತ ಮೈಥುನ ಶುರು ಮಾಡಿದ್ದ..!

ಇತ್ತೀಚೆಗೆ ಬೆಂಗಳೂರು ಮೂಲದ ಮಹಿಳೆಗೆ ಮುಂಬೈ ರೈಲಿನಲ್ಲಾದ ಕಹಿ ಅನುಭವದ ಬಗ್ಗೆ ಕೇಳೇ ಇರುತ್ತೀರಿ. ...

news

ಆರೆಸ್ಸೆಸ್ ಕಪಿಮುಷ್ಠಿಯಲ್ಲಿರುವ ಕೆಲ ಲಿಂಗಾಯುತ ಮುಖಂಡರು: ಬಿಎಸ್‌ವೈಗೆ ಪಾಟೀಲ್ ಟಾಂಗ್ .

ಬೆಂಗಳೂರು: ನಮ್ಮಲ್ಲಿ ಕೆಲ ಮುಖಂಡರು ಆರೆಸ್ಸೆಸ್ ಕಪಿಮುಷ್ಠಿಯಲ್ಲಿದ್ದಾರೆ. ಹೀಗಾಗಿ ತಮ್ಮ ಸ್ವಾರ್ಥಕ್ಕೆ ...

news

ಪೇಜಾವರ ಶ್ರೀ ಹೇಳಿಕೆಗೆ ಎಂ.ಬಿ. ಪಾಟೀಲ್ ತಿರುಗೇಟು

ಲಿಂಗಾಯತ ಪ್ರತ್ಯೇಕ ಧರ್ಮದ ಅಗತ್ಯವಿಲ್ಲ ಎಂಬ ಉಡುಪಿಯ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರಭಾವಿ ಲಿಂಗಾಯತ ಮುಖಂಡ ...

Widgets Magazine