ವಿದ್ಯಾರ್ಥಿಯನ್ನ ಬಲಿ ಪಡೆದ ಸೆಲ್ಫಿ ಹುಚ್ಚು..?!

ಬೆಂಗಳೂರು, ಸೋಮವಾರ, 25 ಸೆಪ್ಟಂಬರ್ 2017 (13:53 IST)

ಎನ್`ಸಿಸಿ ಕ್ಯಾಂಪ್`ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲಾದ ಘಟನೆ ಬೆಂಗಳೂರು ಹೊರವಲಯದ ಬಳಿಯ ರಾಮಗೊಂಡ್ಲುವಿನಲ್ಲಿ ನಡೆದಿದೆ. ವಿದ್ಯಾರ್ಥಿ ಮುಳುಗುತ್ತಿದ್ದರೂ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಜಯನಗರದ ನ್ಯಾಶನಲ್ ಕಾಲೇಜಿನ ವಿದ್ಯಾರ್ಥಿ ವಿಶ್ವಾಸ್ ಮೃತ ದುರ್ದೈವಿ. ನಿನ್ನೆ ರಾಮಗೊಂಡ್ಲು ಬೆಟ್ಟಕ್ಕೆ ಎನ್`ಸಿಸಿ ಶಿಕ್ಷಕರ ಜೊತೆ ಇಪ್ಪತ್ತು ವಿದ್ಯಾರ್ಥಿಗಳು ರಾಮಗೊಂಡ್ಲು ಬೆಟ್ಟಕ್ಕೆ ತೆರಳಿದ್ದರು. ಟ್ರಕ್ಕಿಂಗ್ ಬಳಿಕ ಕಲ್ಯಾಣಿಯಲ್ಲಿ ವಿದ್ಯಾರ್ಥಿಗಳು ಈಜಲು ತೆರಳಿದ್ದಾರೆ. ಈ ಸಂದರ್ಭ ವಿದ್ಯಾರ್ಥಿ ವಿಶ್ವಾಸ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿ ಮುಳುಗುತ್ತಿದ್ದರೂ ಸಹಪಾಠಿಗಳು ಸೆಲ್ಫಿ ತೆಗೆಯುವುದರಲ್ಲಿ ನಿರತರಾಗಿದ್ದಾರೆ. ಸೆಲ್ಫೀ ಫೋಟೋದಲ್ಲೇ ವಿಶ್ವಾಸ್ ಮುಳುಗುತ್ತಿರುವ ದೃಶ್ಯ ಸೆರೆಯಾಗಿದೆ.

ಘಟನೆಗೆ ಕಾಲೇಜು ಆಡಳೀತ ಮಂಡಳಿಯೇ ಹೊಣೆ ಎಮದು ಆರೋಪಿಸಿರುವ ವಿದ್ಯಾರ್ಥಿಯ ಸಂಬಂಧಿಕರು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಾರಿ ನಿರ್ದೇಶನಾಲಯದಿಂದ ಕಾರ್ತಿ ಚಿದಂಬರಂ ಅಕೌಂಟ್ಸ್,ಆಸ್ತಿ ಜಪ್ತಿ

ನವದೆಹಲಿ: ಆಸ್ತಿ ಮಾರಾಟಕ್ಕೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ...

news

ಪಿಎಂ ಮೋದಿ, ಯೋಗಿ ಅವಧಿಯಲ್ಲಿ ಕೋಮುಗಲಭೆಗಳಲ್ಲಿ ಹೆಚ್ಚಳ: ಮುಲಾಯಂ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಸರಕಾರದ ...

news

ತಿರುಪತಿ ತಿಮ್ಮಪ್ಪನಿಗೆ 1008 ಬಂಗಾರದ ನಾಣ್ಯಗಳ ಹಾರ ಸಮರ್ಪಿಸಿದ ಭಕ್ತ

ದೇಶದ ಅತ್ಯಂತ ಶ್ರೀಮಂತ ದೈವ ತಿರುಪತಿ ತಿಮ್ಮಪ್ಪನಿಗೆ ಅನಿವಾಸಿ ಭಾರತೀಯನೊಬ್ಬ ಬಂಗಾರದ ನಾಣ್ಯಗಳ ಹಾರವನ್ನ ...

news

ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸುವ ನೆಪದಲ್ಲಿ ನವವಧುವಿನ ಮೇಲೆ ರೇಪ್

ಲಕ್ನೋ: ಪತಿಯನ್ನು ದುಷ್ಟಶಕ್ತಿಯಿಂದ ರಕ್ಷಿಸಿ ಸಾವಿನಿಂದ ಕಾಪಾಡುವ ನೆಪದಲ್ಲಿ ಪ್ರಥಮ ರಾತ್ರಿಯಂದು ...

Widgets Magazine
Widgets Magazine